‘ಸಿದ್ದರಾಮೋತ್ಸವ’ದ ಆರಂಭವೇ ಹೀಗಾದರೇ, ಅಂತ್ಯ ಹೇಗಿರಬಹುದು?: ಬಿಜೆಪಿ

ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Puttaraj K Alur | Last Updated : Jul 15, 2022, 09:15 PM IST
  • ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್ ಬಳಿ ಸಿದ್ದರಾಮಯ್ಯರ ವಾಹನಕ್ಕೆ ಹಣ ಎಸೆದ ಪ್ರಕರಣ
  • ವಿಪಕ್ಷ ನಾಯಕರೇ ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ
  • ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
‘ಸಿದ್ದರಾಮೋತ್ಸವ’ದ ಆರಂಭವೇ ಹೀಗಾದರೇ, ಅಂತ್ಯ ಹೇಗಿರಬಹುದು?: ಬಿಜೆಪಿ  title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ನೀಡಿದ್ದ 2 ಲಕ್ಷ ರೂ.ವನ್ನು ಅವರ ಕುಟುಂಬದ ಸದಸ್ಯರು ವಿಪಕ್ಷ ನಾಯಕ ಸಿದ್ದರಾಮಯ್ಯರ ವಾಹನದ ಮೇಲೆ‌ ಎಸೆದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಸರಣಿ ಟ್ವೀಟ್‍ಗಳ ಮೂಲಕ ಟೀಕೆ ವ್ಯಕ್ತಪಡಿಸಿದೆ.

#ಜನವಿರೋಧಿಸಿದ್ದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ. ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಈ ಬ್ಯಾಚ್ ಪಿಎಸ್ ಐಗಳ ಮೇಲೆ ಈಗ ಸಿಐಡಿ ಕಣ್ಣು..?

‘ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯರ‌ ಮನಃಸ್ಥಿತಿಗೆ ಈ ಮಹಿಳೆ ಕಪಾಳ‌ಮೋಕ್ಷ ಮಾಡಿರುವುದು ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ. ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ. ಸಿದ್ದರಾಮೋತ್ಸವದ ಹೆಸರಿನಲ್ಲಿ ಎತ್ತಿದ ಚಂದಾ ಹಣವನ್ನು ಸಿದ್ದರಾಮಯ್ಯ ದರ್ಪ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಸಿದ್ದರಾಮಯ್ಯನವರ ಜಾತ್ರೆ’ ಎಂದು ಬಿಜೆಪಿ ಟೀಕಿಸಿದೆ.

ಪಿಎಫ್ಐ ವಿರುದ್ಧ ಬಿಜೆಪಿ ಆಕ್ರೋಶ

ಇನ್ನು ಪಿಎಫ್ಐ ಸಂಘಟನೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ‘ದೇಶವನ್ನು ಛಿದ್ರಗೊಳಿಸಲು ಬಾಹ್ಯ ಶಕ್ತಿಗಳ ಆಹ್ವಾನಿಸುವುದಕ್ಕೂ ಪಿಎಫ್‌ಐ ದುಷ್ಟರು ಹೇಸುತ್ತಿಲ್ಲ. ಪಿಎಫ್ಐ ಉಗ್ರರ ರಹಸ್ಯ ಕಾರ್ಯಸೂಚಿಯಲ್ಲಿ ಏನಿದೆಯೋ, ಅದೇ ನೆಲೆಯಲ್ಲಿ ಕಾಂಗ್ರೆಸ್ ಮಾತನಾಡುತ್ತಿದೆ. ಕಾಂಗ್ರೆಸ್ ಹಾಗೂ ಪಿಎಫ್ಐ ಆಳ-ಅಗಲದ ಬಗ್ಗೆ ಸಿದ್ದರಾಮಯ್ಯ & ಡಿಕೆಶಿ ಬಳಗಕ್ಕೆ ಸ್ಪಷ್ಟ ಮಾಹಿತಿ ಇರಬಹುದೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 'ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?'

‘ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರ ಧ್ವಜವನ್ನು ತಮ್ಮ ಹಿಡನ್ ಅಜೆಂಡಾಕ್ಕೆ‌ ರಕ್ಷಾ ಕವಚವಾಗಿ ಬಳಸಿಕೊಳ್ಳಲು ಪಿಎಫ್ಐ ಉಗ್ರರು ಸಂಚು ನಡೆಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ‌ ವರ್ಗಗಳನ್ನು ಬಳಸಿಕೊಂಡು ಸಮಾಜಘಾತುಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ. ಇವರಿಗೆ ಸಹಾಯ ‘ಹಸ್ತ’ ಯಾರದ್ದು?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ‌ ಪರಿವರ್ತಿಸುವುದಕ್ಕಾಗಿ ಪಿಎಫ್ಐ ಉಗ್ರರು 3 ಹಂತದ ಯೋಜನೆ ರೂಪಿಸಿರುವುದು ಈಗ ಬಯಲಾಗಿದೆ. ಗುಪ್ತ ಸಶಸ್ತ್ರಪಡೆ ರಚಿಸಿ ವಿರೋಧಿಗಳ‌ ನಿರ್ನಾಮ ಮಾಡಬೇಕೆಂದು ಎಚ್ಚರಿಕೆ ನೀಡಿದ್ದು ಯಾರಿಗೆ? ಇದೆಲ್ಲದ್ದರಲ್ಲೂ ‘ಹಸ್ತ’ ಸಹಕಾರವಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News