ಬೆಂಗಳೂರು: ಉದ್ಯಮಿ ಮತ್ತು ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ MLA ಟಿಕೆಟ್‌ ನೀಡುವುದಾಗಿ ಚೈತ್ರಾ ಕುಂದಾಪುರ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ. ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ’ ಎಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚೈತ್ರ ಅಂಡ್ ಗ್ಯಾಂಗ್ ನಿಂದ ಉದ್ಯಮಿ ವಂಚನೆ ಪ್ರಕರಣ: ಆರೋಪಿ ಅಭಿನವ ಹಾಲಶ್ರೀ ಬಂಧನ


ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಹೆಸರು ಬಹಿರಂಗವಾದ ನಂತರ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರಿಗೆ ಈ ವಂಚನೆಯ ಸಂಗತಿ ಮೊದಲೇ ಗೊತ್ತಿತ್ತು, ಬಿಜೆಪಿಗೂ ಪಕ್ಷಕ್ಕೂ ಗೊತ್ತಿತ್ತು ಎಂಬ ಸತ್ಯ ಹೊರಬಿದ್ದಿದೆ. ಹಣದ ಅಕ್ರಮ ವಹಿವಾಟು ನಡೆದಿದ್ದು, ಪಕ್ಷದ ಹೆಸರಲ್ಲಿ ಅಕ್ರಮ ನಡೆದಿದ್ದರೂ, ಹಣದ ವಂಚನೆ ನಡೆದಿದ್ದರೂ ಸಿಟಿ ರವಿ ಸುಮ್ಮನಿದ್ದಿದ್ದು ಏಕೆ? ಅ ಮೌನದಲ್ಲಿ ಇನ್ನೂ ಹೆಚ್ಚಿನ ನಿಗೂಢತೆ ಇದೆಯೇ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್‍ನ ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ!  


ಬಿ.ಎಸ್.ಯಡಿಯೂರಪ್ಪನವರೇ, ತಾವು ಈ ಇಳಿವಯಸ್ಸಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ಪ್ರವಾಸ ಹೊರಡುವ ಬದಲು ಮುಳುಗುತ್ತಿರುವ ನಿಮ್ಮ ಪಕ್ಷವನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸುವುದು ಒಳ್ಳೆಯದು!’ ಎಂದು ಕಾಂಗ್ರೆಸ್ ಸಲಹೆ ನೀಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.