ಕೊತ್ವಾಲ್ ಶಿಷ್ಯನೆಂಬ ಮಾತ್ರಕ್ಕೆ ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ

ರಾಷ್ಟ್ರ ಧ್ವಜದ ಬಗ್ಗೆ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಹಸನವನ್ನು ನೋಡಿದಾಗ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದೇ ಭಾಸವಾಗುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Feb 16, 2022, 05:12 PM IST
  • ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಸದನದಲ್ಲಿ ಸಚಿವ ಈಶ್ವರಪ್ಪ ಅವರು ಹೇಳಿದ ಮಾತಿನಲ್ಲಿ ತಪ್ಪೇನಿದೆ?
  • ನೀವು ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವುದು ಸುಳ್ಳೇ? ಅಂತಾ ಪ್ರಶ್ನಿಸಿದ ಬಿಜೆಪಿ
  • ಸತ್ಯ ಹೇಳಿದರೆ ಕೆಂಡದಂಥ ಕೋಪವೇಕೆ? ಅಂತಾ ಡಿಕೆಶಿಗೆ ವ್ಯಂಗ್ಯವಾಡಿದ ಬಿಜೆಪಿ
ಕೊತ್ವಾಲ್ ಶಿಷ್ಯನೆಂಬ ಮಾತ್ರಕ್ಕೆ ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ title=
ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಷ್ಟ್ರಧ್ವಜ(National Flag)ಕ್ಕೆ ಅಗೌರವ ತೋರಿದ ವಿಚಾರವಾಗಿ ಬುಧವಾರ ಸದನದಲ್ಲಿ ನಡೆದ ಚರ್ಚೆ ವೇಳೆ ಗ್ರಾಮೀಣಾವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)ತೀವ್ರ ವಾಗ್ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಸರಣೀ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆಶಿಗೆ ತಿರುಗೇಟು ನೀಡಿದೆ.

#ಕಾಂಗ್ರೆಸ್‌ಗೂಂಡಾಗಿರಿ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೆಪಿಸಿಸಿ ಅಧ್ಯಕ್ಷ ಡಿಕೆಶಿ(DK Shivakumar)ಯವರೇ ಸದನದಲ್ಲಿ ಸಚಿವ ಈಶ್ವರಪ್ಪ(KS Eshwarappa) ಅವರು ಹೇಳಿದ ಮಾತಿನಲ್ಲಿ ತಪ್ಪೇನಿದೆ? ನೀವು ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವುದು ಸುಳ್ಳೇ? ಜಾಮೀನು ವಜಾಗೊಂಡರೆ ನೀವು ಮತ್ತೆ ಜೈಲಿಗೆ ಹೋಗುವುದು ನಿಜವಲ್ಲವೇ? ಸತ್ಯ ಹೇಳಿದರೆ ಕೆಂಡದಂಥ ಕೋಪವೇಕೆ?’ ಅಂತಾ ವ್ಯಂಗ್ಯವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ಕಾಲೇಜಿನ ಹೊರಗೆ 'We Want Justice' ಘೋಷಣೆ

‘ಡಿ.ಕೆ.ಶಿವಕುಮಾರ್ ಅವರೇ ನೀವು ಕೊತ್ವಾಲ್ ಶಿಷ್ಯ ಎಂಬ ಮಾತ್ರಕ್ಕೆ ಸದನದಲ್ಲೂ ಅದೇ ಶೈಲಿಯಲ್ಲಿ ವರ್ತಿಸುವುದು ತರವೇ? ಒಬ್ಬ ಸಚಿವರ ವಿರುದ್ಧ ಕೈ ಮಿಲಾಯಿಸುವ ವರ್ತನೆ ತೋರಿದ್ದರಿಂದ ಇಂದು ಸದನ(Karnataka Assembly Session)ದಲ್ಲಿ ಕೋಲಾಹಲ ನಿರ್ಮಾಣವಾಗಿದೆ. ವಿಧಾನಸಭೆಯ ಮಹತ್ವ ನಿಮಗೆ ತಿಳಿದಿದೆಯೇ?’ ಅಂತಾ ಬಿಜೆಪಿ ಕುಟುಕಿದೆ.

‘ರಾಷ್ಟ್ರ ಧ್ವಜದ ಬಗ್ಗೆ ಕಾಂಗ್ರೆಸ್ ಪಕ್ಷ(Congress Party)ನಡೆಸುತ್ತಿರುವ ಪ್ರಹಸನವನ್ನು ನೋಡಿದಾಗ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದೇ ಭಾಸವಾಗುತ್ತದೆ. ಸಚಿವರ ಹೇಳಿಕೆಯ ಆಯ್ದ ಭಾಗವನ್ನಷ್ಟೇ ಇಟ್ಟುಕೊಂಡು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿರುವುದು ಸಂಸದೀಯ ನಡಾವಳಿಯಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ನಷ್ಟದ ಹೊಂಡದಲ್ಲಿ KSRTC: 3 ವರ್ಷಗಳಿಂದ 2,945 ಕೋಟಿ ನಷ್ಟ, ವಿದ್ಯುತ್ ವಾಹನ ಖರೀದಿಗೆ ಹಣವಿಲ್ಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News