ಬೆಂಗಳೂರು: ಕಾಂಗ್ರೆಸ್ ಸೇರಿ ವಿಪಕ್ಷಗಳ ಒಕ್ಕೂಟ ರೂಪಿಸಿರುವ I.N.D.I.A (ಘಟಬಂಧನ್)ಗೆ ಬಿಜೆಪಿ ಟೀಕಿಸಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಯುಪಿಎ ಸರ್ಕಾರವು ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಅಭಿವೃದ್ಧಿ ಹೀನ, ಕೆಟ್ಟ ಆಡಳಿತ ಸೇರಿದಂತೆ ದೇಶ ವಿರೋಧಿ ಚಟುವಟಿಕೆಗಳಿಗೆ ಸುಭದ್ರ ತಾಣವಾಗಿತ್ತು’ ಎಂದು ಟೀಕಿಸಿದೆ.
‘ಯುಪಿಎ ಹೆಸರಿನಲ್ಲಿ ಈ ಹಿಂದೆ "ಕೈ" ಸುಟ್ಟುಕೊಂಡಿದ್ದ ಅವಕಾಶವಾದಿ ರಾಜಕಾರಣಿಗಳಿಗೆ, ಮತ್ತೊಮ್ಮೆ ಯುಪಿಎ ಹೆಸರಿನೊಂದಿಗೆ ಮುಂದುವರೆದರೇ, ತಮ್ಮ ಕ್ಷುಲ್ಲಕ ಹಾಗೂ ಕುತಂತ್ರ ರಾಜಕಾರಣ ಅಂತ್ಯವಾಗುತ್ತದೆ ಎಂಬ ಭಯ ಸಹಜವಾಗಿಯೇ ಬಂದಿದೆ. ಈ ಹಿನ್ನೆಲೆ "ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ತುಂಬಿದಂತೆ" ತಮ್ಮ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತವನ್ನು ಜನಮಾನಸದಿಂದ ಮರೆಮಾಚಲು I-N-D-I-A ಎಂಬ ಹೊಸ ಹೆಸರಿನ ಕವಚ ತೊಡಿಸಿದ್ದಾರೆ’ ಎಂದು ಕುಟುಕಿದೆ.
ಈ ಹಿನ್ನೆಲೆಯಲ್ಲಿ "ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ತುಂಬಿದಂತೆ" ತಮ್ಮ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತವನ್ನು ಜನಮಾನಸದಿಂದ ಮರೆಮಾಚಲು I-N-D-I-A ಎಂಬ ಹೊಸ ಹೆಸರಿನ ಕವಚ ತೊಡಿಸಿದ್ದಾರೆ.
2004-2014 ರ ಅವಧಿಯಲ್ಲಿ ಯು.ಪಿ.ಎ ಸರ್ಕಾರಗಳು ಹಗರಣಗಳ ತವರು ಮನೆಯಾಗಿತ್ತು. A ಯಿಂದ ಆರಂಭವಾಗಿ Z ತನಕ ಹಗರಣಗಳನ್ನು ನಡೆಸಿದ…
— BJP Karnataka (@BJP4Karnataka) July 19, 2023
ಇದನ್ನೂ ಓದಿ: ಮೈತ್ರಿಕೂಟದ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರ ಬಳಕೆ ಆರೋಪ
‘2004-2014ರ ಅವಧಿಯಲ್ಲಿ ಯುಪಿಎ ಸರ್ಕಾರಗಳು ಹಗರಣಗಳ ತವರು ಮನೆಯಾಗಿತ್ತು. Aಯಿಂದ ಆರಂಭವಾಗಿ Zತನಕ ಹಗರಣಗಳನ್ನು ನಡೆಸಿದ ಕಾರಣ, ಜನರು ಯುಪಿಎ ಎಂದರೇ ಹಗರಣ ಎನ್ನುತ್ತಾರೆ ಎಂಬ ಕಾರಣಕ್ಕೆ, ಯುಪಿಎ ಹೆಸರನ್ನು ಬದಲಾಯಿಸುವ ಅನಿವಾರ್ಯತೆ ಇತ್ತು. ಯುಪಿಎ ಸರ್ಕಾರವು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಇದ್ದಂತಹ ಸ್ವಾರ್ಥಿಗಳ ತಾಣವಾಗಿತ್ತು’ ಎಂದು ಟೀಕಿಸಿದೆ.
ಯು.ಪಿ.ಎ ಸರ್ಕಾರದ ಅವಧಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳು, ಭಯೋತ್ಪಾದಕ ದಾಳಿಗಳು, ಭಾರತೀಯರೂ ಎಂದಿಗೂ ಮರೆಯದ 26/11 ಮುಂಬೈ ದಾಳಿ, ಕಾಶ್ಮೀರದ ಸೈನಿಕರ ಮೇಲೆ ಕಲ್ಲು ತೂರಾಟ ಹೀಗೆ ಎಲ್ಲವೂ ಭಾರತೀಯರ ಮನಸ್ಸಿನಲ್ಲಿಯೇ ಅಚ್ಚಳಿಯದೆ ಉಳಿದಿದೆ.
ಯು.ಪಿ.ಎ ಎಂದರೇ ಭಾರತೀಯರಿಗೆ ಆ ಅವಧಿಯಲ್ಲಿ ನಡೆದ ಕೆಟ್ಟ ಘಟನೆಗಳು ಕಣ್ಣ ಮುಂದೆ ಬರುತ್ತವೆ ಎಂಬ…
— BJP Karnataka (@BJP4Karnataka) July 19, 2023
‘ಇವರುಗಳ ಕುಟುಂಬ ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಿದ ಪರಿಣಾಮ, ಪುನಃ ಯುಪಿಎ ಹೆಸರಿನೊಂದಿಗೆ ಮುನ್ನಡೆದರೇ, ಜನ ಮತ್ತೊಮ್ಮೆ ತಮ್ಮನ್ನು ಕುಟುಂಬ ರಾಜಕಾರಣಿಗಳು ಎಂದು ಪರಿಗಣಿಸುತ್ತಾರೆ ಎನ್ನುವ ಕಾರಣಕ್ಕೆ ಯುಪಿಎ ಹೆಸರು ಬದಲಿಸುವ ಸಂದಿಗ್ಧತೆ ಎದುರಾಗಿತ್ತು’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಸದನದಿಂದ ಶಾಸಕರ ಅಮಾನತು : ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೆಚ್‌ಡಿಕೆ ಕಿಡಿ
‘ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳು, ಭಯೋತ್ಪಾದಕ ದಾಳಿಗಳು, ಭಾರತೀಯರೂ ಎಂದಿಗೂ ಮರೆಯದ 26/11 ಮುಂಬೈ ದಾಳಿ, ಕಾಶ್ಮೀರದ ಸೈನಿಕರ ಮೇಲೆ ಕಲ್ಲು ತೂರಾಟ ಹೀಗೆ ಎಲ್ಲವೂ ಭಾರತೀಯರ ಮನಸ್ಸಿನಲ್ಲಿಯೇ ಅಚ್ಚಳಿಯದೆ ಉಳಿದಿದೆ. ಯುಪಿಎ ಎಂದರೇ ಭಾರತೀಯರಿಗೆ ಆ ಅವಧಿಯಲ್ಲಿ ನಡೆದ ಕೆಟ್ಟ ಘಟನೆಗಳು ಕಣ್ಣ ಮುಂದೆ ಬರುತ್ತವೆ ಎಂಬ ಕಾರಣಕ್ಕೆ ಯುಪಿಎ ಹೆಸರನ್ನು ಬದಲಾಯಿಸಿದರೇ ಮಾತ್ರ ತಮಗೆ ಉಳಿಗಾಲವಿದೆ ಎಂಬ ಭ್ರಮೆಯಲ್ಲಿ ಅವಕಾಶವಾದಿ ರಾಜಕಾರಣಿಗಳು ತೇಲುತ್ತಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಈ ಕಾರಣಕ್ಕಾಗಿ ತಾವು ಹಿಂದಿನ ಅವಧಿಯಲ್ಲಿ ಮಾಡಿದಂತಹ ತಪ್ಪುಗಳನ್ನು, ನೀಡಿದ ಕೆಟ್ಟ ಆಡಳಿತವನ್ನು ಮರೆಮಾಚಲು I-N-D-I-A ಎಂಬ ಗುರಾಣಿಯ ಮೊರೆ ಹೋಗಿದ್ದಾರೆ. ಇವರುಗಳು ಹೆಸರನ್ನು ಬದಲಿಸಬಹುದು, ಆದರೇ ಭಾರತೀಯರು ಇವರ ಆಡಳಿತದಲ್ಲಿ ಅನುಭವಿಸಿದ ಕೆಟ್ಟ ಕ್ಷಣಗಳನ್ನು ಎಂದಿಗೂ ಮರೆಯಲಾರರು’ ಎಂದು ಬಿಜೆಪಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.