ಬೆಂಗಳೂರು: ಕರೋನಾ ವೈರಸ್ (Coronavirus) ಎರಡನೇ  ಅಲೆ ಆರಂಭವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್, ನಿಷೇಧಾಜ್ಞೆ ಹೇರಲಾಗಿದೆ.   ರಾಜ್ಯದಲ್ಲು  ಮತ್ತೆ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲೇ   ಕೋವಿಡ್-19 (COVID-9) ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರು ಒಂದರಲ್ಲೇ 1,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 


COMMERCIAL BREAK
SCROLL TO CONTINUE READING

ವರದಿಯಾದ ಹೊಸ ಪ್ರಕರಣಗಳು ಎಷ್ಟು ? 
ನಿನ್ನೆ ರಾಜ್ಯದಲ್ಲಿ  1,715 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ (Bengaluru)  1,039 ಮಂದಿಗೆ   ಕರೋನಾ (Coronavirus) ಇರುವುದು ದೃಢಪಟ್ಟಿದೆ. ಹಾಗಾಗಿ ಬೆಂಗಳೂರಿನಲ್ಲಿ ಕಂಟೈನ್ ಮೆಂಟ್ ಜೋನ್ ಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಕಂಟೈನ್ ಮೆಂಟ್ ಜೋನ್ ಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ :  Cabinet Meeting: ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು? ಇಲ್ಲಿದೆ ನೋಡಿ ಮಾಹಿತಿ


ಬಿಬಿಎಂಪಿ (BBMP) ವಾರ್ ರೂಂ ನೀವಿರುವ್ ಮಾಹಿತಿ ಅನ್ವಯ ಎಲ್ಲೆಲ್ಲಿ ಇದೆ  ಕಂಟೈನ್ ಮೆಂಟ್ ಜೋನ್ :


ಯಲಹಂಕ ವಲಯದಲ್ಲಿ - ಐದು ಕಂಟೈನ್ ಮೆಂಟ್ ಜೋನ್ 
ದಕ್ಷಿಣ ವಲಯದಲ್ಲಿ - ಒಂದು  ಕಂಟೈನ್ ಮೆಂಟ್ ಜೋನ್, 
ಪಶ್ಚಿಮ ವಲಯದಲ್ಲಿ - ಮೂರು  ಕಂಟೈನ್ ಮೆಂಟ್ ಜೋನ್
ದಾಸರಹಳ್ಳಿಯಲ್ಲಿ -  ನಾಲ್ಕು  ಕಂಟೈನ್ ಮೆಂಟ್ ಜೋನ್
ಪೂರ್ವ ವಲಯದಲ್ಲಿ - ಎರಡು ಕಂಟೈನ್ ಮೆಂಟ್ ಜೋನ್ ಗಳಿವೆ .


ರಾಜ್ಯದಲ್ಲಿ ಪ್ರಸ್ತುತ ಶೇ.4.75 ರಷ್ಟು positive ಕೇಸ್ ಗಳಿವೆ. ಇದರಲ್ಲಿ ಬೆಂಗಳೂರಿನಲ್ಲಿ ಶೇ. 1.52ರಷ್ಟು ಪ್ರಕರಣಗಳು ದಾಖಲಾಗಿವೆ. ಈ ಮದ್ಯೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಸರ್ಕಾರ ಜನತೆಗೆ ಸೂಚನೆ ನೀಡಿದೆ. ಅಲ್ಲದೆ ಲಾಕ್ ಡೌನ್ (Lock down) ಸಾಧ್ಯತೆಗಳನ್ನು ತಳ್ಳಿ ಹಾಕಿದೆ. 


ಇದನ್ನೂ ಓದಿ :  'ಬಟ್ಟೆ ವ್ಯಾಪಾರದಲ್ಲಾದರೂ ಯಶಸ್ಸು ಸಿಗಲಿ' - ಶ್ರೀ ರಾಮುಲು ಹಾರೈಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.