ಬೆಂಗಳೂರು : ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ, ಪೊಲೀಸ್ ಇಲಾಖೆಯಿಂದ ಫುಲ್ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸಿದ್ಧತೆ ನಡೆಸಿದೆ. ಸ್ವಯಂ ಪ್ರೇರಣೆಯಿಂದ ಪೊಲೀಸ್ ಇಲಾಖೆ ನಗರದ ಪ್ರತಿಷ್ಠಿತ ಹೊಟೇಲ್ ಗಳ ಪರಿಶೀಲನೆಗೆ ಇಳಿದಿದೆ. ಈ ವೇಳೆ ಹೊಟೇಲ್ ಗಳ ಅಸಲಿ ಸತ್ಯ ಬಯಲಾಗಿದೆ. 


COMMERCIAL BREAK
SCROLL TO CONTINUE READING

ಕೆಲವು ಪ್ರತಿಷ್ಠಿತ ಹೊಟೇಲ್ ಗಳ‌ ಸಿಸಿಟಿವಿ, ಭದ್ರತೆ ಗಳಿಗೆ ಸಂಬಂಧಿಸಿದಂತೆ ಪಬ್ಲಿಕ್ ಸೇಫ್ಟಿ ಆಕ್ಟ್ ಮುಖಾಂತರ ಪರಿಶೀಲನೆ ನಡೆಸಿದೆ. ಈ ಹೊಟೇಲ್ ಗಳಲ್ಲಿ ಕೇವಲ 2 ವಾರಗಳ ಸಿಸಿಟಿವಿ ರೆಕಾರ್ಡಿಂಗ್ ಮಾತ್ರ ಲಭ್ಯವಿದೆ. ಆದ್ರೆ, ರೂಲ್ಸ್ ಪ್ರಕಾರ 30 ದಿನಗಳ ಸಿಸಿಟಿವಿ ರೆಕಾರ್ಡಿಂಗ್ ಲಭ್ಯವಿರಬೇಕಿತ್ತು.


ಇದನ್ನೂ ಓದಿ : Cabinet meeting : ತುರ್ತು ಸಚಿವ ಸಂಪುಟ ಸಭೆ : ಪಂಚಮಸಾಲಿ - ಒಕ್ಕಲಿಗ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ


ಹೊಟೇಲ್ ನಿಯಮಗಳ ಪ್ರಕಾರ, 2 ಮೆಕಾಫಿಕ್ಸಲ್ ಕ್ಯಾಮೆರಾ, 30 ದಿನದ ಮೆಮೊರಿ ಪವರ್ ಇರಬೇಕಿದ್ದ ಸಿಸಿಟಿವಿ ಆದರೆ ಎಲ್ಲಾ ರೂಲ್ಸ್ ಗಳನ್ನು ಹೊಟೇಲ್ ಗಳು ಬ್ರೇಕ್ ಮಾಡಿ ಉದ್ಯಮ ನಡೆಸುತ್ತಿದ್ದಾರೆ. ಈ‌ ಹಿನ್ನೆಲೆ ಪ್ರತಿಷ್ಠಿತ ಹೊಟೇಲ್ ಮಾಲೀಕರ‌ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. 


ಇಂದಿರಾನಗರದಲ್ಲಿ ಕೆಲ ಹೊಟೇಲ್, ಪಬ್ ಗಳು ಸೇರಿ 3 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನಿಗದಿತ ಸಮಯದ ಮೀರಿ ಪಬ್ ಗಳು ಓಪನ್ ಮಾಡಿ ಉದ್ಯಮ ನಡೆಸುತ್ತಿದ್ದರು. ಪೋಲಿಸರು ಈ ಹಿಂದೆ ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ 4 ಕೇಸ್, ಇಂದಿರಾನಗರದಲ್ಲಿ 3 ಕೇಸ್ ದಾಖಲಿಸಿಕೊಂಡು ಹೊಟೇಲ್ ಹಾಗೂ ಪಬ್ ಮಾಲೀಕರಿಗೆ ವಿಚಾರಣೆಗೆ ಹಾಜರಿರುವಂತೆ ನೋಟಿಸ್ ನೀಡಿದ್ದಾರೆ.


ಇದನ್ನೂ ಓದಿ : ಜನಾರ್ಧನ್ ರೆಡ್ಡಿ ಅವರ ಪ್ರಾಣ ಸ್ನೇಹಿತನಾಗಿ ಒಳ್ಳೆಯದಾಗಲಿ ಅಂತ ಬಯಸುತ್ತೇನೆ : ಶ್ರೀರಾಮುಲು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.