ಬೆಂಗಳೂರು: ಎಂಎಲ್ಎ ಟಿಕೆಟ್ ಕೊಡಿಸೋದಾಗಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಕೊನೆಗೆ ಸೆರೆ ಸಿಕ್ಕಿದ್ದಾರೆ. ಬಂಧನದ ಭೀತಿಯಿಂದ ಕಾವಿ ತೆಗೆದು ಟೀ ಶರ್ಟ್ ಧರಿಸಿದ್ದ ಅಭಿನವ ಹಾಲಶ್ರೀ ತಮ್ಮ ಒಡಿಸ್ಸಾದ ಕಟಕ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆಗಾದ್ರೆ ಹಾಲಶ್ರೀ ಟ್ರಾವೆಲ್ ಹಿಸ್ಟರಿ ಹೇಗಿತ್ತು.ಹಾಲಶ್ರೀ ಅರೆಸ್ಟ್ ಆಪರೇಷನ್ ಹೇಗಿತ್ತು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಮೂರನೆ ಆರೋಪಿ ಕೊನೆಗೂ ಅಂದರ್ ಆಗಿದ್ದಾರೆ. ಪ್ರಕರಣ ದಾಖಲಾಗ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ನಿನ್ನೆ ರಾತ್ರಿ ಒಡಿಸ್ಸಾದ ಕಟಕ್ ರೈಲ್ವೇ ನಿಲ್ದಾಣದಲ್ಲಿ ಸಿಸಿಬಿ ಪೊಲೀಸ್ರಿಗೆ ಸೆರೆ ಸಿಕ್ಕಿದ್ದಾರೆ.
ಇದನ್ನೂ ಓದಿ-HD Kumaraswamy Health Updates: ಎಚ್ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದೇನು..?
ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಅಭಿನವ ಹಾಲಶ್ರೀ ತುಂಬಾ ಚಾಲಕಿ.ಸಿಸಿಬಿ ಪೊಲೀಸ್ರ ಬಂಧನ ಭೀತಿಯಿಂದ ತಾನು ಧರಿಸಿದ್ದ ಕಾವಿಯನ್ನ ತೆಗೆದು ಟೀ ಶರ್ಟ್ ಧರಿಸಿ ಕಾಶಿಯತ್ತ ಪ್ರಯಾಣ ಬೆಳೆಸಿದ್ರು. ಈ ವೇಳೆ ಸಿಸಿಬಿ ಪೊಲೀಸ್ರ ರವಾನಿಸಿದ್ದ ಪೋಟೋ ಪರಿಶೀಲಿಸಿದ್ದ ಒಡಿಸ್ಸಾ ಪೊಲೀಸ್ರು ಪರಿಶೀಲನೆ ನಡೆಸ್ತಿರಬೇಕಾದ್ರೆ ಹಾಲಶ್ರೀ ಸ್ವಾಮಿ ಪತ್ತೆಯಾಗಿದ್ದು, ಕೂಡ್ಲೇ ವಶಕ್ಕೆ ತೆಗೆದುಕೊಂಡು ಸಿಸಿಬಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಹಾಲಶ್ರೀ ಬೆನ್ನು ಬಿದ್ದು ಹಿಂದೆಯೇ ಹೊರಟಿದ್ದ ಸಿಸಿಬಿ ವಿಶೇಷ ತಂಡಗಳು ಹಾಲಶ್ರೀಯನ್ನ ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಒಡಿಸ್ಸಾದಲ್ಲಿ ಸೆರೆ ಸಿಕ್ಕೋ ಮುನ್ನ ಅಭಿನವ ಹಾಲಶ್ರೀ ಮೈಸೂರಿನಿಂದ ಹೈದಾರಬಾದ್ ಗೆ ಪ್ರಯಾಣ ಬೆಳೆಸಿ ಶ್ರೀಲೈಲ ಮಠದಲ್ಲಿ ಆಶ್ರಯ ಪಡೆದಿದ್ರು. ಬಳಿಕ ಗಂಜಾಂ ಮಾರ್ಗವಾಗಿ ಪೂರಿಗೆ ತಲುಪಿದ್ದ ಅಭಿನವ ಹಾಲಶ್ರೀ, ಪೂರಿಜಗನ್ನಾಥನ ದರ್ಶನ ಪಡೆದು, ಕೊನಾರ್ಕ್ ಟೆಂಪಲ್ ಗೆ ತಲುಪಿದ್ದ. ಅಲ್ಲಿ ದೇವರ ದರ್ಶನ ಪಡೆದ ಅಭಿನವ ಹಾಲಶ್ರೀ ಶ್ರೀಶೈಲ ಸ್ವಾಮೀಜಿಗೆ ಕರೆ ಮಾಡಿ ಕಾಶಿಯತ್ತ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ನಲ್ಲಿದ್ರು. ಆದ್ರೆ, ಅವ್ರ ಬೆನ್ನು ಬಿದ್ದಿದ್ದ ಸಿಸಿಬಿಗೆ ಸ್ವಾಮೀಜಿ ಖರೀದಿ ಮಾಡಿದ್ದ ರೈಲ್ವೇ ಟಿಕೆಟ್ ನ ಪಿಎನ್ ಆರ್ ನಂಬರ್ ಕ್ಲೂ ನೀಡಿತ್ತು.ಆ ಮಾಹಿತಿ ಆಧಾರದ ಮೇಲೆ ಕಾರ್ಯ ಪ್ರವೃತ್ತರಾದ ಸಿಸಿಬಿ ಟೀಂ ರೈಲ್ವೆ ಸ್ಟೇಷನ್ ಬಳಿ ಹೋಗ್ತಿದ್ದಾಗೆ, ಚಳ್ಳೆ ಹಣ್ಣು ತಿನ್ನಿಸಿದ್ದ ಹಾಲಶ್ರೀ ಟಿಕೆಟ್ ಪಡೆದ ಸ್ಟೇಷನ್ ಬಿಟ್ಟು ಮುಂದಿನ ರೈಲ್ವೇ ಸ್ಟೇಷನ್ ನಲ್ಲಿ ರೈಲು ಹತ್ತಿದ್ರು. ಆದ್ರೆ ,ಕೊನೆಗೆ ಕಟಕ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ‘ಕಿಡ್ನಾಪ್ ಕಾವ್ಯ’!
ಸದ್ಯ ಬಂಧನಕ್ಕೊಳಗಾಗಿರೋ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತರ್ತಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ. ಇವೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಾಳೆ ಚೈತ್ರ ಹಾಗೂ ಹಾಲಶ್ರೀ ಮುಖಾಮುಖಿ ವಿಚಾರಣೆ ನಡೆಸಲಿದ್ದು,ಸ್ಪೋಟಕ ಮಾಹಿತಿ ಹೊರ ಬೀಳಲಿದೆ. ಆ ರೀತಿ ಹೊರಬೀಳುವ ಮಾಹಿತಿಯಿಂದ ಪ್ರಕರಣ ಮತ್ಯಾವ ದಿಕ್ಕಿ ಪಡೆದುಕೊಳ್ಳಲಿದ್ಯೋ ನೋಡ್ಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.