ಶಾಸಕ ಎನ್. ಮಹೇಶ್ ಕಮಾಲ್...7 ಅನರ್ಹರಲ್ಲಿ 6 ಮಂದಿ ಜಯಭೇರಿ!!

ಕೊಳ್ಳೇಗಾಲ ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಇದರಲ್ಲಿ ಅನರ್ಹರು ಎಂದು ಬಿಎಸ್ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಏಳು ಜನರಲ್ಲಿ ಆರು ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು ವಿರೋಧಿ ಗುಂಪುಗಳಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ. 

Written by - Yashaswini V | Last Updated : Oct 31, 2022, 12:06 PM IST
  • ಕೊಳ್ಳೇಗಾಲ ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟ
  • ಇದರಲ್ಲಿ ಅನರ್ಹರು ಎಂದು ಬಿಎಸ್ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಏಳು ಜನರಲ್ಲಿ ಆರು ಮಂದಿ ಗೆಲುವು
  • ಈ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಎಸ್ಪಿ ಭಾರಿ ಮುಖಭಂಗ ಅನುಭವಿಸಿದೆ.
ಶಾಸಕ ಎನ್. ಮಹೇಶ್ ಕಮಾಲ್...7 ಅನರ್ಹರಲ್ಲಿ 6 ಮಂದಿ ಜಯಭೇರಿ!! title=
By-poll result

ಚಾಮರಾಜನಗರ: ಶಾಸಕ ಎನ್.ಮಹೇಶ್ ಜೊತೆಗೆ ಗುರುತಿಸಿಕೊಂಡು ಅನರ್ಹಗೊಂಡಿದ್ದ 7 ಮಂದಿ ನಗರಸಭೆ ಸದಸ್ಯರಲ್ಲಿ 6 ಮಂದಿ ಜಯಭೇರಿ ಬಾರಿಸಿದ್ದು ಶಾಸಕರ ಪ್ರತಿಷ್ಠೆಗೆ ಜಯಮಾಲೆ ಧಕ್ಕಿದೆ. 

ಕೊಳ್ಳೇಗಾಲ ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಇದರಲ್ಲಿ ಅನರ್ಹರು ಎಂದು ಬಿಎಸ್ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಏಳು ಜನರಲ್ಲಿ ಆರು ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು ವಿರೋಧಿ ಗುಂಪುಗಳಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ. 

ಇದನ್ನೂ ಓದಿ- ‘ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ’ ಎಂದ ಎಚ್ಡಿಕೆ

2 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯ ಅವರ ಗೆಲುವು ಬಿಟ್ಟರೇ ಉಳಿದ 6 ಕ್ಷೇತ್ರಗಳಲ್ಲಿನ‌ ಕಮಲ‌ಕಲಿಗಳಾದ 21ನೇ ವಾರ್ಡ್- ಪ್ರಕಾಶ್, 6 ನೇ ವಾರ್ಡಿನ ಮಾನಸ, 25 ನೇ ವಾರ್ಡಿನ ರಾಮಕೃಷ್ಣ, 7 ನೇ ವಾರ್ಡ್ ನಾಸಿರ್ ಷರೀಫ್, 13 ನೇ ವಾರ್ಡಿನ ಪವಿತ್ರಾ ಹಾಗೂ 26 ನೇ ವಾರ್ಡಿನ ನಾಗಸುಂದ್ರಮ್ಮ ವಿಜಯ ಸಾಧಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್  ಒಂದು ಸ್ಥಾನಕ್ಕಷ್ಟೇ ಸೀಮಿತಗೊಂಡಿದ್ದು ಈ ಹಿಂದೆ ಈ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಎಸ್ಪಿ ಭಾರಿ ಮುಖಭಂಗ ಅನುಭವಿಸಿದೆ. 

ಇದನ್ನೂ ಓದಿ- ಕಾಂಗ್ರೆಸ್ ಗೆ ಲೋಕಾಯುಕ್ತದ ಮೇಲೆ ನಂಬಿಕೆಯೇ ಇಲ್ಲ-ಸಚಿವ ಡಾ.ಕೆ.ಸುಧಾಕರ್

ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದ ಸದಸ್ಯರು:
ಎನ್.ಮಹೇಶ್ ಬಿಜೆಪಿ ಸೇರಿದ್ದ ವೇಳೆ ಬಿಎಸ್ ಪಿ ವಿಪ್ ಉಲ್ಲಂಘಿಸಿ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ  7 ಮಂದಿ ಬಿಎಸ್ಪಿ ಸದಸ್ಯರು‌ ಅನರ್ಹಗೊಂಡಿದ್ದರು. ಅನರ್ಹಗೊಂಡ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲ 7 ಮಂದಿಗೂ ಬಿಜೆಪಿ ಟಿಕೆಟ್ ಕೊಡಿಸಿ 6 ಮಂದಿಯನ್ನು ಗೆಲಿಸುವಲ್ಲಿ ಶಾಸಕ ಎನ್ ಮಹೇಶ್ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News