Rahul Gandhi : ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಅವರ ಗಾಂದಿ ಎಂಬ ಉಪನಾಮದ ಕುರಿತು ಟ್ವೀಟ್ ಮಾಡಿದ ಬಿಜೆಪಿ "ಗಾಂಧಿ ಎಂದು ಉಪನಾಮವನ್ನು ಕದ್ದಿರುವ ವಿದೇಶಿ ಕೈಗೊಂಬೆ ಈಗ ಗಾಂಧೀಜಿಯ ಉಲ್ಲೇಖಗಳನ್ನು ಕದಿಯಲು ಯತ್ನಿಸುತ್ತಿದೆ, ನೀವು ಎಷ್ಟು ಸುಳ್ಳು ಹೇಳಿದರೂ, ನೀವು ಶಾಶ್ವತವಾಗಿ ಅಪರಾಧಿ ಮತ್ತು ಅಪರಾಧಿಯಾಗಿ ಉಳಿಯುತ್ತೀರಿ" ಎಂದು ಆಕ್ರೋಶ ವ್ಯಕ್ತ ಪಡಿಸಿದೆ.
2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪೂರ್ವ ಪ್ರಚಾರದ ಭಾಷಣದಲ್ಲಿ ರಾಹುಲ್ ಗಾಂಧಿಯವರು ವಿವಾದಿತ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಲಾಗಿದೆ. 'ಈ ದೇಶದ ಎಲ್ಲಾ ಕಳ್ಳರು 'ಮೋದಿ' ಎಂಬ ಸಾಮಾನ್ಯ ಸರ್‌ನೇಮ್ ಅನ್ನು ಹೇಗೆ ಹೊಂದಿದ್ದಾರೆ?' ಎಂದು ರಾಹುಲ್ ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಲೋಕಸಭೆ ಚುನಾವಣೆಗೂ ಮುನ್ನ ನೀಡಿದ್ದರು.
ಇದನ್ನೂ ಓದಿ-ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀ ವಿಧಿವಶ
This foreign puppet who had stolen the surname ‘Gandhi’, is now trying to steal ‘Gandhiji’s’ Quote!
No matter how much you lie, you will remain a convict and criminal forever @RahulGandhi!#VideshiKaiGombe https://t.co/S0cFzoaiSc
— BJP Karnataka (@BJP4Karnataka) March 23, 2023
2019 ರ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ತಪ್ಪಿತಸ್ಥರೆಂದು ಸಾಬೀತಾಗಿದೆ. ರಾಹುಲ್ ಗಾಂಧಿ ಅವರು 'ಮೋದಿ' ಸರ್‌ನೇಮ್ ಬಗ್ಗೆ ಮಾಡಿದ ಟೀಕೆಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ-ಅಕ್ರಮ ಹಣ ಸಾಗಾಟ, ಅಂದಾಜು 1.90 ಕೋಟಿ ರೂ. ವಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.