ಕರ್ನಾಟಕದಲ್ಲಿ ಕಾಂಗ್ರೆಸ್ ಹಡಗು ಮುಳಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪಾಕಿಸ್ತಾನದಲ್ಲಿ ಆಡಳಿತ ಕುಸಿತ ಕಂಡಿದ್ದು ಜನರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅವರು ಮೋದಿ ನಮ್ಮ ದೇಶ ಆಳಲಿ ಅಂತ ಹೇಳುತ್ತಿದ್ದಾರೆ. ಚೀನಾ ಕೂಡ ಮೋದಿಯವರ ಆಡಳಿತ ಮೆಚ್ಚುತ್ತಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ನವರು ಅವಹೇಳನ ಮಾಡಿದ್ದಾರೆ. ಅಂತಹವರಿಗೆ ವೋಟ್ ಹಾಕ್ತಿರಾ ಎಂದರು.
ತುಮಕೂರು (ಕೊರಟಗೆರೆ): ಕಾಂಗ್ರೆಸ್ ಪಕ್ಷದ ಹಡಗು ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಪಂಜಾಬ್ ಸೇರಿದಂತೆ ಎಲ್ಲ ಕಡೆ ಮುಳುಗಿದೆ. ಕರ್ನಾಟಕದಲ್ಲಿ ಮಾತ್ರ ಉಳಿದಿದ್ದು, ಇಲ್ಲಿಯೂ ಜನರು ಕಾಂಗ್ರೆಸನ್ನು ಮುಳುಗಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Chamarajanagar : ಮಾ.18ಕ್ಕೆ ಲೋಕಾರ್ಪಣೆಯಾಗಲಿದೆ 108 ಅಡಿ ಎತ್ತರದ ಮಲೆಮಹದೇಶ್ವರ ಪ್ರತಿಮೆ!
ಇಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಮುಳುಗುವ ಹಡುಗು. ಮುಳುಗುವ ಹಡಗಿನಲ್ಲಿ ಯಾರಾದರೂ ಪ್ರಯಾಣ ಮಾಡುತ್ತಾರಾ? ಅದು ಮುಳುಗಿ, ಎಲ್ಲರನ್ನೂ ಮುಳುಗಿಸುತ್ತದೆ. ಭಾರತವನ್ನು ನರೇಂದ್ರ ಮೋದಿಯವರು ಹೊರಗೆ ಮತ್ತು ಒಳಗೆ ಕಾಯುತ್ತಿದ್ದಾರೆ ಎಂದರು.
ಪಾಕಿಸ್ತಾನದಲ್ಲಿ ಆಡಳಿತ ಕುಸಿತ ಕಂಡಿದ್ದು ಜನರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅವರು ಮೋದಿ ನಮ್ಮ ದೇಶ ಆಳಲಿ ಅಂತ ಹೇಳುತ್ತಿದ್ದಾರೆ. ಚೀನಾ ಕೂಡ ಮೋದಿಯವರ ಆಡಳಿತ ಮೆಚ್ಚುತ್ತಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ನವರು ಅವಹೇಳನ ಮಾಡಿದ್ದಾರೆ. ಅಂತಹವರಿಗೆ ವೋಟ್ ಹಾಕ್ತಿರಾ ಎಂದರು.
ಈಗ ಚುನಾವಣೆಯಲ್ಲಿ ಜನರು ಭಾಗವಹಿಸುವುದು ಪ್ರಜಾಪ್ರಭುತ್ವ ಅಲ್ವ. ಸಿದ್ದರಾಮಯ್ಯ, ಡಿಕೆಶಿ ಅವರು ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಗ್ಯಾರೆಂಟಿ ಕಾರ್ಡ್ ಅಲ್ಲ. ವಿಜಿಟಿಂಗ್ ಕಾರ್ಡ್ ಕೊಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ನವರ ಜೊತೆಗೆ ಹೋರಾಟ ಮಾಡುತ್ತಿದ್ದಾರೆ. ಎಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೋಲಿಸುತ್ತಾರೆ ಅನ್ನುವ ಭಯ ಇದೆ ಎಂದರು.
ಇದನ್ನೂ ಓದಿ: Karnataka Congress : ನಾಳೆ ಕಾಂಗ್ರೆಸ್ ಮೊದಲ ಹಂತದ ಪಟ್ಟಿ ಬಿಡುಗಡೆ? ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!
ನಮ್ಮ ಸರ್ಕಾರ ಅವಧಿಯಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯದ ಸಾಧನೆಗಳನ್ನು ನಿಮ್ಮ ಮುಂದೆ ಇಟ್ಟು ಬಿಜೆಪಿಗೆ ಬೆಂಬಲಿಸಿ ಎಂದು ಕೇಳುತ್ತಿದ್ದೇವೆ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.