ಮೈಸೂರು: ಆನೆ ಹೋಗುತ್ತೆ ನಾಯಿ ಬೊಗಳುತ್ತೆ. ಅದರಿಂದ ಏನು ಆಗೋಲ್ಲ. ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ ವಿಚಾರಕ್ಕೆ ಹೆಚ್.ಸಿ.ಮಹದೇವಪ್ಪ ಖಾರವಾದ ಪ್ರತಿಕ್ರಿಯೆ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾತನಾಡಿದ ಹೆಚ್.ಸಿ.ಮಹದೇವಪ್ಪ(HC Mahadevappa), ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ದ ದೂಷಣೆ ಮಾಡಿದ್ರು, ಘೋಷಣೆಯನ್ನೂ ಕೂಗಿದ್ರು, ಆದ್ರೆ ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯ್ತಾ? ಹಾಗೆಯೇ ಸಿದ್ದರಾಮಯ್ಯ ವಿರುದ್ಧ ಕೂಗಿದ ಘೋಷಣೆಗೆ ಮಹತ್ವ ಕೊಡಬೇಕಿಲ್ಲ ಅಂತ ಹೇಳಿದ್ರು. ತನ್ವೀರ್ ವಿರುದ್ದ ಕೂಗಿಗೆ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ.


BS Yediyurappa: ಹುಟ್ಟುಹಬ್ಬದ ದಿನ ರಾಜಹುಲಿ ಮನೆ ಮುಂದೆ ನಿಂತ ಘರ್ಜಿಸುವ ಸಿಂಹ..!


ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದು ದುರಾದೃಷ್ಟಕರ ವಿಚಾರ. ಸಿದ್ದರಾಮಯ್ಯ(Siddaramaiah) ಒಬ್ಬ ಶ್ರೇಷ್ಠ ನಾಯಕ. ಬಡವರ ಬಗ್ಗೆ ಅಪಾರ ಕಾಳಜಿ ಇದ . ಜನರ ನಾಡಿಮಿಡಿತಗಳನ್ನ ಸಿದ್ದರಾಂಯ್ಯ ಚೆನ್ನಾಗಿ ಅರಿತಿದ್ದಾರೆ. ನಾಡಿನ ಅಗ್ರಗಣ್ಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಪಕ್ಷದಲ್ಲಿ ಕೆಲ ಅಸಮಾಧಾನ ಭುಗಿಲೇಳೋದು ಸರ್ವೇಸಾಮಾನ್ಯ, ಕಾರ್ಯಕರ್ತರು ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ರು. ಅವರನ್ನು ಅರ್ಥ ಮಾಡಿಕೊಳ್ಳದೆ ಕೆಲವರು ಘೋಷಣೆ ಕೂಗಿದ್ದು ಸರಿಯಲ್ಲ. ಈ ರೀತಿ ಬೆಳವಣಿಗೆ ಸ್ಥಳೀಯ ಕಾಂಗ್ರೆಸ್ ಸಂಘಟನೆಗೆ ಆರೋಗ್ಯಕರವಲ್ಲ. ಸಿದ್ದರಾಮಯ್ಯ ಅವ್ರ ವರ್ಚಸ್ಸಿಗೆ ಯಾರೂ ಕೂಡ ಧಕ್ಕೆ ತರೋದಕ್ಕೆ ಆಗೋದಿಲ್ಲ. ಕೆಪಿಸಿಸಿ ಅಧ್ಯಕ್ಷರು ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.


Karnataka Bandh: ಮಾರ್ಚ್‌ 27 ಕ್ಕೆ 'ಕರ್ನಾಟಕ ಬಂದ್'..!


ಹೀಗಾಗಿ ತನ್ವೀರ್(Tanveer Sait) ಹಾಗೂ ಕಾರ್ಯಕರ್ತರ ಅಂತ ಅವರೇ ಕ್ರಮಕೈಗೊಳ್ತಾರೆ ಅಂತ ಮಹದೇವಪ್ಪ ಹೇಳಿದ್ರು. ಒಟ್ಟಿನಲ್ಲಿ ನಿನ್ನೆ ಸಿದ್ದು ಬೆಂಬಲಿಗರು ತನ್ವೀರ್ ವಿರುದ್ಧ ರೊಚ್ಚಿಗೆದ್ದ ಬೆನ್ನಲ್ಲೇ ಇವತ್ತು ಸ್ನೇಹಿತ ಮಹದೇವಪ್ಪ ಕೂಡ ಆಪ್ತ ಸ್ನೇಹಿತನ ಪರ ಬ್ಯಾಟ್ ಬೀಸಿದ್ದು, ಮೈಸೂರು ಕೈ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಸಾಬೀತಾಗ್ತಿದೆ.


CP Yogeshwar: ಕುಮಾರಸ್ವಾಮಿ ಬಗ್ಗೆ 'ಹೊಸ ಬಾಂಬ್' ಸಿಡಿಸಿದ ಸಚಿವ ಯೋಗೀಶ್ವರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.