ಆಪರೇಷನ್ ಕಮಲ ಆಫರ್ ಮಾಡಿದ ಮಗನಿಗೆ ಗ್ರಹಚಾರ ಬಿಡಿಸ್ತೀನಿ: ಶಾಸಕ ಸಿ.ಪುಟ್ಟರಂಗಶೆಟ್ಟಿ
Operation Kamala: ಬಿಜೆಪಿಗರು ಎಲ್ಲರೂ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರೆ, ನಾನು ಎಲ್ಲವನ್ನೂ ನೇರವಾಗಿ ಹೇಳ್ತಿನಿ, ಬಿಜೆಪಿಗರು ಮೋಸಗಾರರು. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನ ರಾಜಕೀಯ ಜೀವನವನ್ನೇ ಅತಂತ್ರ ಸ್ಥಿತಿಗೆ ತಂದು ಬಿಟ್ಟರು.
MLA C Puttarangashetty On Operation Kamala: ಆಪರೇಷನ್ ಕಮಲ ಎಂಬುದು ಹೊಸದೇನಲ್ಲ, ರಾಜಕೀಯವನ್ನು ಕಲುಷಿತ ಮಾಡಿದವರೇ ಬಿಜೆಪಿಯವರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ (MLA C Puttarangashetty), ಅಪರೇಷನ್ ಕಮಲ (Operation Kamala) ಹೆಸರಲ್ಲಿ ನನಗೇ ಯಾವ ಮಗನೂ ಆಫರ್ ಮಾಡಲ್ಲ, ಏನಾದರೂ ಮಾಡಿದರೇ ಅವನ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ಮಾತುಗಳಾನ್ನಾಡಿದರು.
ಇದನ್ನೂ ಓದಿ- ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬಿಜೆಪಿ ಅವರಿಗೆ ನೂರಾರು ಕೋಟಿ ಕೊಟ್ಟು ಶಾಸಕರನ್ನು ಖರೀದಿ ಮಾಡುವುದು ಹೊಸದೇನಲ್ಲ. ರಾಜಕೀಯ ಕಲುಷಿತ ಆಗಲು ಬಿಜೆಪಿಯೇ ಕಾರಣ, 2008 ರಿಂದ ಆಪರೇಷನ್ ಕಮಲ (Operation Kamala) ಆರಂಭ ಮಾಡಿದ್ರು, ಅಂದಿನಿಂದ ಎಲ್ಲರ ಮಾನ ಮರ್ಯಾದೆ ಹೋಯ್ತು. ಇದರಿಂದ ನಮ್ಮಂಥ ನಿಷ್ಠಾವಂತರನ್ನೂ ಜನರು ಕ್ಯಾಕರಿಸಿ ಉಗಿಯುವ ಸ್ಥಿತಿ ಬಂದಿದೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿಗರು ನೇರವಾಗಿ ಯಾರು ಮುಖ್ಯ ಮಂತ್ರಿ ಆಗಿದ್ದಾರೆ. ?
ಬಿಜೆಪಿಗರು ಎಲ್ಲರೂ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆದವರೆ, ನಾನು ಎಲ್ಲವನ್ನೂ ನೇರವಾಗಿ ಹೇಳ್ತಿನಿ, ಬಿಜೆಪಿಗರು ಮೋಸಗಾರರು. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನ ರಾಜಕೀಯ ಜೀವನವನ್ನೇ ಅತಂತ್ರ ಸ್ಥಿತಿಗೆ ತಂದು ಬಿಟ್ಟರು. ಇವಾಗ ಅವನು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ- ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೇರೆ ಶಾಸಕರಿಗೆ ಆಫರ್ ಇರಬಹುದು, ಅದರ ಮಾಹಿತಿ ನನಗಿಲ್ಲ. ಆದ್ರೆ ಈ ಸರ್ಕಾರವನ್ನು ಬೀಳಿಸುವುದು ಸಾಧ್ಯವಿಲ್ಲ ಎಂದರು.
ಸಿಎಂಗೆ ಕ್ಲೀನ್ ಚಿಟ್ ಸಿಗಲಿದೆ:
ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯಕ್ಕೆ ಮಾತನಾಡಿ, ನಾಳೆ ಸಿಎಂ ಗೆ ಕ್ಲೀನ್ ಚಿಟ್ ಆಗಲಿದೆ, ನಿರಾಣಿ, ಜೊಲ್ಲೆ ಅವರೆಲ್ಲರೂ ಕೊಳಚೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಹಕಾರದಿಂದ ಸಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ಅಷ್ಟು ಸುಲಭವಾಗಿ ಯಶಸ್ಸು ಕಾಣಲ್ಲ. ಇದರಲ್ಲಿ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಆದ್ರೆ ನ್ಯಾಯ ಪರ ಇದೆ, ನಾಳೆ ನ್ಯಾಯಾಲಯ ಸಿಎಂ ಗೆ ಕ್ಲೀನ್ ಚಿಟ್ ನೀಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.