ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ?: ಕಾಂಗ್ರೆಸ್
10 BJP MLAs suspended: ದಲಿತರ ಮೇಲೆ ಬಿಜೆಪಿಗೆ ಇರುವ ಅಸಹನೆ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ. ದಲಿತ ವ್ಯಕ್ತಿಯೊಬ್ಬರು ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ಸಹಿಸದ ಬಿಜೆಪಿಗೆ ಸದಸ್ಯರು ಪೇಪರ್ ಹರಿದು ಅವರ ಮುಖಕ್ಕೆ ಎಸಿದಿದ್ದು ಅತ್ಯಂತ ಹೇಯ ಕೃತ್ಯವೆಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನ ವರ್ತನೆ ತೋರಿದ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಬುಧವಾರ ಆದೇಶ ಹೊರಡಿಸಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದೆ.
#ದಲಿತವಿರೋಧಿಬಿಜೆಪಿ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಲಿತ ಸಮುದಾಯದ ಉಪಾಸಭಾಪತಿಗಳಿಗೆ ಅವಮಾನಕರವಾಗಿ ನಡೆದುಕೊಂಡ ಬಿಜೆಪಿಗೆ ದಲಿತರು ಉನ್ನತ ಸ್ಥಾನಕ್ಕೆರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲವೇ? ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ? ಸಭಾಧ್ಯಕ್ಷರ ಮುಖಕ್ಕೆ ಪೇಪರ್ ಎಸಿದಿದ್ದು ಕರ್ನಾಟಕದ ಶಾಸಕಾಂಗದ ಪರಂಪರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ’ ಎಂದು ಟೀಕಿಸಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ : ಸ್ತೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ
ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಕವಚವಾಗಿ INDIA: ಬಿಜೆಪಿ ಆರೋಪ
ಬಿಜೆಪಿ ರೌಡಿ ಮೋರ್ಚಾದ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.