ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಐಐಎಸ್ ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ ಮತ್ತು ಏಕೈಕ ICMR ಅನುಮೋದಿತ ಮೊಬೈಲ್ ಆರ್ ಟಿ-ಪಿಸಿಆರ್ COVID-19 ಟೆಸ್ಟ್  ಲ್ಯಾಬಿಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರು ಐಐಎಸ್ ಕ್ಯಾಂಪಸ್ ನಲ್ಲಿ ಚಾಲನೆ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದರು.


ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸುತ್ತಿರುವ ಯಡಿಯೂರಪ್ಪ


COMMERCIAL BREAK
SCROLL TO CONTINUE READING

ಇದು ಬಯೋ ಸುರಕ್ಷತೆ ಪ್ರಮಾಣೀಕರಣ ಹೊಂದಿರುವ ಅತ್ಯಂತ ಸುಸಜ್ಜಿತ ಮೊಬೈಲ್  ‌ಕೋವಿಡ್ -19 (Covid 19) ಟೆಸ್ಟ್  ಲ್ಯಾಬ್ ಆಗಿದ್ದು ಕೇವಲ 4 ಗಂಟೆಗಳಲ್ಲಿ ಟೆಸ್ಟ್ ವರದಿ ಪಡೆಯಬಹುದಾಗಿದೆ. ದಿನಕ್ಕೆ ಸುಮಾರು 400 ಟೆಸ್ಟ್ ನಡೆಸುವ ಸಾಮರ್ಥ್ಯ ಹೊಂದಿರುವ ಈ ಲ್ಯಾಬ್ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಟೆಸ್ಟ್ ನಡೆಸಲು ಬಳಸಬಹುದಾಗಿದೆ. 


ಹೆಲ್ತ್ ಬುಲೆಟಿನ್ ರಿಲೀಸ್: ಯಡಿಯೂರಪ್ಪ ಓಕೆ, ಸಿದ್ದರಾಮಯ್ಯಗೆ ಸ್ವಲ್ಪ ಸಮಸ್ಯೆ


ಐಐಎಸ್ ಸಿ ನಿರ್ದೇಶಕರು, ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಡಾ. ಸಚ್ಚಿದಾನಂದ ಅವರು ಉಪಸ್ಥಿತರಿದ್ದರು.