PSI Recruitment Scam: ಬಿಜೆಪಿ ಸರ್ಕಾರ 50 ಸಾವಿರ ಯುವಕರ ‘ಜೀವನದ ಕೊಲೆ’ ಮಾಡಿದೆ- ಕಾಂಗ್ರೆಸ್
‘PSI Scam ಎಂಬ ಪದ ಕಿವಿಗೆ ಬಿದ್ದಾಕ್ಷಣ ಹೌಹಾರುತ್ತಿರುವ CN ಅಶ್ವತ್ಥ್ ನಾರಾಯಣ್ ಅವರೇ ಕಾಲದ ಮುಳ್ಳು ನಿಮ್ಮತ್ತಲೇ ತಿರುಗಿ ನಿಲ್ಲುವ ಸೂಕ್ಷ್ಮ ಸಿಕ್ಕಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50 ಸಾವಿರ ಯುವಕರ 'ಜೀವನದ ಕೊಲೆ' ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ’ ಎಂದು ಕಿಡಿಕಾರಿದೆ.
‘#PSIScam ಹಗರಣ ಹೊರಬರುವ ಮೊದಲು 'ಅಕ್ರಮ ನಡದೇ ಇಲ್ಲ' ಎನ್ನುತ್ತಿದ್ದವರು ಈಗ 'ಪ್ರಾಮಾಣಿಕ ತನಿಖೆ ನಮ್ಮದು' ಎನ್ನುತ್ತಿದ್ದಾರೆ. ಕಾಂಗ್ರೆಸ್ ಹೋರಾಡದಿದ್ದರೆ ಈ ತಪ್ಪೊಪ್ಪಿಗೆಯ ಹಂತಕ್ಕೆ ಬಿಜೆಪಿ ಬರುತ್ತಿರಲಿಲ್ಲ. ಅಮೃತ್ ಪೌಲ್, ಶಾಂತಕುಮಾರ್ ಅವರ ಹೇಳಿಕೆಯನ್ನು ನ್ಯಾಯಾಧೀಶರೆದುರು ದಾಖಲಿಸಿ 'ಪ್ರಾಮಾಣಿಕ ತನಿಖೆ'ಯನ್ನು ಸಾಬಿತುಪಡಿಸಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Idgah Maidan Issue : ಈದ್ಗಾ ಮೈದಾನ ಭೂ ವಿವಾದ : ಹೋರಾಟಕ್ಕೆ ಸಂಸದ ಪಿಸಿ ಮೋಹನ್ ಎಂಟ್ರಿ
‘#PSIScam ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ. PSI ಹಗರಣದ ಆಳ, ಅಗಲವನ್ನು ಹಾಗೂ ಅದರ ಹಾನಿಯನ್ನು ವಿವರಿಸಲು ಹೈಕೋರ್ಟ್ ನ್ಯಾಯಾಧೀಶರ ಇದೊಂದು ಮಾತು ಸಾಕು. ಇಂತಹ 'ಭೀಕರ' ಹಗರಣ ನಡೆದೇ ಇಲ್ಲವೆಂದು ಪ್ರತಿಪಾದಿಸಿದ್ದ ಸರ್ಕಾರ ಈಗ ತನಿಖೆಯನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದೆ. #PSIScam ಬಿಜೆಪಿ ಪ್ರಾಯೋಜಿತ ಭಯೋತ್ಪಾದಕ ದಾಳಿ’ ಎಂದು ಕಾಂಗ್ರೆಸ್ ಟೀಕಿಸಿದೆ.
ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ 2 ದಿನ ಸ್ಪೋಕನ್ ಇಂಗ್ಲೀಷ್ ತರಗತಿ..!
ಅಶ್ವತ್ಥ್ ನಾರಾಯಣ್ ಅವರೇ, ಕಾಲದ ಮುಳ್ಳು ನಿಮ್ಮತ್ತಲೇ ತಿರುಗಿ ನಿಲ್ಲುವ ಸೂಕ್ಷ್ಮ ಸಿಕ್ಕಿದೆಯೇ? ಕದ್ದವನು ಮಾತ್ರ ಪ್ರಮಾಣಿಕನ ಸೋಗು ಹಾಕಲು ಯತ್ನಿಸುತ್ತಾನೆ. ಅಂತೆಯೇ ತಾವು ಯಾಕಿಷ್ಟು ಗಾಬರಿಯಲ್ಲಿದ್ದೀರಿ?’ ಎಂದು ಟ್ವೀಟ್ ಮಾಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.