ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಸಹ ಪ್ರಯಾಣಿಕರಿಗೆ ಆತಂಕದ ವಾತಾವರಣ ಸೃಷ್ಟಿಸಿದ್ದಾರೆಂದು ಆರೋಪಿಸಲಾಗಿತ್ತು. 2022ರ ಡಿಸೆಂಬರ್ 10ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.


COMMERCIAL BREAK
SCROLL TO CONTINUE READING

ಇದೇ ವಿಚಾರವನ್ನಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಸಂಸದ ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು’ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸಂಸದನ ವಿರುದ್ಧ ಕಿಡಿಕಾರಿದೆ. 


ಬಸ್ ನಿಲ್ಲಿಸುವ ವಿಚಾರಕ್ಕೆ ಹತ್ಯೆ: ಮೋರಿಯಲ್ಲಿ ಸಿಕ್ಕ ಅಪರಿಚಿತ ಶವದ ಹಿಂದಿದೆ ರೋಚಕ ಕಥೆ!


‘ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ! ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು? ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ?’ ಎಂದು ಕಾಂಗ್ರೆಸ್ ಟೀಕಿಸಿದೆ.


‘ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದದ್ದು ಶಿಕ್ಷಾರ್ಹ ಅಪರಾಧ, ವಿಮಾನಯಾನ ಸಂಸ್ಥೆ ಈ ಪ್ರಕರಣ ಮುಚ್ಚು ಹಾಕಲು ಯತ್ನಿಸಿದ್ದೇಕೆ? ಬಿಜೆಪಿಗೊಂದು ಕಾನೂನು, ಇತರರಿಗೊಂದು ಕಾನೂನು ಇದೆಯೇ? ಎದೆ ಸೀಳಿದರೆ ನಾಲ್ಕಕ್ಷರ ಬರುವುದಿಲ್ಲ ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರಲ್ಲಿ ಈಗ ಬಾಯಿ ತೆರೆದರೆ ನಾಲ್ಕು ಮಾತೇ ಹೊರಡುತ್ತಿಲ್ಲವೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.