ಬೆಂಗಳೂರು: ಕಬ್ಬನ್​​ ಪಾರ್ಕ್​, ಲಾಲ್​​ಬಾಗ್​ ರೀತಿ ಬೆಂಗಳೂರಿನ ಉತ್ತರ ಭಾಗದಲ್ಲಿ ಮತ್ತೊಂದು ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಆರ್​.ಅಶೋಕ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಇತಿಹಾಸದಲ್ಲಿ ದಾಖಲಾಗುವ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ನಾಡಪ್ರಭು ಕೆಂಪೇಗೌಡರ ಹುಟ್ಟೂರು ಬಳಿಯ ಆವತಿ ಸಮೀಪದ ಬೆಟ್ಟ ಹಲಸೂರಿನಲ್ಲಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ. ಕಂದಾಯ ಇಲಾಖೆಯ 184 ಎಕರೆ ಜಮೀನಿನಲ್ಲಿ ಕಬ್ಬನ್ ಪಾರ್ಕ್​ಗಿಂತಲೂ ದೊಡ್ಡ ಪಾರ್ಕ್ ನಿರ್ಮಿಸಲಾಗುತ್ತದೆ. ಆ ಹೊಸ ಪಾರ್ಕ್​ಗೆ ಕೆಂಪೇಗೌಡರ ಹೆಸರಿಡಲು ನಿರ್ಧರಿಸಲಾಗಿದೆ ಎಂದರು.


ಇದನ್ನೂ ಓದಿ: ಮಾಜಿ ಸಿಎಂ ಎಸ್. ಎಂ.ಕೃಷ್ಣಾಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ


ಇದರ ಜೊತೆಗೆ ಜಾರಕ ಬಂಡೆ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಮತ್ತೊಂದು ಪಾರ್ಕ್ ನಿರ್ಮಾಣ ಆಗಲಿದೆ. ಈ ಜಾಗ ಸಾರ್ವಜನಿಕರಿಗೆ ಉಳಿಯಬೇಕು ಅಂತಾ ಪಾರ್ಕ್ ಮಾಡುತ್ತಿದ್ದೇವೆ. 184 ಎಕರೆಯಲ್ಲಿ ಯಾವುದೇ ರೈತರ ಜಮೀನು ಇಲ್ಲ. ಪೂರ್ತಿ ಸರ್ಕಾರಿ ಜಮೀನು‌ ಇದೆ. ಬೃಹತ್ ಕೆರೆ, ಆಂಫೀ ಥಿಯೇಟರ್ ಸಹ ಇರಲಿದೆ. ನಾನು ಮತ್ತು ಮುನಿರತ್ನ ಬೆಂಗಳೂರಿನವರಾಗಿದ್ದು, ಬೆಂಗಳೂರಿನ ಜನರ ಋಣ ತೀರಿಸಲು ಈ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.


ಇದನ್ನೂ ಓದಿ: ‘ಗಾಂಧಿ’ ಎಂಬ ಉಪನಾಮವನ್ನು ಕದ್ದ ಈ ವಿದೇಶಿ ಕೈಗೊಂಬೆ ಈಗ ‘ಗಾಂಧೀಜಿ’ಯ ಉಲ್ಲೇಖ ಕದಿಯಲು ಯತ್ನಿಸುತ್ತಿದೆ!-ಬಿಜೆಪಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.