‘ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ’ ಇದೇ ಬಿಜೆಪಿ ಸರ್ಕಾರದ ಧ್ಯೇಯ ವಾಕ್ಯ!: ಕಾಂಗ್ರೆಸ್
ಸಿಎಂ ಬಸವರಾಜ್ ಬೊಮ್ಮಾಯಿಯವರೇ ಸಂತೋಷ್ ಪಾಟೀಲ್‌ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. #BJPCorruptionFiles ಹ್ಯಾಶ್ ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ’ ಇದೇ ಬಿಜೆಪಿ ಸರ್ಕಾರದ ಧ್ಯೇಯ ವಾಕ್ಯ’ವೆಂದು ಟೀಕಿಸಿದೆ.
‘ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರ ಬರೆದು ಬರೆದೂ ಬೇಸತ್ತು ಜೀವ ಬಿಟ್ಟರು, ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 40% ಸರ್ಕಾರದಲ್ಲಿ ಆಡಳಿತದಲ್ಲಿ ಸಾಮಾನ್ಯರ ಪತ್ರಗಳಿಗೆ, ನ್ಯಾಯದ ಕೋರಿಕೆಗಳಿಗೆ ಬೆಲೆ ಇದೆಯೇ ಸಿಎಂ ಬಸವರಾಜ್ ಬೊಮ್ಮಾಯಿಯವರೇ? ಕೆ.ಎಸ್.ಈಶ್ವರಪ್ಪನವರ ತನಿಖೆ ಏಕಿಲ್ಲ? A1 ಆರೋಪಿಯಾದರೂ ಅವರನ್ನು ಬಂಧಿಸಲಿಲ್ಲವೇಕೆ?’ ಎಂದು ಪ್ರಶ್ನಿಸಿದೆ.
‘ಸಿದ್ದರಾಮೋತ್ಸವ’ದ ಆರಂಭವೇ ಹೀಗಾದರೇ, ಅಂತ್ಯ ಹೇಗಿರಬಹುದು?: ಬಿಜೆಪಿ
‘ಬಸವರಾಜ್ ಬೊಮ್ಮಾಯಿಯವರೇ, ಸಂತೋಷ್ ಪಾಟೀಲ್‌ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ? ನಿಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು ಹಾಗೂ ನಿಮ್ಮ ಸರ್ಕಾರದ ತನಿಖೆಯ ಮೇಲೆ ನಂಬಿಕೆ ಕಳೆದುಹೋಗಿರುವುದು ನಿಮಗಂಟಿದ ಕಳಂಕ ಅಲ್ಲವೇ? ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ನಿಂತಿದ್ದಿರಲ್ಲವೇ’ ಎಂದು ಕಾಂಗ್ರೆಸ್ ಕುಟುಕಿದೆ.
ಕೆ.ಎಸ್.ಈಶ್ವರಪ್ಪ ಅವರು ಕೆಲವೇ ದಿನದಲ್ಲಿ ಆರೋಪದಿಂದ ಮುಕ್ತನಾಗುತ್ತೇನೆ ಎಂದು ವಿಶ್ವಾಸದಿಂದ ಹೇಳಿಕೊಂಡು ತಿರುಗುತ್ತಿದ್ದಾರೆ. 'ನ್ಯಾಯ' ಸಮಾಧಿಯಾಗುತ್ತಿರುವುದನ್ನು ಕಂಡು ಸಂತೋಷ್ ಆತ್ಮ ರೋಧಿಸುತ್ತಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಗೃಹಸಚಿವರಿಂದ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯ ಕಳೆದುಕೊಂಡಿದೆ: ಸಿದ್ದರಾಮಯ್ಯ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.