ಇಂದೇ ಬಹುಮತ ಸಾಬೀತುಪಡಿಸಲು ಸ್ಪೀಕರ್ ಗೆ ರಾಜ್ಯಪಾಲರ ಸೂಚನೆ
ರಾಜ್ಯಪಾಲರು ಸರ್ಕಾರಕ್ಕೆ ಇಂದೇ ಬಹುಮತವನ್ನು ಸಾಬೀತುಪಡಿಸಲು ತಮಗೆ ಸಂದೇಶ ಕಳಿಸಿರುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಈಗ ಸದನದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಪಾಲರು ಸರ್ಕಾರಕ್ಕೆ ಇಂದೇ ಬಹುಮತವನ್ನು ಸಾಬೀತುಪಡಿಸಲು ತಮಗೆ ಸಂದೇಶ ಕಳಿಸಿರುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಈಗ ಸದನದಲ್ಲಿ ತಿಳಿಸಿದ್ದಾರೆ.
ಭೋಜನ ವಿರಾಮದ ನಂತರ ಪ್ರಾರಂಭವಾದ ಸದನದಲ್ಲಿ ರಾಜ್ಯಪಾಲರು ನನಗೆ ಇಂದೇ ಬಹುಮತ ಸಾಬೀತು ಪಡಿಸಲು ಸಂದೇಶ ಕಳಿಸಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ರಾಜ್ಯಪಾಲರು ಕಳಿಸಿರುವ ಸಂದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದಾದ ನಂತರ ಸ್ಪಷ್ಟನೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್ ತಮಗೆ ರಾಜ್ಯಪಾಲರು ಸಂದೇಶವನ್ನು ಮಾತ್ರ ನೀಡಿದ್ದಾರೆ ಹೊರತು ನಿರ್ದೇಶನವಲ್ಲ ಎಂದು ತಿಳಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ನ ಕೃಷ್ಣ ಭೈರೇಗೌಡ ಕಾಗವಾಡದ ಶಾಸಕ ನಾಪತ್ತೆಯಾಗಿರುವ ವಿಷಯವನ್ನು ಪ್ರಸ್ತಾಪಿಸಿ ಶಾಸಕರನ್ನು ಕಿಡ್ನಾಪ್ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ಹಿನ್ನಲೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆಯಿತು. ಇನ್ನೊಂದೆಡೆ ವಿಶ್ವಾಸಮತಯಾಚನೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸದನದಲ್ಲಿನ ಬೆಳವಣಿಗೆಗಳ ಬಗ್ಗೆ ದೂರು ನೀಡಿದರು.