ತುಮಕೂರು: ಇಂದು ತುಮಕೂರಿನ ಸಹಕಾರ ಸಚಿವರ ಕೆ.ಎನ್.ರಾಜಣ್ಣ ಮನೆಯಲ್ಲಿ ಹೈ ಹೋಲ್ಟೆಜ್ ಮೀಟಿಂಗ್ ಇತ್ತು.. ಆ ಸಭೆಯಲ್ಲಿ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಚ್.ವಿ.ವೆಂಕಟೇಶ್ ಇದ್ದರು. ಇಷ್ಟಾಗಿದ್ರೆ ಇಷ್ಟು ಮಹತ್ವ ಪಡೆದುಕೊಳ್ಳುತ್ತಿರಿಲ್ಲ ಸಭೆ.. ಆ ಸಭೆಯಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕೂಡ ಕಾಣಿಸಿಕೊಂಡಿದ್ದರು.. ಇದು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಅಂತಾನೇ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಮೀಟಿಂಗ್ ಗೂ ಮುನ್ನವೇ ಈ ಭೇಟಿ ಮಾತುಕತೆ ಹಲವು ರಾಜಕೀಯ ತಿರುವುಗಳಿಗೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಇನ್ನೂ ಮುದ್ದಹನುಮೇವಗೌಡರು ಡಿಸಿಸಿ ಬ್ಯಾಂಕ್ ಸಾಲದ ಕುರಿತು ಭೇಟಿ ಮಾಡಿದ್ದಾರೆ. ಬೇರೆ ರಾಜಕೀಯ ಮಾತುಕತೆ ನಡೆದಿಲ್ಲಾ, ಮುದ್ದಹನುಮೇಗೌಡ ಅಲ್ಲಾ  ಯಾರು ಬೇಕಾದರೂ ಕಾಂಗ್ರೆಸ್ ಗೆ ಬರಬಹುದು, ವಿ.ಸೋಮಣ್ಣ ಕಾಂಗ್ರೆಸ್ ಬರುತ್ತಾರೆ ಅನ್ನೋ ಊಹಾಪೋಹ ಇದೆ, ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ ಎಂಬ ಚರ್ಚೆನೂ ಇದೆ.. ಜಯಚಂದ್ರರು ತಮ್ಮ ಮಗನಿಗೆ ಟಿಕೆಟ್  ಕೇಳಿದ್ದಾರೆ. ಅವರ ಮಗನಿಗೆ ಅವಕಾಶ ಕೊಟ್ಟರೆ ಕೊಡಲಿ ಅಂತಾ ಮಾಧ್ಯಮಗಳ ಮುಂದೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀಷ್ಣವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ-Republic Day: ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ!


 ಕೆ.ಎನ್.ರಾಜಣ್ಣ ಮನೆ ಭೇಟಿ ಬಗ್ಗೆ ಮಾತ್ನಾಡಿದ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಈ ಭೇಟಿಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ನಮ್ಮ ಸ್ನೇಹಿತರ ಸಾಲದ ಕುರಿತಾಗಿ ಭೇಟಿ ಮಾಡಿ ಮಾತ್ನಾಡಿದ್ದೇನೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ನಾನು ಬೆಂಗಳೂರು ಹೋಗುವಾಗ ದಾರಿ ಮಧ್ಯೆ ರಾಜಣ್ಣ ರ ಮನೆಗೆ ಬಂದೆ ಅಷ್ಟೇ, ರಾಜಕೀಯದ  ಏನಾದರೂ ವಿಚಾರ ಇದ್ರೆ ಸುದ್ದಿ ಗೋಷ್ಠಿಯಲ್ಲಿ ಹೇಳುತ್ತೇನೆ ಎಂದು ಯಾವುದೇ ರಾಜಕೀಯ ಒಳ ಗುಟ್ಟು ಬಿಟ್ಟು ಕೊಟ್ಟಿಲ್ಲ.. ಇದ್ಕೆ ಧ್ವನಿ ಗೂಡಿಸಿದ ಗುಬ್ಬಿ ಕ್ಷೇತ್ರ ಶಾಸಕ ಎಸ್.ಆರ್.ಶ್ರೀನಿವಾಸ್ ಮಾಜಿ ಸಂಸದ ಮುದ್ದಹನುಮೇಗೌಡ ಬರೋ ಬಗ್ಗೆ ಚರ್ಚೆ ಆಗಿಲ್ಲ. ನಮ್ಮಲ್ಲಿಯೇ ತುಂಬಾ ಜನ ಇದ್ದಾರೆ. ಹಾಗಾಗಿ ಅವರನ್ನು ಕರೆತರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ-ವಿಶೇಷ ಚೇತನ ಯುವಕನಿಗೆ ಸಹಾಯಹಸ್ತ ಚಾಚಿದ ಸಂತೋಷ್ ಲಾಡ್!


ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ದಿಡೀರ್ ಎಂಬಂತೆ ಸಚಿವ ಕೆ. ಎನ್. ರಾಜಣ್ಣ ನಿವಾಸಕ್ಕೆ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ ಸ್ಪರ್ಧೆಯಿಂದಾಗಿ ಟಿಕೆಟ್ ವಂಚಿತರಾಗಿದ್ದ ಮುದ್ದಹನುಮೇಗೌಡ ಬಳಿಕ ಕಳೆದ ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರು. 


ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡರಿಗೆ ನಿರಾಸೆಯಾಗಿತ್ತು. ಹೀಗಾಗಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ರು. ಆದ್ರೆ ತುಮಕೂರು ಲೋಕಸಭಾ ಟಿಕೆಟ್ ಗೆ ಮಾಜಿ ಸಚಿವ ವಿ. ಸೋಮಣ್ಣ ಪ್ರಬಲ ಪೈಪೋಟಿ ನೀಡುತ್ತಿರುವ ಹಿನ್ನೆಲೆ ಮುದ್ದಹನುಮೇಗೌಡರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡ್ತಿದ್ದಾರೆ ಅನ್ನೋ ಚರ್ಚೆ ಜೋರಾಗಿದೆ.. ಅಲ್ದೆ ಮುದ್ದಹನುಮೇಗೌಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿ ಮಾಡಿದ್ದಾರೆ ಅನ್ನೋ ಸುದ್ದಿಗಳು ಜಿಲ್ಲಾ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.