ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪಠ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಂ ಹೆಡ್ಗೆವಾರ್ ಭಾಷಣ  ಸೇರಿಸಿರುವ ವಿಚಾರವಾಗಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಭಗತ್ ಸಿಂಗ್ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ಈ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ. ಬ್ರಿಟೀಷರ  ವಿರುದ್ಧ ಹೋರಾಡಿದ ಭಗತ್ ಸಿಂಗ್ ಬದಲು ಬ್ರಿಟೀಷರೊಂದಿಗೆ ಕೈ ಜೋಡಿಸಿದವರ ಪಠ್ಯವನ್ನು ಸೇರಿಸಲಾಗಿದೆ. ಇದು ನಿಜವಾದ ದೇಶದ್ರೋಹಿಗಳ ಕೆಲಸ. ನಿಮ್ಮ ದೇಶದ್ರೋಹ ಜನತೆಗೆ ತಿಳಿಯಲಿದೆ’ ಎಂದು ಟೀಕಿಸಿದೆ.


ರಾಜ್ಯಸಭೆ ಚುನಾವಣೆ : " ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ "


‘ಇದು ಪಠ್ಯ ಪುಸ್ತಕವೇ ಹೊರತು ನಿಮ್ಮ ಸಂಘದ ಪುಸ್ತಕವಲ್ಲ. ಯಾರೋ ಅಷ್ಟ ವಕ್ರನನ್ನು ಪಠ್ಯ ಪುಸ್ತಕ ಸಮಿತಿಯಲ್ಲಿ ಕೂರಿಸಿದ ಪರಿಣಾಮ ಇದು. ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು. ಸರ್ಕಾರ ಇಂತಹ ಹೊಣೆಗೇಡಿಗಳನ್ನು ಪಠ್ಯ ಪುಸ್ತಕ ಸಮಿತಿಯಿಂದ ಹೊರಗಿಡಲಿ’ ಎಂದು ಕಾಂಗ್ರೆಸ್ ಕಿಡಿಕಾರಿದೆ.


ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲ. ಆರೋಪ ಮಾಡುತ್ತಿರುವವರು ಮೊದಲು ಪಠ್ಯ ಪುಸ್ತಕ ನೋಡಲಿ ಎಂದು ಈಗಾಗಲೇ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. 10ನೇ ತರಗತಿ ಪಠ್ಯದಿಂದ ಹೆಡ್ಗೆವಾರ್ ಭಾಷಣ ಕೈಬಿಡುವುದಿಲ್ಲವೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ರೀತಿಯ ಆಮಿಷದ-ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.