ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ : ನಗರದ ಎಲ್ಲಾ ಸೇತುವೆ ಮೌಲ್ಯಮಾಪನಕ್ಕೆ ಕಾಂಗ್ರೆಸ್ ಆಗ್ರಹ
ನಗರದಲ್ಲಿ ಬಿಡಿಎ, ಬಿಬಿಎಂಪಿ, ಸರ್ಕಾರ, ರಾಷ್ಟ್ರೀಯ ಹೆದ್ದಾರಿಯಿಂದ ಹಲವಾರು ಮೇಲ್ಸೇತುವೆ ನಿರ್ಮಾಣ ಆಗಿದೆ. ದೀರ್ಘಾವಧಿಗೆ ಮೇಲ್ಸೇತುವೆಗಳು, ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣ ಆಗಿದೆ.
ಬೆಂಗಳೂರು : ಕಳೆದ ಎರಡು ತಿಂಗಳಿಂದ ಪೀಣ್ಯ ಮೇಲ್ಸೇತುವೆ Peenya flyover)ಕಳಪೆ ಕಾಮಗಾರಿಯಿಂದ ಸಂಚಾರ ಸ್ಥಗಿತಮಾಡಲಾಗಿದ್ದು, ನಗರದ ಎಲ್ಲಾ ಮೇಲ್ಸೇತುವೆ ಹಾಗೂ ಕೇಳಸೇತುವೆಗಳ ಮೌಲ್ಯ ಮಾಪನ ಮಾಡಬೇಕು ಎಂದು ಕಾಂಗ್ರೆಸ್ ಅಗ್ರಹಿಸುತ್ತಿದೆ.
ನಗರದಲ್ಲಿ BDA, BBMP ಸರ್ಕಾರ, ರಾಷ್ಟ್ರೀಯ ಹೆದ್ದಾರಿಯಿಂದ ಹಲವಾರು ಮೇಲ್ಸೇತುವೆ ನಿರ್ಮಾಣ ಆಗಿದೆ. ದೀರ್ಘಾವಧಿಗೆ ಮೇಲ್ಸೇತುವೆಗಳು, ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣ ಆಗಿದೆ. ಇವುಗಳ ಬಗ್ಗೆ ನಗರದ ಸಾರ್ವಜನಿಕರಿಗೆ ಭಯಭೀತಿ ಉಂಟಾಗಿದೆ. ಪೀಣ್ಯ ಮೇಲ್ಸೇತುವೆ ಹತ್ತೇ ವರ್ಷದಲ್ಲಿ ಸಂಚಾರ ಯೋಗ್ಯ ಅಲ್ಲ ಎಂದು ಸಾಬೀತಾಗಿದೆ. 50 ವರ್ಷ ಬಾಳಿಕೆ ಬರಬೇಕಾದ ಮೇಲ್ಸೇತುವೆ 10 ವರ್ಷಕ್ಕೇ ಕಳಪೆ ಆಗಿದೆ. ಹೀಗಾಗಿ ತನಿಖೆಯಾಗಬೇಕು, ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಂಗ್ರೆಸ್ ವಿಧಾನಪರಿಷತ್ ಸದಸ್ಯ ಪಿ ಆರ್ ರಮೇಶ್ ( PR Ramesh) ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಗೌರವದೊಂದಿಗೆ ನಾಡೋಜ ಚೆನ್ನವೀರ ಕಣವಿ ಅಂತ್ಯಕ್ರಿಯೆ
ನವಯುಗ ಇಂಜಿನಿಯರ್ ಕಂಪನಿಯಿಂದ ( navayuga engineering company) 2010 ರಲ್ಲಿ ನಿರ್ಮಾಣವಾದ ಮೇಲ್ಸೇತುವೆ (Flyover) , 12 ವರ್ಷದಲ್ಲೇ ಸಂಚಾರ ಯೋಗ್ಯ ಅಲ್ಲವೆಂದು ಸಾಬೀತಾಗಿದೆ. ಪೀಣ್ಯ ಮೇಲ್ಸೇತುವೆಗೆ 775.70 ಕೋಟಿ ರೂ ವೆಚ್ಚಮಾಡಲಾಗಿತ್ತು. ಅಂತರ್ ರಾಜ್ಯ, ಜಿಲ್ಲೆಗಳಿಗೆ ಸಂಪರ್ಕಿಸುವ 4.5 ಕಿ.ಮೀ ಉದ್ದದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಡಿ.25 ರಿಂದ ಮೇಲ್ಸೆತುವೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಿದ್ದು ಸದ್ಯ ಲಘುವಾಹನಗಳ ಓಡಾಟಕ್ಕೆ ಮಾತ್ರ ಫ್ಲೈಓವರ್ ಸೀಮಿತ ಮಾಡಲಾಗಿದೆ.
19.5 ಕಿಮೀ ಉದ್ದರ ತುಮಕೂರು ರಸ್ತೆ ಕಾರಿಡಾರ್ ೧೨ ವರ್ಷಗಳ ಹಿಂದೆ ಯೋಜನೆ ತಯಾರಿಸಲಾಗಿತ್ತು. ನವಯುಗ ಕನ್ ಸ್ಟ್ರಕ್ಷನ್ ಸಂಸ್ಥೆಯಿಂದ ಗುತ್ತಿಗೆ ಪಡೆದಿದ್ದು, ನವೆಂಬರ್ ೨೦೦೭ ರಲ್ಲಿ ಕಾಮಗಾರಿ ಆರಂಭವಾಗಿತ್ತು. ೨೦೧೦ರ ಆಗಸ್ಟ್ ನಲ್ಲಿಸಾರ್ವಜನಿಕ ಬಳಕೆಗೆ ಅವಕಾಶ ನೀಡಲಾಗಿತ್ತು. ಈ ಮೇಲ್ಸೇತುವೆಯನ್ನು ಶಿವಕುಮಾರಸ್ವಾಮೀಜಿ ಮೇಲ್ಸೇತುವೆ (Shivakumara Swamiji Flyover) ಎಂದು ನಾಮಕರಣ ಮಾಡಲಾಗಿತ್ತು. ಸದ್ಯ ವಾಹನ ಸಂಚಾರಕ್ಕೆ ಸುರಕ್ಷಿತ ಅಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ ವರದಿ ಬಂದಿದ್ದು, ಎಲ್ಲಾ ಮೇಲ್ಸೇತುವೆ, ಕೆಳಸೇತುವೆಗಳ ವೈಜ್ಞಾನಿಕ ಹಾಗೂ ತಾಂತ್ರಿಕ ಮೌಲ್ಯಮಾಪನಕ್ಕೆ ಕಾಂಗ್ರೆಸ್ (Congress) ಆಗ್ರಹ ಮಾಡುತ್ತಿದೆ.
ಇದನ್ನೂ ಓದಿ : 'ಸಂವಿಧಾನ ವಿರೋಧಿಸುವವರು, ರಾಷ್ಟ್ರಧ್ವಜವನ್ನು ಒಪ್ಪದವರು ಎಂದೂ ದೇಶಪ್ರೇಮಿಯಾಗಲು ಸಾಧ್ಯವಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.