ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಬಿಜೆಪಿ ಕಲಿಯಬೇಕಿದೆ: ಕಾಂಗ್ರೆಸ್
ತ್ರಿವರ್ಣ ಧ್ವಜವನ್ನು ಅಪಶಕುನ ಎಂದು ಅವಮಾನಿಸಿದ್ದು RSS, ಈಗ ಬಿಜೆಪಿ ರಾಷ್ಟ್ರಧ್ವಜವನ್ನು ಬದಲಿಸುವ ಮಾತನಾಡುತ್ತಿದೆ ಅಂತಾ ಕಾಂಗ್ರೆಸ್(Congrss)ಟ್ವೀಟ್ ಮಾಡಿದೆ.
ಬೆಂಗಳೂರು: ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಬಿಜೆಪಿ(BJP) ಮೊದಲು ಕಲಿಯಬೇಕಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ವಿಚಾರವಾಗಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಮಧ್ಯೆ ಮಾತಿನ ಸಮರ ನಡೆದಿತ್ತು. ಇಬ್ಬರು ನಾಯಕರು ಪರಸ್ಪರ ದೇಶದ್ರೋಹಿ ಪದ ಬಳಕೆ ಮಾಡಿ ಏಕವಚನದಲ್ಲಿ ಬೈದಾಡಿಕೊಂಡಿದ್ದರು.
ಕೊತ್ವಾಲ್ ಶಿಷ್ಯನೆಂಬ ಮಾತ್ರಕ್ಕೆ ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ
‘ರಾಷ್ಟ್ರಧ್ವಜ(National Flag)ವನ್ನು ಬದಲಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa)ನವರ ದೇಶದ್ರೋಹಿ ಹೇಳಿಕೆಯನ್ನು ಬೆಂಬಲಿಸುವ ಬಿಜೆಪಿಯವರು ಧ್ವಜ ಪ್ರದರ್ಶಿಸಿದ ಕಾಂಗ್ರೆಸ್‌ಗೆ ಗೌರವಿಸುವ ಪಾಠ ಮಾಡುವುದು ನರಿಗಳು ನ್ಯಾಯ ಹೇಳಿದಂತೆಯೇ ಸರಿ! ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಮೊದಲು ಬಿಜೆಪಿ ಕಲಿಯಬೇಕಿದೆ’ ಅಂತಾ ಹೇಳಿದೆ.
ರಾಷ್ಟ್ರಧ್ವಜಕ್ಕೆ ಅವಮಾನ: ಸಂಪುಟದಿಂದ ಈಶ್ವರಪ್ಪರನ್ನು ಕೈಬಿಡುವಂತೆ ಸಿದ್ದರಾಮಯ್ಯ ಆಗ್ರಹ
‘ಪ್ರಧಾನಿ ಮೋದಿಯವರಿಂದ ಹಿಡಿದು ಈಶ್ವರಪ್ಪನವರವರೆಗೂ ಬಿಜೆಪಿ(BJP)ಯ ಪ್ರತಿಯೊಬ್ಬರೂ ದೇಶಕ್ಕೆ ಅಗೌರವ ತೋರಿದವರೇ. ಚಿಕ್ಕ ಮಕ್ಕಳಿಗೂ ತಿಳಿದ ರಾಷ್ಟ್ರಗೀತೆಗೆ ಗೌರವಿಸುವ ನಿಯಮ ದೇಶದ ಪ್ರಧಾನಿಗೆ ತಿಳಿಯದೆ, ವಿದೇಶಿಯರಿಂದ ಪಾಠ ಕಲಿಯಬೇಕಾಗಿ ಬಂದಿದ್ದು ದುರಂತ. RSS ಸೇವೆ ಬದಲು ದೇಶಸೇವೆ ಮಾಡಿ ತಿಳಿದಿದ್ದರೆ ಇವೆಲ್ಲವೂ ಅರ್ಥವಾಗುತ್ತಿತ್ತು’ ಅಂತಾ ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.