ಬೆಂಗಳೂರು : ರಾಜ್ಯದಲ್ಲಿ ನಿನ್ನೆ 5 ಜನರಿಗೆ ಒಮಿಕ್ರಾನ್ ಕೇಸ್ ಆತಂಕ ಹಿನ್ನೆಲೆ, ಇಂದು ವಿದೇಶದಿಂದ ಬಂದ 8 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.


COMMERCIAL BREAK
SCROLL TO CONTINUE READING

ಇಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport Bengaluru)ಕ್ಕೆ ಬಂದ ಲಂಡನ್ ಮತ್ತು ದುಬೈನಿಂದ ಬಂದ 8 ಜನ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ.


ಇದನ್ನೂ ಓದಿ : Crime: ಅಮಾಯಕ ಯುವತಿಯ ಜೀವ ತೆಗೆಯಿತು ಪಾಗಲ್ ಪ್ರೇಮಿಯ ಹುಚ್ಚಾಟ..!


ಲಂಡನ್ ನಿಂದ ಬಂದ ಒರ್ವ ಮತ್ತು ದುಬೈನಿಂದ ಬಂದ ಐವರಿಗೆ ಸೋಂಕು ದೃಡಪಟ್ಟಿದೆ. ನಗರದ ಏರ್ಪೋಟ್ ನಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಿದ ವೇಳೆ ಸೋಂಕು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.


ದಿನದಿಂದ ದಿನಕ್ಕೆ ವಿದೇಶ(Abroad)ದಿಂದ ಬರುತ್ತಿರುವ ಜನರಲ್ಲಿ ಸೋಂಕು ಹೆಚ್ಚಾಗಿದೆ. ಸಧ್ಯ ಸೋಂಕಿತರಿಗೆ ನಗರದ ಬೋರಿಂಗ್ ಆಸ್ಪತ್ರೆಯಲ್ಲಿ ಐಸುಲೇಷನ್ ಮಾಡಲಾಗಿದೆ. ಅಧಿಕಾರಿಗಳು ಸೋಂಕಿತರ ಸ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನ್ಸ್ ಗೆ ಕಳಿಸಲಿದ್ದಾರೆ.


ರಾಜ್ಯದಲ್ಲಿ ಗುರುವಾರ ಕೊರೋನಾ ಹೊಸ ಪ್ರಕರಣಗಳಲ್ಲಿ(Corona New Cases) 197 ಬೆಂಗಳೂರು ನಗರದಿಂದ ವರದಿಯಾಗಿದೆ, ಇದು ಜಿಲ್ಲೆಗಳಲ್ಲಿ ಅತಿ ಹೆಚ್ಚು. ಮೈಸೂರಿನಲ್ಲಿ 21 ಪ್ರಕರಣಗಳು, ದಕ್ಷಿಣ ಕನ್ನಡ 15, ಮತ್ತು ಕೊಡಗು ಜಿಲ್ಲೆಯಲ್ಲಿ 13 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರವು ಎರಡೂ ಸಾವುಗಳಿಗೆ ಕಾರಣವಾಗಿದೆ - ಇಬ್ಬರೂ ಕ್ರಮವಾಗಿ 78 ಮತ್ತು 59 ವರ್ಷ ವಯಸ್ಸಿನ ಪುರುಷರು. ಇಬ್ಬರಿಗೂ ಜ್ವರದಂತಹ ಕಾಯಿಲೆ ಮತ್ತು ನಿರಂತರ ಕೆಮ್ಮು ಇತ್ತು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದರು. ಬೆಂಗಳೂರಿನಲ್ಲಿ ಈವರೆಗೆ 16,374 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38,279ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ : ಇಂದಿನಿಂದ ಕನ್ನಡ ನಾಡು-ನುಡಿ- ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ


ನಿನ್ನೆ ಮಧ್ಯಾಹ್ನ 3.30ರವರೆಗೆ ರಾಜ್ಯಾದ್ಯಂತ ಸುಮಾರು 2.2 ಲಕ್ಷ ಲಸಿಕೆಗಳನ್ನು ನೀಡಲಾಯಿತು. ಎರಡನೇ ಡೋಸ್ ವ್ಯಾಪ್ತಿಯನ್ನು ಹೆಚ್ಚಿಸುವ ರಾಜ್ಯದ ನೀತಿಗೆ ಅನುಗುಣವಾಗಿ, ಗುರುವಾರ 1.6 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.