ರಾಮನಗರ: ಮೊದಲ ಹಂತದ ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ(Mekedatu Padayatre)ಗೆ ಗೈರಾಗಿದ್ದ ಶಾಸಕ ಜಮೀರ್ ಅಹ್ಮದ್ ಇದೀಗ ಮೇಕೆದಾಟು 2.0ಗೂ ಗೈರಾಗಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅಸಮಾಧಾನಕ್ಕೆ ಕಾರಣವಾಗಿದೆಯಾ? ಅನ್ನೋ ಪ್ರಶ್ನೆ ಮೂಡಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಾದಯಾತ್ರೆ(Mekedatu Project)ಗೆ ಗೈರಾಗಿರುವುದು ಡಿಕೆಶಿ ವಿರುದ್ಧದ ಜಮೀರ್(Zameer Ahmed) ಅಸಮಾಧಾನ ಇನ್ನೂ ಮಾಸಿಲ್ಲವೆಂಬ ಚರ್ಚೆಗಳು ಪ್ರಾರಂಭವಾಗಿವೆ. ಮೇಕೆದಾಟು ಪಾದಯಾತ್ರೆ 2.0 ಮರು ಆರಂಭವಾಗಿ 2 ದಿನಗಳೇ ಕಳೆದ್ರೂ ಇತ್ತ ಸುಳಿಯದ ಜಮೀರ್ ಇನ್ನೂ ಬೆಂಗಳೂರಿನಲ್ಲಿಯೇ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ : ರಂಗೋಲಿ ಬಿಡಿಸಿ ಪಾದಯಾತ್ರಿಗಳ ಸ್ವಾಗತ; ಬಾಯಾರಿಕೆಗೆ ಎಳನೀರು!


ಬೆಂಗಳೂರಿನಲ್ಲಿಯೇ ಇದ್ದರೂ ಪಾದಯಾತ್ರೆ ಕಡೆ ಮುಖ ಮಾಡದ ಜಮೀರ್ ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಕೂಡ ಸೂಚನೆ ನೀಡಿದ್ದರು. ಆದರೆ ಅವರ ಮಾತಿಗೂ ಕ್ಯಾರೆ ಎನ್ನದ ಜಮೀರ್ ಪಾದಯಾತ್ರೆಯಿಂದ ದೂರ ಉಳಿಯುವ ಮೂಲಕ ಗೈರಾಗಿದ್ದಾರೆ.


ಡಿಕೆಶಿ ನೇತೃತ್ವದ ಪಾದಯಾತ್ರೆಗೆ ಜಮೀರ್ ನಿರಾಸಕ್ತಿನಾ..? ಎಂಬ ಪ್ರಶ್ನ ಇದೀಗ ‘ಕೈ’ ಪಾಳಯದಲ್ಲಿ ಚರ್ಚೆ ಆಗುತ್ತಿದೆ. ಹಿಜಾಬ್ ವಿವಾದ ವಿಚಾರದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಜಮೀರ್ ಗೆ ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದರು. ಈ ಬಗ್ಗೆ ಕ್ಷಮೆ ಕೋರುವಂತೆ ಜಮೀರ್ ಗೆ ಎಚ್ಚರಿಕೆ ಸಹ ನೀಡಿದ್ದರು. ಕೊನೆಗೂ ತಮ್ಮ ಹೇಳಿಕೆ ವಿಚಾರವಾಗಿ ಕ್ಷಮೆ ಕೇಳಿದ್ದ ಜಮೀರ್ ಅಹ್ಮದ್ ಡಿಕೆಶಿ ಮೇಲೆ ಮುನಿಸಿಕೊಂಡ್ರಾ ಅನ್ನೋ ಪ್ರಶ್ನೆ ಮೂಡಿದೆ.


ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ


ಕಾಂಗ್ರೆಸ್ ನಾಯಕರ ಈ ನಡೆಯನ್ನು ಬಿಜೆಪಿ(BJP) ಟೀಕಿಸಿದೆ. ಕಾಂಗ್ರೆಸ್ ನಾಯಕರ ನಡುವೆಯೇ ಸಮನ್ವಯದ ಕೊರತೆ ಇದ್ದು, ಯಾವ ಕಾರಣಕ್ಕೆ ಇವರು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆಂದು ಬಿಜೆಪಿ ಪ್ರಶ್ನಿಸಿದೆ. ಅಲ್ಲದೆ ಮೇಕೆದಾಟು ಪಾದಯಾತ್ರೆ ಮೂಲಕ ಡಿಕೆಶಿ(DK Shivakumar) ಕಾಂಗ್ರೆಸ್ ಹೈಕಮಾಂಡ್ ಗೆ ಹತ್ತಿರವಾಗುತ್ತಿದ್ದಾರೆಂಬ ಭಯ ಸಿದ್ದರಾಮಯ್ಯನವರಿಗೆ ಕಾಡುತ್ತಿದೆ ಅಂತಲೂ ಟೀಕಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.