ಚಾಮರಾಜನಗರ: ಇಡೀ ಸಮಾಜದ ಶಾಂತಿ ಕದಡುವ, ಬೆಂಕಿ  ಹಚ್ಚುವ ಕೆಲಸವನ್ನು ಬಿಜೆಪಿ ಮಾಡ್ತಾ ಇದ್ದರೇ ಕಾಂಗ್ರೆಸ್ ಪಕ್ಷವು  ಬೆಂಕಿಗೆ  ಪೆಟ್ರೋಲ್ ಸುರಿಯುತ್ತಿದೆ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು‌.


COMMERCIAL BREAK
SCROLL TO CONTINUE READING

ಹನೂರಿನಲ್ಲಿ ಆಯೋಜನೆಯಾಗಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ. ಸರ್ವಜನಾಂಗದ ಶಾಂತಿ ತೋಟವನ್ನು ಹಾಳು ಮಾಡ್ತಾ ಇದಾರೆ. ಅದರೆ ಜೆಡಿಎಸ್ ಪಕ್ಷವು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಕಾಪಾಡಲು  ಶ್ರಮಿಸುತ್ತಿದ್ದೇವೆ. ನಮಗೆ ಜನರ ಕಲ್ಯಾಣ  ಮುಖ್ಯ  ಎಂದರು. 


ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜ್ಯದಲ್ಲಿ  ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ 
ಇಂದು ಜನರ ಕಲ್ಯಾಣಕ್ಕಾಗಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಗಿದೆ. ಇಡಿ ರಾಜ್ಯದ ಎಲ್ಲಾ ಗ್ರಾಮಗಳಿಗೂ ಪ್ರತೀ ಜಮೀನಿಗೆ ನೀರು ಉಣಿಸಲು ನಮ್ಮ ಸಂಕಲ್ಪ ಇದೆ. ಹಾಗಾಗಿ ನನಗೆ 5 ಸಂಪೂರ್ಣ ಬಹುಮತದ ಸರ್ಕಾರವನ್ನು ಈ ಬಾರಿ ಕೊಟ್ರೆ ನಾನು ಸವಾಲು ಹಾಕ್ತೇನೆ ಎಲ್ಲಾ ನೀರಾವರಿ ಯೋಜನೆ ಜಾರಿಗೊಳಿಸ್ತೀನಿ ಎಂದರು‌.


ಇದನ್ನೂ ಓದಿ- ವಾಣಿ ವಿಲಾಸ ಮಾದರಿಯಲ್ಲಿ ಕೆ.ಸಿ‌. ಜನರಲ್ ನಲ್ಲೂ ತಾಯಿ-ಶಿಶು ಆಸ್ಪತ್ರೆ - ಡಾ.ಸುಧಾಕರ್


ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡ್ತೀನಿ ಅಂತ ಸವಾಲು ಹಾಕಿದ್ದೆ, ಆಗ ಪ್ರತಿಪಕ್ಷಗಳು ಲೇವಡಿ ಮಾಡಿದ್ದರು. ನಾನು ಯಾವುದಕ್ಕೂ ಹೆದರದೇ ಸಾಲಮನ್ನಾ ಮಾಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.


ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ: 
ಇದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲ,  ಸುಳ್ಳಿನರಾಮಯ್ಯ. ಕೋವುವಾದಿ ಪಕ್ಷ ದೂರವಿಡಬೇಕು ಎನ್ನುವ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಬಯಲಾಗಿದೆ. 
ಬಿಜೆಪಿ ಆಪರೇಷನ್ ಕಮಲಕ್ಕೆ ಸುಳ್ಳಿನರಾಮಯ್ಯ ಎಷ್ಟು ದುಡ್ಡು ಪಡೆದಿದ್ದಾರೆ?  ಎಂದು ಪ್ರಶ್ನಿಸಿದ್ದಾರೆ.


ಸುಳ್ಳಿನರಾಮಯ್ಯ ಮಾತಿನೊಲ್ಲೊಂದು ಮನಸಿನ್ನೊಳದು ಎನ್ನೊದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಸಭೆಯ ಉಸ್ತುವಾರಿ ಕಾರ್ಯದರ್ಶಿ ಮುಂದೆ ಇದೇ ಸುಳ್ಳುರಾಮಯ್ಯ ಮಾತನಾಡ್ತಾ ಈ ದೇಶದಲ್ಲಿ ಸಂವಿಧಾನ ಉಳಿಬೇಕಾದ್ರೆ, ಪ್ರಜಾಪ್ರಭುತ್ವ ಉಳಿಬೇಕಾದ್ರೆ  ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ. ಇದರಲ್ಲೆ ಗೊತ್ತಾಗಲ್ವಾ ಬಿಜೆಪಿ ಸುಳ್ಳುರಾಮಯ್ಯ ಮನಸಿನಲ್ಲಿ ಬೇರೂರಿದೆ ಎಂದು ಲೇವಡಿಯಾಡಿದರು.


ಇದನ್ನೂ ಓದಿ- 20 ಸಾವಿರ ಲಂಚಕ್ಕೆ ಬೇಡಿಕೆ: ಟ್ರಾಫಿಕ್ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ


ಕಾಂಗ್ರೆಸ್ ಪಕ್ಷದವರ ನಿಲುವು ಏನಿದೆ? ಇಡೀ ದೇಶದಲ್ಲಿ ಈಗಾಗಲೆ ಕಾಂಗ್ರೆಸ್ ಪಕ್ಷವು ಧೂಳಿಪಟವಾಗಿದೆ. ಅಲ್ಪಸ್ವಲ್ಪ ಉಳಿದಿದೆ ಅಷ್ಟೆ, ಮುಂದೆ ಅದೂ ಕೂಡ ಇಲ್ಲವಾಗಲಿದೆ, ಜೆಡಿಎಸ್ ಪರ ಜನರ ಒಲವಿದೆ ಎಂದು ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.