ಬೆಂಗಳೂರು: ಕೊರೊನಾ (Corona) ಎರಡು ಅಲೆಗಳಿಂದ ತತ್ತರಿಸಿರುವ ಜನರಿಗೆ ಮೂರನೇ ಅಲೆಯ ಭೀತಿ ಎದುರಾಗಿದೆ. ಒಂದೆಡೆ ಸೋಂಕಿನ ಭಯ ಕಾಡುತ್ತಿದ್ದರೆ, ಮತ್ತೊಂದೆಡೆ ಲಾಕ್ ಡೌನ್ ಆತಂಕ ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ಸಿಲಿಕಾನ್ ಸಿಟಿಯಲ್ಲಿ ದಿನೆ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಅದರ ಜೊತೆಗೆ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ ಏರಿಕೆಯಾಗಿದೆ. 


ಇಷ್ಟು ದಿನ ನಿರಾಳರಾಗಿದ್ದ ಬೆಂಗಳೂರಿಗರಿಗೆ ಕೊವಿಡ್ (Bangalore Corona Updates) ಮತ್ತೆ ಸಂಕಷ್ಟಕ್ಕೆ ದೂಡುತ್ತಿದೆ. ಒಮ್ಮಿಂದೊಮ್ಮೆಲೆ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆ 412ಕ್ಕೆ ಏರಿಕೆಯಾಗಿದೆ. 


ಇದನ್ನೂ ಓದಿ: UAE: ಈ ದೇಶದಲ್ಲಿಲ್ಲ ಓಮಿಕ್ರಾನ್‌ನ ಟೆನ್ಷನ್! 


ಕಳೆದ ಒಂದು ವಾರದಲ್ಲಿ ಕಂಟೈನ್ಮೆಂಟ್ ಜೋನ್ (Containment Zone) ಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ನಿರೀಕ್ಷೆಗೂ‌ ಮೀರಿ ನಗರದಲ್ಲಿ ಸೋಂಕು ಹರಡುತ್ತಿದೆ. ಬೆಂಗಳೂರಿನ ಎರಡು ವಲಯಗಳಲ್ಲಿ ಕೊರೊನಾ ಆರ್ಭಟ ಜೋರಾಗಿದೆ.


ಈ‌ ಎರಡು ವಲಯಗಳಲ್ಲೇ 243 ಕಂಟೈನ್ಮೆಂಟ್ ಜೋನ್ ಗಳನ್ನು ರಚಿಸಲಾಗಿದೆ. ಮಹದೇವಪುರ & ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್ ಗಳು ಇವೆ. 


ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್?


ಬೊಮ್ಮನಹಳ್ಳಿ   100
ಮಹದೇವಪುರ   143
ದಕ್ಷಿಣ ವಲಯ   49
ಪಶ್ಚಿಮ ವಲಯ   44
ಪೂರ್ವ ವಲಯ   33
ಯಲಹಂಕ   33
ದಾಸರಹಳ್ಳಿ‌    6
ಆರ್‌ಆರ್‌ ನಗರ     4
ಒಟ್ಟು   412  

ಇದನ್ನೂ ಓದಿ: Delta+Omicron=Deltacron:ಕೊರೊನಾ ಹೊಸ ರೂಪಾಂತರದ 25 ಪ್ರಕರಣಗಳು ವರದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.