DK Suresh : ಮೇಕೆದಾಟು ಪಾದಯಾತ್ರೆ :ಬಂಟಿಂಗ್- ಬ್ಯಾನರ್ ತೆರವು; ಡಿಕೆ ಸುರೇಶ್ ಅಧಿಕಾರಿಗೆ ಆವಾಜ್!
ಮೈಸೂರು ರಸ್ತೆಯ ನೈಸ್ ರೋಡ್ ಬಳಿ ಕಾಂಗ್ರೆಸ್ ಹಾಕಿದಂತ ಬಂಟಿಂಗ್ ಮತ್ತು ಬ್ಯಾನರ್ ಗಳನ್ನ ಬಿಬಿಎಂಪಿ ಸಿಬ್ಬಂದಿ ತೆರವುಗೊಳಸುತ್ತಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು : ಮೇಕೆದಾಟು ಪಾದಯಾತ್ರೆ 2.0 ಬೆಂಗಳೂರಿಗೆ ನಾಳೆ ತಲುಪಾಲಿದ್ದು, ಮೈಸೂರು ರಸ್ತೆಯ ನೈಸ್ ರೋಡ್ ಬಳಿ ಕಾಂಗ್ರೆಸ್ ಹಾಕಿದಂತ ಬಂಟಿಂಗ್ ಮತ್ತು ಬ್ಯಾನರ್ ಗಳನ್ನ ಬಿಬಿಎಂಪಿ ಸಿಬ್ಬಂದಿ ತೆರವುಗೊಳಸುತ್ತಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನೈಸ್ ರಸ್ತೆ ಬಳಿ ಬಂದ ಸಂಸದ ಸುರೇಶ್(DK Suresh), ಅಧಿಕಾರಿಗೆ ಮೊದಲು ನಿಮ್ಮ ಬಿಜೆಪಿ ನಾಯಕರ ಬ್ಯಾನರ್ ತೆರವು ಮಾಡಿ. ನಂತರ ನಮ್ಮ ಬಳಿ ಬನ್ನಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುರೇಶ್ ಜೊತೆ ಬಂದ ಕಾಂಗ್ರೆಸ್ ಕಾರ್ಯಕರ್ತ ಮನೋಹರ್, ನೀವು ಬಿಜೆಪಿ ಏಜೆಂಟ್ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ: ಜಮೀರ್ ಅಹ್ಮದ್ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ..!?
ಮೇಕೆದಾಟು 2.0 ಸಂಬಂಧಿಸಿದ ಬ್ಯಾನರ್ ಗಳನ್ನ ಬಿಬಿಎಂಪಿ(BBMP) ಯಾವುದೇ ಪರವಾನಿಗೆ ಇಲ್ಲದೆ ಹಾಕಿದ್ದಾರೆ ಎಂದು ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಿತ್ತು, ಅಲ್ಲಿ ಇದ್ದಂತ ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಅವರ ಜೊತೆ ವಾಗ್ವಾದ ನಡೆಸಿ ಹಿರಿಯ ಮುಖಂಡರಿಗೆ ವಿಷಯ ತಿಳಿಸಿದರು. ಕೂಡಲೇ ಸಂಸದ ಡಿಕೆ ಸುರೇಶ್ ಜೊತೆ ಮಾಜಿ ಸಚಿವ ಎಚ್ ಎಂ ರೇವಣ್ಣ ಸ್ಥಳಕ್ಕೆ ಆಗಮಿಸಿ, ಇದ್ದ ಪೊಲೀಸ್ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಸದ್ಯ ಈಗ ಮತ್ತೆ ಬ್ಯಾನರ್ ಗಳನ್ನ ಹಾಗೆ ಬಿಟ್ಟು ಸಿಬ್ಬಂದಿ ಹೊರಟರು, ಹಾಗೂ ತೆರವುಗೊಳಿದ ಬ್ಯಾನರ್ ಗಳನ್ನ ಮತ್ತೆ ಬಿಬಿಎಂಪಿ ಸಿಬ್ಬಂದಿಯಿಂದ ಕಟ್ಟಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ