ಬೆಳಗಾವಿ : ಸುವರ್ಣ ಸೌಧದಲ್ಲಿಂದು ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ. ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಸಾಧ್ಯತೆ ಇದೆ. ಅಲ್ಲದೆ, ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಹಾಲಿ ಒಬಿಸಿ 3ಎ,ಮತ್ತು 3ಬಿ ರದ್ದಗೊಳಿಸಿ 2ಸಿ ಮತ್ತು 2ಡಿ ರಚನೆಗೆ ತೀರ್ಮಾನ ಸಾಧ್ಯತೆ ಇದೆ. 3ಎ ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳಿವೆ. 3ಬಿ ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು ಶಿಫ್ಟ್ ಮಾಡುವ ಚಿಂತನೆ ನಡೆಯುತ್ತಿದೆ. ಇಡಬ್ಲ್ಯುಎಸ್ ಅಡಿ ರಾಜ್ಯಗಳಿಗೆ ಇರುವ ಅಧಿಕಾರ ಚಲಾಯಿಸಿ, ಪಂಚಸಾಲಿಗಳಿಗೆ ಶೇ4 ರಷ್ಟು ಮತ್ತು ಒಕ್ಕಲಿಗರಿಗೆ ಶೇ.3 ರಷ್ಟು ಮೀಸಲು ಮರು ಹಂಚಿಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ : Basavaraj Bommai : ಸಚಿವ ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್ : ಇಂದು ದೆಹಲಿಗೆ ಹೊರಟ ಸಿಎಂ!
ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳದಿಂದ ಶೇ.5 ರಷ್ಟು ಕಡಿತವಾದ ಪ್ರಮಾಣವನ್ನು ಇಡಬ್ಯ್ಲುಎಸ್ ಅಡಿಯಲ್ಲಿ ಹಂಚಿಕೆ ಮಾಡುವ ಯತ್ನ ನಡೆಸಲಗುತ್ತಿದೆ. ಅಂತೆಯೇ ಮೀಸಲಾತಿ ಮರು ಹಂಚಿಕೆಯಿಂದಲೂ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.66 ಕ್ಕೆ ಹೆಚ್ಚಳವಾಗಲಿದೆ.
ಎಸ್.ಸಿ - ಶೇ. 17 ರಷ್ಟು
ಎಸ್.ಟಿ - ಶೇ. 7 ರಷ್ಟು
ಪ್ರವರ್ಗ 1 : ಶೇ. 4 ರಷ್ಟು
ಪ್ರವರ್ಗ 2ಎ : ಶೇ.15 ರಷ್ಟು
ಪ್ರವರ್ಗ 2ಬಿ : ಶೇ.4 ರಷ್ಟು
ಪ್ರವರ್ಗ 2ಸಿ : ಶೇ. 7 ರಷ್ಟು
ಪ್ರವರ್ಗ 2ಡಿ : ಶೇ. 9 ರಷ್ಟು
ಇಡಬ್ಲ್ಯುಡಿ ಬ್ರಾಹ್ಮಣ, ಆರ್ಯ, ವೈಶ್ಯ ನಾಯರ್, ಮೊದಲಿಯಾರ್ ಗಳ ಮೀಸಲಾತಿ ಶೇ.3 ಕ್ಕೆ ಕಡಿತ ಮಾಡಲಾಗುತ್ತಿದೆ.
ಇದನ್ನೂ ಓದಿ : ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.