ಬೆಂಗಳೂರು: ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿತದಿಂದ ಇದುವರೆಗೆ 140ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಜನರು ನದಿಯಲ್ಲಿ ಕಾಣೆಯಾಗಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.  


COMMERCIAL BREAK
SCROLL TO CONTINUE READING

‘ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿತದ ಸುದ್ದಿ ಅತ್ಯಂತ ಆಘಾತಕಾರಿಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ನವೀಕರಣಗೊಂಡು ಉದ್ಘಾಟಣೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದಿದ್ದು ಬಿಜೆಪಿಯ ಭ್ರಷ್ಟಾಚಾರದ ಫಲ. ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ ಪ್ರಧಾನಿ ಮೋದಿಯವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


Solar Scam : ಸೋಲಾರ್ ಹಗರಣ ತನಿಖೆ, ಕಾದು ನೋಡಿ ಎಂದ್ರು ಸಿಎಂ ಬೊಮ್ಮಾಯಿ


‘ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 140ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು. ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ. ಇದು ಗುಜರಾತ್ ಮಾಡೆಲ್‌ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ ಬಿಜೆಪಿ? 40 ಪರ್ಸೆಂಟ್ "ಒಂದು ದೇಶ ಒಂದು ಕಮಿಷನ್" ಎಂದು ಜಾರಿಯಾಗಿದೆಯೇ?’ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ.


ಪ್ರಧಾನಿ ಮೋದಿಯವರೇ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಉಡುಗೊರೆ ರೂಪದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲು ನೆಟ್ಟಿದ್ದಾರೆ: ಬಿಜೆಪಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.