Crime: ಅಮಾಯಕ ಯುವತಿಯ ಜೀವ ತೆಗೆಯಿತು ಪಾಗಲ್ ಪ್ರೇಮಿಯ ಹುಚ್ಚಾಟ..!

Crime - ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಬಲಿಯಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ (Bengaluru) ವ್ಯಾಪ್ತಿಯಲ್ಲಿ ನಡೆದಿದೆ.

Written by - Nitin Tabib | Last Updated : Dec 17, 2021, 01:36 PM IST
  • ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ.
  • ಆತ್ಮಹತ್ಯೆಗೆ ಶರಣಾದ ಅಮಾಯಕ ಯುವತಿ.
  • ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Crime: ಅಮಾಯಕ ಯುವತಿಯ ಜೀವ ತೆಗೆಯಿತು ಪಾಗಲ್ ಪ್ರೇಮಿಯ ಹುಚ್ಚಾಟ..! title=
Girl Commits Suicide In Bengaluru (File Photo)

ಬೆಂಗಳೂರು:  Crime - ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಬಲಿಯಾಗಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ (Bengaluru) ವ್ಯಾಪ್ತಿಯಲ್ಲಿ ನಡೆದಿದೆ.

24 ವರ್ಷದ ಯುವತಿಯನ್ನ ನನ್ನ ಪ್ರೀತಿಸು, ನನ್ನ ಮದುವೆ ಮಾಡಿಕೋ ಅಂತಾ ಪಾಗಲ್ ಪ್ರೇಮಿ ಅರುಣ್ (Arun) ಎಂಬಾತ ಪೀಡಿಸುತ್ತಿದ್ದ. ಯುವತಿಗೆ ಇದು ಬಿಲ್ ಕುಲ್ ಇಷ್ಟವಿರಲಿಲ್ಲ. ಹೀಗಾಗಿ ಯುವತಿ ಪಾಗಲ್ ಪ್ರೇಮಿಯ ಮಾತಿಗೆ ತಲೆಕೆಡಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಯುವತಿ ವಿರುದ್ಧ ಹಗೆ ಸಾಧಿಸಿದ್ದ ಆರೋಪಿ ಅರುಣ್, ಮೃತ ಯುವತಿಯ ಮಾವನಿಗೆ ನಕಲಿ ಪೊಲೀಸರಿಂದ (Fake Police) ಕರೆ ಮಾಡಿಸಿದ್ದ.

ಇದನ್ನೂ ಓದಿ-ಇಂದಿನಿಂದ ಕನ್ನಡ ನಾಡು-ನುಡಿ- ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ

ಆತ್ಮಹತ್ಯೆ ಹೈಡ್ರಾಮಾ..!
ಮೃತ ಯುವತಿಯ ಮಾವನಿಗೆ ಕರೆ ಮಾಡಿದ್ದ ನಕಲಿ ಪೊಲೀಸ್, ಯುವತಿಯ ಹೆಸರು ಹೇಳಿ ಅರುಣ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಬಗ್ಗೆ ಠಾಣೆಗೆ ದೂರು ಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದ. ಆರೋಪಿ ಅರುಣ್ ಸ್ನೇಹಿತ ಗೋಪಾಲ್, ತಾನು ಬಸವೇಶ್ವರ ನಗರ ಠಾಣೆಯ (Basaveshwara Nagara Police Station) ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿದ್ದ. ಈ ವಿಚಾರ ತಿಳಿಯುತ್ತಲೇ ಆತಂಕಗೊಂಡ ಯುವತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ-ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

ಘಟನೆ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ (Pinya Police Station) ಕೇಸ್ (Crime News) ದಾಖಲಾಗಿದ್ದು, ಆರೋಪಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್ ನ ಕಂಬಿ ಹಿಂದೆ ತಳ್ಳಿದ್ದಾರೆ ಪೊಲೀಸರು. ಅದೇನೆ ಇರಲಿ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಅಮಾಯಕ ಯುವತಿ ಜೀವ ಕಳೆದುಕೊಂಡಿದ್ದು ದುರಂತದ ಸಂಗತಿಯೇ ಎಂದು ಹೇಳಬಹುದು.

ಇದನ್ನೂ ಓದಿ-ಆಶ್ರಯ ವಂಚಿತ ಮಹಿಳೆಗೆ ಸಖಿ ಕೇಂದ್ರದ ಆಸರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News