Water: ವಿಷವಾಯ್ತು ಜೀವಜಲ: ಕರುನಾಡಿನ ಕೊಳವೆ ಬಾವಿಗಳಲ್ಲಿ 'ಅಣುಬಾಂಬ್'..!

ಅಂತರ್ಜಲದ ರಾಸಾಯನಿಕ ಅಧ್ಯಯನದಲ್ಲಿ ಈ ಶಾಕಿಂಗ್ ಸಂಗತಿ ಬಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಹೇಳುವಂತೆ ಗರಿಷ್ಠ ಸಾಂದ್ರತೆ ಮಿತಿ ಪ್ರತಿ ಲೀಟರ್ ಗೆ 30 ಮೈಕ್ರೋಗ್ರಾಂ (μg/l) ಇರಬೇಕು, ಹಾಗೇ ಭಾರತೀಯ ಅಣ್ವಸ್ತ್ರ ಶಕ್ತಿ ನಿಯಂತ್ರಣ ಸಂಸ್ಥೆಯ ಹೇಳುವಂತೆ 60 ಮೈಕ್ರೋಗ್ರಾಂ ಇದ್ದರೂ ಪರವಾಗಿಲ್ಲ.ಆದರೆ ಸದ್ಯ ಕರ್ನಾಟಕದ 73 ಗ್ರಾಮಗಳಲ್ಲಿ ಶೇಕಡ 78 ರಷ್ಟು ಯುರೇನಿಯಂ ಸಾಂದ್ರತೆ ಇದೆ. 

Written by - Zee Kannada News Desk | Last Updated : Dec 15, 2021, 10:39 AM IST
  • ಕರ್ನಾಟಕದ ಬರೋಬ್ಬರಿ 73 ಗ್ರಾಮಗಳ ಕುಡಿಯುವ ನೀರಿನಲ್ಲಿ ಯುರೇನಿಯಂ & ಥೋರಿಯಂ ಪತ್ತೆ
  • ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
  • ಈ ಹಳ್ಳಿಗಳ 1 ಲೀಟರ್ ನೀರಿನಲ್ಲಿ ಸಾವಿರಕ್ಕೂ ಹೆಚ್ಚು ಮೈಕ್ರೋಗ್ರಾಂ ಯುರೇನಿಯಂ ಅಂಶ ಪತ್ತೆ
Water: ವಿಷವಾಯ್ತು ಜೀವಜಲ: ಕರುನಾಡಿನ ಕೊಳವೆ ಬಾವಿಗಳಲ್ಲಿ 'ಅಣುಬಾಂಬ್'..! title=
Uranium & thorium detection in drinking water

ಬೆಂಗಳೂರು: ನಿಮಗೆಲ್ಲಾ 'ಅಣುಬಾಂಬ್' ಗೊತ್ತಲ್ವಾ..? ಜಗತ್ತಿನ ವಿನಾಶಕಾರಿ ಅಸ್ತ್ರ ಇದು. ಈ ಅಸ್ತ್ರ ಯುದ್ಧಗಳಲ್ಲಿ ಬಳಸೋದು ಮಾಮೂಲು. ಆದರೆ ಈ 'ಅಣುಬಾಂಬ್' ಕನ್ನಡಿಗರು ಬಳಸೋ ಜೀವಜಲ ಅಂದರೆ ನೀರಿನಲ್ಲಿ ಬೆರೆತು ಹೋಗಿದೆಯಂತೆ.

ಹೌದು, ಇದು ಶಾಕಿಂಗ್ ಸುದ್ದಿಯಾದರೂ ನಂಬಲೇಬೇಕಾದ ಕಟು ಸತ್ಯ. ಕರ್ನಾಟಕದ ಬರೋಬ್ಬರಿ 73 ಗ್ರಾಮಗಳ ಕುಡಿಯುವ ನೀರಿನಲ್ಲಿ ಯುರೇನಿಯಂ & ಥೋರಿಯಂ (Uranium & thorium) ಪತ್ತೆಯಾಗಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ. ಏಕೆಂದರೆ ಯುರೇನಿಯಂ ಹಾಗೂ ಥೋರಿಯಂನ ಅಣುಸ್ಥಾವರಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಯುರೇನಿಯಂ ಬಳಸಿ ಅಣುಬಾಂಬ್ ತಯಾರಿಸೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ವಿಷಕಾರಕ ಅಂಶಗಳು ಕರ್ನಾಟಕದ ಹಳ್ಳಿಗಳ ನೀರಿನಲ್ಲಿ ಬೆರೆತು ಹೋಗಿವೆಯಂತೆ.

ವಿಷವಾಗುತ್ತಿದೆ ನೀರು :
ಅಂತರ್ಜಲದ ರಾಸಾಯನಿಕ ಅಧ್ಯಯನದಲ್ಲಿ ಈ ಶಾಕಿಂಗ್ ಸಂಗತಿ ಬಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಹೇಳುವಂತೆ ಗರಿಷ್ಠ ಸಾಂದ್ರತೆ ಮಿತಿ ಪ್ರತಿ ಲೀಟರ್ ಗೆ 30 ಮೈಕ್ರೋಗ್ರಾಂ (μg/l) ಇರಬೇಕು, ಹಾಗೇ ಭಾರತೀಯ ಅಣ್ವಸ್ತ್ರ ಶಕ್ತಿ ನಿಯಂತ್ರಣ ಸಂಸ್ಥೆಯ ಹೇಳುವಂತೆ 60 ಮೈಕ್ರೋಗ್ರಾಂ ಇದ್ದರೂ ಪರವಾಗಿಲ್ಲ.ಆದರೆ ಸದ್ಯ ಕರ್ನಾಟಕದ 73 ಗ್ರಾಮಗಳಲ್ಲಿ ಶೇಕಡ 78 ರಷ್ಟು ಯುರೇನಿಯಂ ಸಾಂದ್ರತೆ ಇದೆ. ಇದು ಗ್ರಾಮೀಣ ಜನರ ಆರೋಗ್ಯಕ್ಕೆ ಕುತ್ತು ತರುವ ಜೊತೆಗೆ, ಭವಿಷ್ಯದಲ್ಲಿ ಅಂತರ್ಜಲ ಬಳಕೆಗೂ ಗಂಡಾಂತರ ಎದುರಾಗುವಂತೆ ಮಾಡಿದೆ.

ಇದನ್ನೂ ಓದಿ-  Warm Water: ನೀವೂ ಪದೇ ಪದೇ ಬಿಸಿ ನೀರು ಕುಡಿಯುತ್ತೀರಾ, ಅದರ ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ!

'ನೈಸರ್ಗಿಕ' ಕಾರಣಗಳು..!
ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೇರಿದಂತೆ ಮಂಗಳೂರು ವಿವಿಯ ಪರಿಸರ ವಿಕಿರಣಶೀಲತೆ ಉನ್ನತ ಸಂಶೋಧನಾ ಕೇಂದ್ರ ಈ ಅಧ್ಯಯನ ನಡೆಸಿದೆ. ಆದರೆ ಈ ವರದಿಯ ಪ್ರಕಾರ ಕರ್ನಾಟಕದ ಅಂತರ್ಜಲದಲ್ಲಿ ಯುರೇನಿಯಂ ಹಾಗೂ ಥೋರಿಯಂ, ಸೀಸ ಸೇರಿದಂತೆ ವಿಷಕಾರಿ ಅಂಶಗಳು ಹೆಚ್ಚಾಗಲು ನೈಸರ್ಗಿಕ ಚಟುವಟಿಕೆಗಳೇ ಕಾರಣ ಎಂದಿದೆ.

ಯಾವ ರೋಗ ಬರುತ್ತದೆ..?
ಯುರೇನಿಯಂ ಹಾಗೂ ಥೋರಿಯಂ ಸೀಸಕ್ಕಿಂತಲೂ ಕಾರ್ಕೋಟಕ ವಿಷಗಳು. ಅದರಲ್ಲೂ ಯುರೇನಿಯಂನ ಹಾಗೇ ಸುಮ್ಮನೆ ವಾತಾವರಣದಲ್ಲಿ ಇಟ್ಟರೂ ಸಾಕು ವಿಕಿರಣ ಹೊರಸೂಸಿ ಕರಗಿ ಹೋಗುತ್ತದೆ. ಇಂತಹ ವಿಷ ದೇಹ ಸೇರಿದರೆ ದೊಡ್ಡ ಗಂಡಾಂತರ ಎದುರಾಗಬಹುದು. ಶುರುವಿನಲ್ಲಿ ಜ್ವರ, ತಲೆನೋವು, ವಾಂತಿಯಂತಹ ಸಣ್ಣ ಪುಟ್ಟ ಕಾಯಿಲೆ ಕಾಣಿಸಿದರೂ, ಭವಿಷ್ಯದಲ್ಲಿ ಮೂಳೆ, ಶ್ವಾಸಕೋಶ ಮತ್ತು ಲಿವರ್ ಕ್ಯಾನ್ಸರ್ ಗೂ ಇಂತಹ ಯುರೇನಿಯಂ ಮಿಶ್ರಿತ ವಿಷನೀರು ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Drinking Water: ನಿಂತು ನೀರು ಕುಡಿಯುವುದರಿಂದ ದೇಹದ ಮೇಲೆ ಎಂಥ ಪರಿಣಾಮ ಬೀರುತ್ತೆ, ತಪ್ಪದೇ ತಿಳಿಯಿರಿ

ಯಾವ ಯಾವ ಜಿಲ್ಲೆಗಳಲ್ಲಿ ಆತಂಕ..?
ಯುರೇನಿಯಂ ಅಂಶದ ಬಗ್ಗೆ ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ಅಧ್ಯಯನ ನಡೆಸಲಾಗಿದೆ. ಹೀಗೆ ಅಂತರ್ಜಲ ಪರಿಶೀಲನೆ ನಡೆಸಿರುವ 48 ಹಳ್ಳಿಗಳ ಪೈಕಿ 48 ಹಳ್ಳಿಗಳ ನೀರಲ್ಲಿ ಮಿತಿ ಮೀರಿದ ಯುರೇನಿಯಂ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 7, ಕೋಲಾರದ 5 ಹಾಗೂ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ತಲಾ ಒಂದೊಂದು  ಹಳ್ಳಿಯಲ್ಲಿ ವಿಪರೀತ ಯುರೇನಿಯಂ ಪತ್ತೆಯಾಗಿದೆ. ಅಂದರೆ ಈ ಹಳ್ಳಿಗಳ 1 ಲೀಟರ್ ನೀರಿನಲ್ಲಿ ಸಾವಿರಕ್ಕೂ ಹೆಚ್ಚು ಮೈಕ್ರೋಗ್ರಾಂ ಯುರೇನಿಯಂ ಅಂಶ ಪತ್ತೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News