ಬೆಂಗಳೂರು: ಆಡಳಿತಾರೂಢ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ(Anti-Conversion Bill) ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದ್ದಾರೆ. CLP ಸಭೆ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಮತಾಂತರ ಬಿಲ್​ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ಮಾಡಲಾಗುವುದು’ ಅಂತಾ ಎಚ್ಚರಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಬಿಜೆಪಿ ಸರ್ಕಾರ(BJP Government) ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಗೆ ತಂದರೆ ಕಾಂಗ್ರೆಸ್ ವಿರೋಧಿಸಲಿದೆ. ಸದನದ ಒಳಗೂ, ಹೊರಗೂ ಹೋರಾಟ ನಡೆಸಲಿದೆ. ಕಾಯಿದೆ ಬಗ್ಗೆ ಸಂಪುಟದಲ್ಲೇ ಭಿನ್ನಾಭಿಪ್ರಾಯಗಳಿವೆ, ಏಕೆಂದರೆ ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈಗಾಗಲೇ ಇರುವ ಕಾಯ್ದೆಯನ್ನೇ ಸರಿಯಾಗಿ ಜಾರಿ ಮಾಡಲಿ, ಹೊಸ ಕಾಯ್ದೆಯ ಅಗತ್ಯ ಏನಿದೆ?’ ಅಂತಾ ಡಿಕೆಶಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಒಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ, ಮಾಸ್ಕ್-ಸಾಮಾಜಿಕ ಅಂತರ ಅತ್ಯಗತ್ಯ: ಆರೋಗ್ಯ ಸಚಿವ ಸುಧಾಕರ್


ಮತಾಂತರ ನಿಷೇಧ ಮಸೂದೆ(Anti-Conversion Bill) ವಿಚಾರವಾಗಿ ಕಾಂಗ್ರೆಸ್ ನಿಲುವು ಖಡಾಖಂಡಿತವಾಗಿಗೂ ವಿರೋಧವಿದೆ. ಈ ಮಸೂದೆ ಜಾರಿಗೆ ನಾವು ಅನುಮತಿ ನೀಡುವುದಿಲ್ಲ. ಇದನ್ನು ವಿರೋಧಿಸಿ ನಾವು ಸದನದ ಒಳಗೆ ಮತ್ತು ಹೊರಗಡೆ ಪ್ರತಿಭಟನೆ ನಡೆಸುತ್ತೇವೆ. ಈಗಾಗಲೇ ಕಾನೂನು ಇದೆ, ಇರುವ ಕಾನೂನನ್ನೇ ಪ್ರಯೋಗ ಮಾಡಬೇಕು. ಹೊಸದಾಗಿ ಜಾರಿಗೆ ತರುವ ಅಗತ್ಯವೇನಿಲ್ಲ. ಸುಮ್ಮನೇ ಈ ಬಗ್ಗೆ ಚುಚ್ಚಿ ಚುಚ್ಚಿ ಬೇರೊಂದು ಸಮುದಾಯದ ಜನರಿಗೆ ನೋವು ತರುವುದು ಸರಿಯಲ್ಲ’ ಅಂತಾ ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.


Water: ವಿಷವಾಯ್ತು ಜೀವಜಲ: ಕರುನಾಡಿನ ಕೊಳವೆ ಬಾವಿಗಳಲ್ಲಿ 'ಅಣುಬಾಂಬ್'..!


‘ಇಡೀ ದೇಶಕ್ಕೆ ಕರ್ನಾಟಕವೇ ಅತಿಹೆಚ್ಚು ಆದಾಯ ನೀಡುತ್ತಿದೆ. ತೆರಿಗೆ, ಶಿಕ್ಷಣ ಉದ್ಯೋಗ ಹೀಗೆ ಎಲ್ಲದರಲ್ಲೂ ನಾವು ಬಹಳ ಮುಂದಿದ್ದೇವೆ. ಚುನಾವಣೆಗೋಸ್ಕರ ಇಲ್ಲದೆ ಇರುವುದನ್ನು ಸೃಷ್ಟಿ ಮಾಡಿದರೆ ಸಮಸ್ಯೆಯುಂಟಾಗುತ್ತದೆ. ಈ ರೀತಿಯ ಬಿಜೆಪಿ(BJP) ಅಜೆಂಡಾವನ್ನು ಕಾಂಗ್ರೆಸ್ ಸಹಿಸುವುದಿಲ್ಲ’ವೆಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.