ಭಗತ್ ಸಿಂಗ್ ಪಠ್ಯ ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟಣೆ

ಪಠ್ಯದಲ್ಲಿ ಹೆಡ್ಗೆವಾರ್ ಅವರ ಭಾಷಣೆ ಸೇರಿಸುವ ಮೂಲಕ ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!? ಅನ್ನೋ ಪ್ರಶ್ನೆ ಮೂಡಿದೆ.

Written by - Sowmyashree Marnad | Edited by - Puttaraj K Alur | Last Updated : May 16, 2022, 07:30 PM IST
  • 10ನೇ ತರಗತಿ ಪಠ್ಯದಲ್ಲಿ RSS​ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಕುರಿತ ಪಾಠ
  • ಭಗತ್ ಸಿಂಗ್ ಪಠ್ಯ ‌ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲವೆಂದ ರೋಹಿತ್ ಚಕ್ರತೀರ್ಥ
  • ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಸೇರಿ ವಿಪಕ್ಷಗಳ ಆಕ್ರೋಶ
ಭಗತ್ ಸಿಂಗ್ ಪಠ್ಯ ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟಣೆ title=
ಶಾಲಾ ಪಠ್ಯದಲ್ಲಿ ಹೆಡ್ಗೆವಾರ್ ಭಾಷಣ ಅಳವಡಿಕೆ

ಬೆಂಗಳೂರು: ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಗದ್ದಲವಾಯ್ತು, ಭಗವದ್ಗೀತೆಯ ಪ್ರಸ್ತಾಪವೂ ಆಯ್ತು. ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ವಿವಾದ ಆರಂಭವಾಗಿದೆ. ಹೌದು, 10ನೇ ತರಗತಿಯ ಪಠ್ಯಪುಸ್ತಕದಲ್ಲಿ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯ ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಅಳವಡಿಕೆ

SSLC ಪಠ್ಯ ಪುಸ್ತಕದ ಕುರಿತು ಸಾಕಷ್ಟು ಗದ್ದಲವೇ ನಡೆಯುತ್ತಿದೆ. ಭಗತ್ ಸಿಂಗ್ ಅವರ ಪಠ್ಯ ‌ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿದ್ದಾರೆ ಎಂಬ ಅಪಾದನೆ ಕೇಳಿ ಬರುತ್ತಿದೆ. ಪಠ್ಯದಲ್ಲಿ ಭಗತ್‌ಸಿಂಗ್‌ ಪಾಠ ಕೈಬಿಟ್ಟಿದ್ದಕ್ಕೆ ವಿಪಕ್ಷಗಳಿಂದ ಆಕ್ರೋಶ ಸಹ ವ್ಯಕ್ತವಾಗಿದೆ. ಆದರೆ, ಭಗತ್ ಸಿಂಗ್ ಅವರ ಪಠ್ಯ ತೆಗೆದು ಹೆಡ್ಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲ. ಆರೋಪ ಮಾಡುತ್ತಿರುವವರು ಮೊದಲು ಪಠ್ಯ ಪುಸ್ತಕ ನೋಡಲಿ ಅಂತಾ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿPSI Requirement Scam: ಪಿಎಸ್‌ಐ ಅಕ್ರಮ ಕಿಂಗ್‌ಪಿನ್‌ಗಳ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ!

ಆರ್‍ಎಸ್‍ಎಸ್‍ನ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ದೇಶ ಸಂಘಟನೆ ಬಗ್ಗೆ ಮಾಡಿದ ಒಂದು ಭಾಷಣವನ್ನು ಪಠ್ಯ ರೂಪದಲ್ಲಿ ‌ಅಳವಡಿಸಲಾಗಿದೆ. ಇದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಹೆಡ್ಗೆವಾರ್ ದೊಡ್ಡ ಸ್ವಯಂ ಸೇವಕರ ಸಂಘಟನೆ ಕಟ್ಟಿದವರು. 1 ಕೋಟಿಗೂ ಹೆಚ್ಚು ಕಾರ್ಯಕರ್ತರು ಈಗಲೂ ಸಕ್ರಿಯವಾಗಿದ್ದಾರೆ. ದೇಶವನ್ನು ಪ್ರೀತಿಸಬೇಕೆಂಬ ವಿಷಯವನ್ನು ಪಠ್ಯಕ್ಕೆ ಸೇರಿಸಿದರೆ ಕೇಸರಿಕರಣ ಹೇಗಾಗುತ್ತದೆ? ಹೆಡ್ಗೆವಾರ್ ಅವರ ಉದಾತ್ತ ಚಿಂತನೆಯನ್ನು ಅಳವಡಿಸಿದ್ದೇವೆ. ದೇಶ ಕಟ್ಟುವ, ವ್ಯಕ್ತಿತ್ವ ನಿರ್ಮಾಣದ ಕುರಿತು ಅವರು ಹೆಚ್ಚು ಆಸಕ್ತರಾಗಿದ್ದರು. ಹೀಗಾಗಿ ಇದು ಮಕ್ಕಳಿಗೆ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.   

ಇನ್ನು ‘ಕೈ’ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ರೋಹಿತ್ ಚಕ್ರತೀರ್ಥ, ‘ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ಹಾಗಂತ ಜವಾಹರ‌ಲಾಲ್ ನೆಹರು ಅವರ ಸಾಧನೆ ನಗಣ್ಯವೆಂದು‌ ಹೇಳಲು ಸಾಧ್ಯವಿಲ್ಲ. ನೆಹರು ಬಗೆಗಿನ ಪಠ್ಯವನ್ನು ‌ಈಗಲೂ ಮಕ್ಕಳು ಕಲಿಯುತ್ತಿದ್ದಾರೆ. ಇಷ್ಟು ವರ್ಷ ಚಿಂತಕರು ಅಂತಾ ಹೇಳಿದವರು ಕೆಲವರನ್ನು ಮಾತ್ರ ಚಿಂತಕರೆಂದು ಓದುತ್ತಿದ್ದರು. ಇಷ್ಟು ದಿನ ಫ್ಯಾಸಿಸ್ಟ್ ಮನಸ್ಥಿತಿಗಳು ಪಠ್ಯದಲ್ಲಿದ್ದವು, ಈಗ ಅವು ಬದಲಾಗುತ್ತಿವೆ. ದೇಶಭಕ್ತರಾಗಬೇಕು, ತಂದೆ-ತಾಯಿಯನ್ನು ಗೌರವಿಸಬೇಕು, ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬೇಕು ಎಂಬುದನ್ನೇ ಆರ್‍ಎಸ್‍ಎಸ್‍ ಅಜೆಂಡಾ ಅಂತಾ ಹೇಳುವುದಾದರೆ ಅದನ್ನು ಪಠ್ಯದಲ್ಲಿ ಸೇರಿಸುವುದರಲ್ಲಿ ತಪ್ಪೇನಿದೆ ? ಎಂದು ಅವರು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: "ನನಗೆ ಮುಸ್ಲೀಂರ ಮತಗಳು ಬೇಡ, ಹಿಂದೂಗಳ ಮತಗಳಷ್ಟೇ ಸಾಕು"

ಪಠ್ಯದಲ್ಲಿ ಹೆಡ್ಗೆವಾರ್ ಅವರ ಭಾಷಣೆ ಸೇರಿಸುವ ಮೂಲಕ ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!? ಅನ್ನೋ ಪ್ರಶ್ನೆ ಮೂಡಿದೆ. ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್‍ರ ಪಠ್ಯವನ್ನು ತೆಗೆದು, ಹೆಡ್ಗೆವಾರ್ ಅವರ ಭಾಷಣ ಸೇರಿಸಿರುವುದು ಸರಿಯಲ್ಲವೆಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಬಿಜೆಪಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News