ಬೆಂಗಳೂರು: ಕರ್ನಾಟಕ- ತಮಿಳುನಾಡು ನಡುವಿನ ಜಲವಿವಾದ ವಿಚಾರವಾಗಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿ ಮಾರ್ಚ್ 27 ಕ್ಕೆ ಕರ್ನಾಟಕ ಬಂದ್ ಕರೆಯನ್ನು ವಾಟಾಳ್ ನಾಗರಾಜ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಗಂಭೀರತೆ ಅರ್ಥವಾಗ್ತಿಲ್ಲ, ನಮಗೆ ಅರ್ಥವಾಗ್ತಿದೆ ಕರ್ನಾಟಕ ರಾಜ್ಯ (Karnataka State)ಕ್ಕೆ ನಾನಾ ದಿಕ್ಕುಗಳಿಂದ ತೊಂದರೆ ಆಗಿದೆ. ಯಾವುದಕ್ಕೂ ಸರ್ಕಾರ ಪರಿಣಾಮಕಾರಿಯಾಗಿ ಚಿಂತನೆ ಮಾಡ್ತಿಲ್ಲ, ಇದು ಆಘಾತಕಾರಿ ಎಂದು ಕಿಡಿಕಾರಿದರು.
CP Yogeshwar: ಕುಮಾರಸ್ವಾಮಿ ಬಗ್ಗೆ 'ಹೊಸ ಬಾಂಬ್' ಸಿಡಿಸಿದ ಸಚಿವ ಯೋಗೀಶ್ವರ್!
ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳು ನಿರಂತರವಾಗಿ ನಮ್ಮ ಮೇಲೆ ದಾಳಿ ಮಾಡ್ತಿವೆ. ತಮಿಳುನಾಡಿನಲ್ಲಿ ಯಾರಿಗೂ ತಿಳಿಯದಂತೆ ಅನೇಕ ಯೋಜನೆಗಳನ್ನು ಆರಂಭಿಸ್ತಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ಅನುಮತಿ ಕೊಟ್ಟಿದೆ. 118 ಕಿಲೋಮೀಟರ್ ಕಾಲುವೆ ತೆಗೆದು ಕಾವೇರಿ(Kaveri River) ಜೋಡಣೆ ಮಾಡಿ ಹೆಚ್ಚುವರಿ ನೀರು ಬಳಕೆಗೆ ಪಿತೂರಿ ನಡೆಸುತ್ತಿದ್ದಾರೆ ಆದರೂ ರಾಜ್ಯ ಸರ್ಕಾರ ಸುಮ್ಮನಿದೆ ಎಂದು ತರಾಟೆಗೆ ತೆಗೆದುಕೊಂಡರು.
ಖಾಕಿ, ಸಿಸಿಟಿವಿ ಕಣ್ಗಾವಲಿನ ನಡುವೆ ನಾಳೆ FDA Exam.! ಅತೀ ಅಗತ್ಯ ಮಾಹಿತಿ ಇಲ್ಲಿದೆ.
ಸರ್ಕಾರದ ಈ ನಡೆಯನ್ನು ಖಂಡಿಸಿ ಮಾರ್ಚ್ 27 ರಂದು ಕರ್ನಾಟಕ ಬಂದ್(Karnataka Bandh) ನಡೆಸುವ ಮೂಲಕ ಪ್ರತಿಭಟನೆ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು. ಜಲ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಿದ್ದಾರೆ.
Vidhana Parishath ಸಚಿವಾಲಯದ ನೌಕರರಿಗೆ ವಸ್ತ್ರ ಸಂಹಿತೆ ಜಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.