ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ಉಲ್ಬಣಿಸುತ್ತಿದೆ. ಈ ಮಧ್ಯೆ ಮಂಕಿಪಾಕ್ಸ್ ಭೀತಿ ಕೂಡ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆರೋಗ್ಯ ಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ರಾಜ್ಯದ ಕೋವಿಡ್ ಪ್ರಕರಣಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆಯಲಿರುವ ಡಾ.ಕೆ.ಸುಧಾಕರ್,  ಮಂಕಿಪಾಕ್ಸ್, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ.


ಇದನ್ನೂ ಓದಿ- ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಬಿಎಂಟಿಸಿ ಸಿದ್ಧತೆ


ರಾಜ್ಯದಲ್ಲಿ ಕೋವಿಡ್-19 ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೋನಾ ಟೆಸ್ಟಿಂಗ್ ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ರ್ಯಾಂಡಮ್ ಟೆಸ್ಟ್‌ಗಳನ್ನು ಮಾಡುವಂತೆ ಸೂಚನೆ ಸಾಧ್ಯತೆ ಇದ್ದು, ಏರ್ಪೋರ್ಟ್,ರೈಲ್ವೇ ಸ್ಟೇಷನ್,ಬಸ್ ಸ್ಟಾಪ್,ಮಾಲ್‌ಗಳಲ್ಲಿ RAT ಟೆಸ್ಟ್ ಪ್ರಮಾಣ ಹೆಚ್ಚಿಸುವಂತೆಯೂ ಸೂಚಿಸುವ ನಿರೀಕ್ಷೆಯಿದೆ. 


ಇದಲ್ಲದೆ, ಗಡಿ ಜಿಲ್ಲೆಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಕಾಳಜಿ ವಹಿಸುವಂತೆ ಮತ್ತು 
ಕೋವಿಡ್ ಬೂಸ್ಟರ್ ಡೋಸ್ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆಯೂ ಸೂಚಿಸುವ ಸಾಧ್ಯತೆ ಇದೆ.


ಇದನ್ನೂ ಓದಿ- ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ- ಬಿಜೆಪಿ ರಾಜ್ಯಾಧ್ಯಕ್ಷರ ಸ್ಪಷ್ಟನೆ


ನಿನ್ನೆ ಒಂದೇ ದಿನ 1608 ಹೊಸ ಕೋವಿಡ್ ಪ್ರಕರಣ ದಾಖಲು:
ರಾಜ್ಯದಲ್ಲಿ ನಿನ್ನೆ 1608 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಈವರೆಗೆ 10790 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ಪ್ರಮಾಣ 6.29% ಇದೆ. ಬೆಂಗಳೂರು ನಗರವೊಂದಲ್ಲೇ 1098 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನಲ್ಲಿ ಅತಿಹೆಚ್ಚು ಎಂದರೆ  7333 ಆಕ್ಟಿವ್ ಕೋವಿಡ್ ಪ್ರಕರಣಗಳಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.