ಧಾರವಾಡ:  ಧಾರವಾಡದ ವೀರ ಸೋಮೇಶ್ವರ ನಗರದ ನಿವಾಸಿ ಸುನಿತಾ ಭಂಗೀಗೌಡರ ಎಂಬುವವರು ತನಗೆ ಸೇರಿದ ಹುಬ್ಬಳ್ಳಿ ನಗರದ ಯಲ್ಲಾಪೂರ ಎಮ್ ಗ್ರಾಮದ, ವಾರ್ಡ ನಂ.2, ಸರ್ವೆ ನಂ.7/ಎ, ಹಿಸ್ಸಾ ನಂ.16 ರಲ್ಲಿ ಇರುವ ತನ್ನ 5 ಪ್ಲಾಟುಗಳ ನಕಾಶೆ, ವರದಿ ಮತ್ತು ಇತರೆ ದಾಖಲೆಗಳನ್ನು ಪೂರೈಸಲು ಅಗತ್ಯ ಶುಲ್ಕ ಭರಿಸಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮೋಜಣಿ ತಹಶೀಲ್ದಾರ ಕಛೇರಿ, ಮಿನಿ ವಿಧಾನಸೌದ ಹುಬ್ಬಳ್ಳಿ ಇವರಲ್ಲಿ ಕೋರಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Heart Attack: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗಲು ಈ ತರಕಾರಿ ಸೇವಿಸಿ


ಆದರೆ ಒಂದು ವರ್ಷ ಕಳೆದರೂ ತಾನು ಕೇಳಿದ ದಾಖಲೆಗಳನ್ನು ನೀಡದೆ ಅವರು ಕರ್ತವ್ಯ ಲೋಪ ಎಸಗಿ ತನಗೆ ಸತಾಯಿಸುತ್ತಿರುವುದಾಗಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹುಬ್ಬಳ್ಳಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಫಿರ್ಯಾದುದಾರರು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.


ಇದನ್ನೂ ಓದಿ : Weight Loss: ದಿನನಿತ್ಯ ಒಂದು ಕಪ್‌ ಈ ಟೀ ಕುಡಿಯಿರಿ, ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಅಗತ್ಯ ಶುಲ್ಕ ಭರಿಸಿಕೊಂಡು ಅವರಿಗೆ ದಾಖಲೆಗಳನ್ನು ಪೂರೈಸುವುದು ಲೋಕ ನೌಕರರರಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕರ್ತವ್ಯವಾಗಿದೆ. ಆದರೆ ತಮ್ಮ ಕರ್ತವ್ಯ ಪಾಲನೆಯಲ್ಲಿ ಅವರು ವಿಫಲರಾಗಿ ಗ್ರಾಹಕರ ರಕ್ಷಣಾಕಾಯ್ದೆ 2019ರ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ದೂರುದಾರರು ಕೇಳಿರುವ ದಾಖಲೆಗಳ ದೃಢಿಕೃತ ಪ್ರತಿಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಒದಗಿಸುವಂತೆ ಆದೇಶಿಸಿದೆ. ಸೇವಾ ನ್ಯೂನ್ಯತೆಯಿಂದ ಫಿರ್ಯಾದಿದಾರಳಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.20,000/- ಪರಿಹಾರ ಹಾಗೂ ರೂ.5,000/- ಪ್ರಕರಣದ ಖರ್ಚನ್ನು 30 ದಿವಸಗಳ ಒಳಗಾಗಿ ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.