ಧಾರವಾಡ : ಧಾರವಾಡದ, ತಪೋವನ ನಗರದ ನಿವಾಸಿಯಾದ ಮಹಾದೇವಿ ಮಠಪತಿ ಅನ್ನುವವರು ತಮ್ಮ ವಸತಿ ನಿಲಯಕ್ಕೆ ಸುಮಾರು ರೂ.1 ಲಕ್ಷ 18 ಸಾವಿರದ 500/- ಗಳನ್ನು ವಿನಿಯೋಗಿಸಿ ಬೆಂಗಳೂರಿನ ಅನು ಕಂಪನಿಯ ಸೋಲಾರ ವಾಟರ್ ಹೀಟರ್‍ಗಳನ್ನು ಧಾರವಾಡದ ಬನಶಂಕರಿ ಡೀಲರ್ ಕಡೆಯಿಂದ ಹಾಕಿಸಿದ್ದರು.


COMMERCIAL BREAK
SCROLL TO CONTINUE READING

ಅವುಗಳ ಬಳಕೆ ಸಮಯದಲ್ಲಿ ಆ ವಾಟರ್ ಹೀಟರ್‍ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗೂ ವಾಟರ್ ಟ್ಯಾಂಕ್‍ನಲ್ಲಿ ಲಿಕೇಜ ಇದೆ ಅಂತಾ ಅದನ್ನು ಸರಿಪಡಿಸಿಕೊಡಲು ಎದುರುದಾರರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಆದರೂ ಸದರಿ ಸೋಲಾರ್ ಕಂಪನಿ ಅಥವಾ ಡೀಲರ್‍ಗಳು ದೂರುದಾರರ ಕೋರಿಕೆಯನ್ನು ಮನ್ನಿಸಿರಲಿಲ್ಲ. ಆದ್ದರಿಂದ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅವರ ವಿರುದ್ಧಕ್ರಮ ಕೈಗೊಳ್ಳಲು ದೂರುದಾರರು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: Pregnancy Test: ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೇಗ್ನೆನ್ಸಿ ಟೆಸ್ಟ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಕೆ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭುಸಿ. ಹಿರೇಮಠ ಅವರು 2018 ರಲ್ಲಿ 500 ಲೀಟರ್ ಸಾಮಥ್ರ್ಯದ ಮೂರು ಸೋಲಾರ್ ವಾಟರ್ ಹೀಟರ್‍ಗಳನ್ನು ಎದುರುದಾರರು ಹಣ ಪಡೆದು ದೂರುದಾರರಿಗೆ ಮಾರಾಟ ಮಾಡಿದ್ದು, ವಾರಂಟಿ ಅವಧಿಯಲ್ಲಿ ನ್ಯೂನ್ಯತೆ ಕಂಡು ಬಂದಿದ್ದರೂ ಅದನ್ನು ಸರಿಪಡಿಸದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!


ಎದುರುದಾರ ಸೋಲಾರ ಕಂಪನಿ ಮತ್ತು ಡೀಲರ್‍ರವರಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ದೂರುದಾರರಿಗೆ ರೂ.50,000/- ಪರಿಹಾರ ಮತ್ತು ರೂ.5,000/- ಪ್ರಕರಣದ ಖರ್ಚು ವೆಚ್ಚ ಒಟ್ಟು ರೂ.55,000/- ಎದುರುದಾರರು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.