ನಾನು ಹಿಂದೂ ಅಲ್ಲ- ಯಾರಾದ್ರು ಕೇಸ್‌ ಹಾಕಿದ್ರೆ ನನ್ನ ಪರವಾಗಿ ನ್ಯಾಯಮೂರ್ತಿ ಇದ್ದಾರೆ- ಕುಂ.ವೀರಭದ್ರಪ್ಪ

ನಾನು ಹಿಂದೂ ಅಲ್ಲ, ನಾನೊಬ್ಬ ಭಾರತೀಯ. ಬಸವಣ್ಣ ನನಗೆ ಮುಖ್ಯ, ಲಿಂಗಾಯತ ಕಮ್ಯುನಿಟಿಯಿಂದ ಬಂದಂತವನು- ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ 

Written by - Sowmyashree Marnad | Edited by - Yashaswini V | Last Updated : Apr 1, 2022, 11:57 AM IST
  • ಹಿಂದೂ ಅನ್ನೋದು 1824 ರಲ್ಲಿ ಬಂದ ಬಹಳ ಅಪಾಯಕಾರಿ ಶಬ್ಧ.
  • ಈ ದೇಶದಲ್ಲಿ 12 ಸಾವಿರ ಜಾತಿಗಳಿವೆ, ಸಂಸ್ಕೃತಿಗಳಿವೆ.
  • ಇಷ್ಟು ವೈವಿದ್ಯವಾದ ದೇಶ ನನ್ನ ಭಾರತ- - ಕುಂ.ವಿ.ವೀರಭದ್ರಪ್ಪ
ನಾನು ಹಿಂದೂ ಅಲ್ಲ- ಯಾರಾದ್ರು ಕೇಸ್‌ ಹಾಕಿದ್ರೆ ನನ್ನ ಪರವಾಗಿ ನ್ಯಾಯಮೂರ್ತಿ ಇದ್ದಾರೆ- ಕುಂ.ವೀರಭದ್ರಪ್ಪ title=
Iam not hindu- Iam Indian- KumVee

ಬೆಂಗಳೂರು: ನಾನು ವಿದ್ಯಕ್ತವಾಗಿ ಘೋಷಿಸುತ್ತಿದ್ದೇನೆ ನಾನು ಹಿಂದೂ ಅಲ್ಲ, ಇದಕ್ಕಾಗಿ ಯಾರಾದ್ರೂ ನನ್ನ ಮೇಲೆ ಕೇಸ್‌ ಹಾಕಿದ್ರೂ ಪರ್ವಾಗಿಲ್ಲ, ನನ್ನ ಪರವಾಗಿ ಹೋರಾಡಲು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಇದ್ದಾರೆ ಎಂದು ಖ್ಯಾತ ಸಾಹಿತಿ ಕುಂ.ವಿ. ವೀರಭದ್ರಪ್ಪ  (Kum Veerabhadrappa) ಘೋಷಿಸಿದ್ದಾರೆ.

ಲೋಕನಾಯಕ ಜೆ.ಪಿ ವಿಚಾರ‌ ವೇದಿಕೆಯಿಂದ ನಗರದ ಗಾಂಧಿ ಭವನದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಹಿಂದೂ ಅಲ್ಲ, ನಾನೊಬ್ಬ ಭಾರತೀಯ (I am not a Hindu-I am an Indian). ಬಸವಣ್ಣ ನನಗೆ ಮುಖ್ಯ, ಲಿಂಗಾಯತ ಕಮ್ಯುನಿಟಿಯಿಂದ ಬಂದಂತವನು. ಹಿಂದೂ ಅನ್ನೋದು 1824 ರಲ್ಲಿ ಬಂದ ಬಹಳ ಅಪಾಯಕಾರಿ ಶಬ್ಧ. ಈ ದೇಶದಲ್ಲಿ 12 ಸಾವಿರ ಜಾತಿಗಳಿವೆ, ಸಂಸ್ಕೃತಿಗಳಿವೆ. ಇಷ್ಟು ವೈವಿದ್ಯವಾದ ದೇಶ ನನ್ನ ಭಾರತ. ನಾವೆಲ್ಲ ಹಿಂದೂ ಅನ್ನೋದು ಸರಿಯಲ್ಲ. ಮುಸಲ್ಮಾನರು ಕನ್ವರ್ಟ್ ಮಾಡ್ತಾರೆ ಅನ್ನುವ ಆಪಾದನೆ ಸುಳ್ಳು  ಎಂದವರು ತಿಳಿಸಿದರು. 

ಇದನ್ನೂ ಓದಿ- ‘ದೇಶದಲ್ಲಿ ಈಗ ಕೋಮುದ್ವೇಷ ಹೆಚ್ಚುತ್ತಿದೆ, ಸಾಮರಸ್ಯ ಸಾರುವ ಅಗತ್ಯವಿದೆ’

ಬಿಜೆಪಿ ನಾಯಕರನ್ನು ದೆವ್ವಗಳಿಗೆ ಹೋಲಿಕೆ:
ಪ್ರತೀವರ್ಷ ಹಿರಿಯರ ಹಬ್ಬ ಮಾಡಿದ್ಮೇಲೆ ಸುಮ್ಮನಾಗ್ತವೆ ಕೆಲವು ಪ್ರೇತಗಳು. ಇನ್ನು ಕೆಲವು ದೆವ್ವಗಳಿವೆ, ನಾಥುರಾಮ್‌ ಗೋಡ್ಸೆ, ಹೆಗಡೇವ್ವ (ಮುಸೋಲೋನಿಯ ಶಿಷ್ಯರ ಶಿಷ್ಯರು) ಇವೆರೆಲ್ಲ ಬಹಳ ಸಜ್ಜನರು. ಆದ್ರೆ ಮೈಯೊಳಗೆ ದೆವ್ವ ಹೋದಾಗ ಮುಸ್ಲಿಂ ವಿರೋಧಿ ಹೇಳಿಕೆ ಕೊಡಲು ಶುರು ಮಾಡ್ತಾರೆ. ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ ಅಂತೂ ಎಜುಕೇಟೆಡ್‌, ಇತ್ತೀಚೆಗೆ ಪಂಕ್ಷರ್‌ ಹೇಳಿಕೆ ಕೊಡ್ತಾರೆ, ರೇಣುಕಾಚಾರ್ಯ ಅಂತೂ ಇನ್ನೊಂದ್‌ ರೀತಿ ಹೇಳಿಕೆ, ಬಿಜಾಪುರದ ಬಸವರಾಜ್ ಯತ್ನಾಳ್‌ ಅಂತೂ ಪಾಕಿಸ್ತಾನಕ್ಕೆ ಹೋಗ್ರಿ ಅನ್ನೋ ಹೇಳೀಕೆ ಕೊಡ್ತಾರೆ. ಪಾಕಿಸ್ತಾನ ಅಂದ್ರೆ ಕಸದ ತೊಟ್ಟಿ ಅಲ್ಲ, ಅದೂ ಒಂದು ದೇಶ ಎಂದು ಸಾಹಿತಿ ಕುಂ.ವಿ. ವೀರಭದ್ರಪ್ಪ  (KumVee Veerabhadrappa) ಹೇಳಿದರು.

ಇದನ್ನೂ ಓದಿ- ಕರ್ನಾಟಕದಲ್ಲಿ ₹ 6000 ಕೋಟಿ ಹೂಡಿಕೆಗೆ ಮುಂದಾದ ಎಕ್ಸೈಡ್ ಇಂಡಸ್ಟ್ರೀಸ್

ನಮ್ಮ, ಮುಸ್ಲಿಮರ ಎಲ್ಲರ ಡಿಎನ್‌ಎ ಒಂದೇ. ಇವರೆಲ್ಲ ಬೇರೆಡೆಯಿಂದ ಬಂದವರಲ್ಲ, ಇಲ್ಲಿಯವರೇ ಎಂದರು.ಇನ್ನು ತಾನು ನಾಸ್ತಿಕ, ದೇವರ ಪೂಜೆ ಮಾಡುವುದಿಲ್ಲ. ಯಾರಾದರು ಕೇಸ್‌ ಹಾಕುವುದಿದ್ದರೆ ಹಾಕಲಿ. ಆದರೆ ಮುಸ್ಲಿಮರ ಪರ ದರ್ಗಾಕ್ಕೆ ಹೋಗಿದ್ದೇನೆ ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಬಂದ್ಮೇಲೆ ಎಲ್ಲಾ ಸಮಸ್ಯೆ ಪರಿಹಾರ ಆಗ್ಬಹುದು ಅಂದುಕೊಂಡಿದ್ದೆ, ಆದರೇ ಅವರೇ ಇವಕ್ಕೆಲ್ಲ ಸಪೋರ್ಟ್‌ ಮಾಡ್ತಿದಾರೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನಿಗೆ ಹುತಾತ್ಮ ಪಟ್ಟ ಕಟ್ತಾರಂದ್ರೆ ಯಾವ ಉಚ್ಛ ಮಂತ್ರಿಗಳಯ್ಯಾ ಇವರು ಎಂದು ಸಿಎಂ ವಿರುದ್ಧ ಅವರು ಅಸಮಾಧಾನ ಹೊರಹಾಕಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News