ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ 2 ದಿನ ಸ್ಪೋಕನ್ ಇಂಗ್ಲೀಷ್ ತರಗತಿ..!

ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ವಾರದಲ್ಲಿ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜನೆ ಮಾಡಲು ಶಿಕ್ಷಣ ಇಲಾಖೆ ಪ್ಲ್ಯಾನ್ ನಡೆಸಿದೆ. ಖಾಸಗಿ ಶಾಲೆಯ ಮಕ್ಕಳಿಗಿಂತ ತಮ್ಮ ಮಕ್ಕಳು ಯಾವುದರಲ್ಲೂ ಕಡಿಮೆ ಇರಬಾರದು ಎಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ.

Written by - Manjunath Hosahalli | Last Updated : Jul 14, 2022, 10:24 PM IST
  • ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಮೊದಲೆಲ್ಲಾ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಲಾಗುತ್ತಿತ್ತು.
  • ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾದ ನಂತರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಯಿತು
ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ 2 ದಿನ ಸ್ಪೋಕನ್ ಇಂಗ್ಲೀಷ್ ತರಗತಿ..! title=

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ವಾರದಲ್ಲಿ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜನೆ ಮಾಡಲು ಶಿಕ್ಷಣ ಇಲಾಖೆ ಪ್ಲ್ಯಾನ್ ನಡೆಸಿದೆ. ಖಾಸಗಿ ಶಾಲೆಯ ಮಕ್ಕಳಿಗಿಂತ ತಮ್ಮ ಮಕ್ಕಳು ಯಾವುದರಲ್ಲೂ ಕಡಿಮೆ ಇರಬಾರದು ಎಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ.

ಸಮಾಜದಲ್ಲಿ ಮಾತೃಭಾಷೆಗೆ ಮೊದಲ ಸ್ಥಾನವಿದ್ದರು ಇಂಗ್ಲೀಷ್ ಬರುವುದಿಲ್ಲ ಅನ್ನೋ ಕೀಳರಿಮೆಯಿಂದ ಮಕ್ಕಳನ್ನು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಹಲವು ವ್ಯವಹಾರಗಳನ್ನು ನಡೆಸುವ ಸಲುವಾಗಿ ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಸಂವಹನ ಅತ್ಯಗತ್ಯವಾಗುತ್ತದೆ. ಮಕ್ಕಳು ಬೆಳೆದು ಕಾಲೇಜು ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿಯಾಗಲೀ ಇನ್ಯಾವುದೇ ಸಂದರ್ಭದಲ್ಲಿ ಆಗಲೀ ಭಾಷೆ ಅತ್ಯಂತ ಮುಖ್ಯವಾಗುತ್ತದೆ. ಅದರಲ್ಲೂ ಇಂಗ್ಲೀಷ್ ನಲ್ಲಿ ಮಾತನಾಡುವುದು ಸ್ಟಾಂಡರ್ಡ್ ಆಗಿಬಿಟ್ಟಿದೆ. ಇದರಿಂದಾಗಿಯೇ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭ ಮಾಡುವ ಮುಖ್ಯ ಉದ್ದೇಶವನ್ನ ಶಿಕ್ಷಣ ಇಲಾಖೆ ಹೊಂದಿದೆ.

ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಮೊದಲೆಲ್ಲಾ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಲಾಗುತ್ತಿತ್ತು. ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾದ ನಂತರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಯಿತು. ಆದರೂ ಕನ್ನಡ ಮಾಧ್ಯಮಕ್ಕೆ ಪಾಠ ಮಾಡುತ್ತಿದ್ದ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠವನ್ನು ಮಾಡಬೇಕಾಯಿತು. ಕೆಲವು ಶಾಲೆಗಳಲ್ಲಿ ಪಾಠ ಮಾತ್ರವೇ ಇಂಗ್ಲೀಷ್‌ನಲ್ಲಿ ಇರುತ್ತಿತ್ತು. ಮಕ್ಕಳಿಗೆ ಪಾಠದ ವಿವರಣೆ, ಸಂವಹನ ಎಲ್ಲವೂ ಕನ್ನಡ ಭಾಷೆಯಲ್ಲೇ ನಡೆಯುತ್ತಿತ್ತು. ಇದರಿಂದಾಗಿ ಮಕ್ಕಳಿಗೆ ಮಾಧ್ಯಮ ಬದಲಾಯಿತೇ ವಿನಃ ಇಂಗ್ಲೀಷ್ ಸಂವಹನ ಬರಲಿಲ್ಲ. ಇದಕ್ಕಾಗಿಯೇ ಮಕ್ಕಳಲ್ಲಿ ಇಂಗ್ಲೀಷ್ ಸಂವಹನ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ವಾರದಲ್ಲಿ ಕಡೇ ಪಕ್ಷ ಒಂದು ದಿನವಾದರೂ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸಲು ಯೋಜನೆ ಸಿದ್ದವಾಗಿದೆ. 

ಮೈಸೂರಿನಿಂದ ಮೊದಲ ಪ್ರಯೋಗ;

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸಲು ಅಂತಿಮ ಹಂತದ ಸಿದ್ದತೆಯಲ್ಲಿ ಇಲಾಖೆಯಿದೆ. ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲು ಮೊದಲು ಶಿಕ್ಷಕರು ಇಂಗ್ಲೀಷ್‌ನಲ್ಲಿ ಮಾತನಾಡಬಲ್ಲ ವ್ಯಾಕರಣಬದ್ದವಾಗಿ ಮಾತನಡಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ ಮೈಸೂರು ಮೂಲದ "ರೀಜನಲ್ ಇನ್ಸ್ಟಿಟ್ಯೂಷನ್ ಆಫ್ ಇಂಗ್ಲೀಷ್ ಸಂಸ್ಥೆ"ಯೊಂದರ ಮೂಲ ಶಿಕ್ಷಕರಿಗೆ ತರಭೇತಿಯನ್ನು ಕೊಡಿಸಿ. ಆ ಶಿಕ್ಷಕರ ಮೂಲಕ ಸ್ಪೋಕನ್ ಇಂಗ್ಲೀಷ್ ಹೇಳಿಕೊಡಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು ಅಂತಿಮ ಹಂತದ ಸಿದ್ದತೆಯನ್ನ ಶಿಕ್ಷಣ ಇಲಾಖೆ ನಡೆಸಿದೆ.

ನಿಯಮಿತ ಅಥವಾ ಅತಿಥಿ ಶಿಕ್ಷಕರಿಗೆ ಹೊಣೆ;

ನಿಯಮಿತವಾಗಿರುವ ಇಂಗ್ಲೀಷ್ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರಿಗೆ ಹೊಣೆಯನ್ನು ವಹಿಸಲಾಗುತ್ತದೆ.ಈ ಶಿಕ್ಷಕರು ಮಕ್ಕಳಿಗೆ ಸಿದ್ದಪಡಿಸಿದ ವಿಚಾರ, ಪಠ್ಯಕ್ಕೆ ಅನುಗುಣವಾಗಿ ವಾರದಲ್ಲಿ ಒಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲಿದ್ದಾರೆ. ಮಕ್ಕಳ ನಿರರ್ಗಳ ಮಾತಿನ ಸಾಮರ್ಥ್ಯವನ್ನು ಹೆಚ್ಚು ಮಾಡುವುದೇ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ದೇಶವಾಗಿದೆ. 

ಇದನ್ನೂ ಓದಿ: ಬೆಂಗಳೂರಿನಿಂದ ಕಾಶಿಗೆ ತೆರಳಬೇಕೇ! ಕರ್ನಾಟಕ ಸರ್ಕಾರದಿಂದ ವಿಶೇಷ ವ್ಯವಸ್ಥೆ

ಸಿದ್ದವಾಗಿದೇ ಸ್ಪೋಕನ್ ಇಂಗ್ಲೀಷ್ ಪಠ್ಯಕ್ರಮ;

ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉದ್ಯೋಗ ಅರಸಿ ಸಿಲಿಕಾನ್ ಸಿಟಿಗೆ ಬಂದಾಗಲೋ ಕಂಪನಿಯ ಉದ್ಯೋಗವನ್ನು ಕೇಳಿ ಹೋದಾಗ ಇಂಗ್ಲೀಷ್ ಭಾಷೆ ಬರಲ್ಲ ಅನ್ನೋ ಹಿಂಜರಿಕೆ ಕಾಡುತ್ತೆ. ಇಂಥ ಹಿಂಜರಿಕೆಯನ್ನು ದೂರ ಮಾಡಲು ಮಕ್ಕಳಿಗೆ ಇಂಗ್ಲೀಷ್ ಸಂವಹನ ಅನಿವಾರ್ಯವಾಗಿ ಬೇಕೆಬೇಕು. ಶಿಕ್ಷಣ ಸಚಿವರು ಮಕ್ಕಳ ಹಿತದೃಷ್ಠಿಯಿಂದ ಮಕ್ಕಳಿಗೆ ಹೊರೆಯಾಗದಂತೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಮುಂದಾಗಿರುವುದು ಶ್ಲಾಘನೀಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News