ಬೆಂಗಳೂರು: ಸ್ಯಾಮ್ ಪಿತ್ರೊಡಾ ಮತ್ತು ಜನಾರ್ಧನ ದ್ವಿವೇದಿಯವರನ್ನು ಕರ್ನಾಟಕದಿಂದ ರಾಜ್ಯಸಭೆ ಕಳುಹಿಸಬೇಕು ಎನ್ನುವ ಹೈಕಮಾಂಡ್ ಕೋರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಆಧ್ಯತೆ ಎನ್ನುವ ವಿಚಾರವನ್ನು ಹೈಮಾಂಡಗೆ ಸ್ಪಷ್ಟಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮಂಗಳವಾರದಂದು ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ಆ ಸಂದರ್ಭದಲ್ಲಿ ಅವರು ಸ್ಯಾಮ್ ಪಿತ್ರೊಡಾ ಮತ್ತು ಜನಾರ್ಧನ ದ್ವಿವೇದಿಯವರ ಹೆಸರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಪರಿಗಣಿಸುವಂತೆ ಕೋರಿದ್ದರು. ಆದರೆ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊರಗಿನ ವ್ಯಕ್ತಿಗಳನ್ನು ರಾಜ್ಯಸಭೆಗೆ ಕಳುಹಿಸುವುದು ತರವಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. 


ಮಾರ್ಚ್ 23 ರಂದು ರಾಜ್ಯಸಭಾ ಚುನಾವಣೆ ಇದ್ದು, ಸಧ್ಯದ ತನ್ನ ಬಲದ ಆಧಾರದ ಮೇಲೆ ಎರಡು ಸೀಟುಗಳನ್ನು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ. ಈಗ ಮೂರನೇ ಸೀಟಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.