ಬೆಂಗಳೂರು: ಮೇಕೆದಾಟು ಪಾದಯಾತ್ರೆ ಎಂಬುದು ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ ಎಂದು ಬಿಜೆಪಿ ಟೀಕಿಸಿದೆ.
#ಸುಳ್ಳಿನಜಾತ್ರೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ(Mekedatu Project) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಮೇಕೆದಾಟು ಪಾದಯಾತ್ರೆ ಎಂಬುದು ಈಗ ಡಿ.ಕೆ.ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ. ಮೂವತ್ತು ದಿನದಲ್ಲಿ ಇಂಗ್ಲಿಷ್ ಕಲಿಯುವುದು ಹೇಗೆ? ಎಂಬಂತಹ ಪುಸ್ತಕಗಳ ರೀತಿಯಲ್ಲಿ ‘ಪಾದಯಾತ್ರೆ ಮೂಲಕ ನಾಯಕರಾಗಿ’ ಎಂಬ ಪುಸ್ತಕ ಬರೆಯಬಹುದೇನೋ!?’ ಅಂತಾ ವ್ಯಂಗ್ಯವಾಡಿದೆ.
ಮೇಕೆದಾಟು ಪಾದಯಾತ್ರೆ ಎಂಬುದು ಈಗ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ.
ಮೂವತ್ತು ದಿನದಲ್ಲಿ ಇಂಗ್ಲೀಷ್ ಕಲಿಯುವುದು ಹೇಗೆ? ಎಂಬಂತಹ ಪುಸ್ತಕಗಳ ರೀತಿಯಲ್ಲಿ "ಪಾದಯಾತ್ರೆ ಮೂಲಕ ನಾಯಕರಾಗಿ" ಎಂಬ ಪುಸ್ತಕ ಬರೆಯಬಹುದೇನೋ!?#ಸುಳ್ಳಿನಜಾತ್ರೆ
— BJP Karnataka (@BJP4Karnataka) February 28, 2022
ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ
‘ರಣದೀಪ್ ಸಿಂಗ್ ಸುರ್ಜೇವಾಲಾ(Randeep Surjewala) ಅವರೇ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಸ್ಥಿತಿ ‘ಆಕಾಶ ನೋಡುವುದಕ್ಕೆ ನೂಕು ನುಗ್ಗಲು’ ಎಂಬಂತಾಗಿದೆ. ನೀವು ಯಾರ ವಿರುದ್ಧ ಹೋರಾಟ ನಡೆಸಬೇಕೆಂಬುದನ್ನು ಮೊದಲು ನಿರ್ಧರಿಸಿ. ಆ ಮೇಲೆ ಪಾದಯಾತ್ರೆ ನಾಟಕ ಮುಂದುವರಿಸಿ’ ಅಂತಾ ಕುಟುಕಿದೆ.
ಸುರ್ಜೇವಾಲಾ ಅವರೇ, ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಸ್ಥಿತಿ "ಆಕಾಶ ನೋಡುವುದಕ್ಕೆ ನೂಕು ನುಗ್ಗಲು" ಎಂಬಂತಾಗಿದೆ.
ನೀವು ಯಾರ ವಿರುದ್ಧ ಹೋರಾಟ ನಡೆಸಬೇಕೆಂಬುದನ್ನು ಮೊದಲು ನಿರ್ಧರಿಸಿ. ಆ ಮೇಲೆ ಪಾದಯಾತ್ರೆ ನಾಟಕ ಮುಂದುವರಿಸಿ.#ಸುಳ್ಳಿನಜಾತ್ರೆ
— BJP Karnataka (@BJP4Karnataka) February 28, 2022
‘ಕಾವೇರಿ ನೀರಿನ ಪ್ರತಿ ಹನಿಯಲ್ಲೂ ಈ ಭಾಗದ ಜನರ(Mekedatu Padayatre) ಹಕ್ಕಿದೆ. ಇದು ಚಲಾವಣೆಯಾಗಬೇಕು. ಆದರೆ ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಇದಕ್ಕೆ ಅಡ್ಡಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ. ಒಂದು ರಾಜ್ಯದ ಉಸ್ತುವಾರಿಯಾದವರಿಗೆ ಕನಿಷ್ಠ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದ’ ಅಂತಾ ಬಿಜೆಪಿ(BJP) ಟ್ವೀಟ್ ಮಾಡಿದೆ.
ಕಾವೇರಿ ನೀರಿನ ಪ್ರತಿ ಹನಿಯಲ್ಲೂ ಈ ಭಾಗದ ಜನರ ಹಕ್ಕಿದೆ. ಇದು ಚಲಾವಣೆಯಾಗಬೇಕು. ಆದರೆ ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಇದಕ್ಕೆ ಅಡ್ಡಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿದ್ದಾರೆ.
ಒಂದು ರಾಜ್ಯದ ಉಸ್ತುವಾರಿಯಾದವರಿಗೆ ಕನಿಷ್ಠ ಮಾಹಿತಿ ಇಲ್ಲದಿರುವುದು ಹಾಸ್ಯಾಸ್ಪದ.#ಸುಳ್ಳಿನಜಾತ್ರೆ
— BJP Karnataka (@BJP4Karnataka) February 28, 2022
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ : ರಂಗೋಲಿ ಬಿಡಿಸಿ ಪಾದಯಾತ್ರಿಗಳ ಸ್ವಾಗತ; ಬಾಯಾರಿಕೆಗೆ ಎಳನೀರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.