ಬೆಂಗಳೂರು: ಪ್ರತಿದಿನ ಸಂಜೆ ಪ್ರಕಟವಾಗುತ್ತಿದ್ದ ಆರೋಗ್ಯ ಇಲಾಖೆಯ COVID-19 ಅಂಕಿ ಅಂಶಗಳನ್ನು ಒಳಗೊಂಡ ಹೆಲ್ತ್ ಬುಲೆಟಿನ್ (COVID-19 Health Bulletin) ಇಂದಿನಿಂದ ಸಿಗುವುದಿಲ್ಲ. ಹೆಲ್ತ್ ಬುಲೆಟಿನ್ ಗೆ ಅಂಕಿ ಅಂಶಗಳನ್ನು ನೀಡದಿರಲು ಸರ್ಕಾರಿ ವೈದ್ಯಾಧಿಕಾರಿಗಳು  ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ವೈದ್ಯಾಧಿಕಾರಿಗಳು ಇಂತಹ ಕಠಿಣ ನಿರ್ಧಾರಕ್ಕೆ ಬರಲು ರಾಜ್ಯ ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಧೋರಣೆಯ ಕಾರಣ ಎನ್ನಲಾಗಿದೆ. THO ನಾಗೇಂದ್ರ ಸಾವಿನ ಪ್ರಕರಣ ಆದ ಮೇಲೂ ಸರ್ಕಾರ  ವೈದ್ಯಾಧಿಕಾರಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಒತ್ತಡವನ್ನು ಹೇರುತ್ತಲೆ ಇದೆ. ಈ ರೀತಿ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಹಾಗೂ ವೇತನ ತಾರತಮ್ಯವನ್ನು ಕೊನೆಗಾಣಿಸಬೇಕೆಂದು ವೈದ್ಯಾಧಿಕಾರಿಗಳು ಆಗ್ರಹಿಸಿದ್ದಾರೆ. ಆದರೆ ವೈದ್ಯಾಧಿಕಾರಿಗಳ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದುದರಿಂದ ವೈದ್ಯಾಧಿಕಾರಿಗಳು ಇಂದಿನಿಂದ COVID-19 ಪ್ರಕರಣಗಳ ಅಂಕಿ ಅಂಶಗಳನ್ನು ನೀಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಕೋವಿಡ್ 19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ


ವೈದ್ಯಾಧಿಕಾರಿಗಳ ಈ ನಿರ್ಧಾರದಿಂದಾಗಿ ಇಂದಿನಿಂದ ಇಡೀ ರಾಜ್ಯಾದ್ಯಂತ ನಡೆಸಿದ COVID-19 ಪರೀಕ್ಷೆಗಳ ಮಾಹಿತಿಯಾಗಲಿ COVID-19 ಪಾಸಿಟಿವ್ ಬಂದವರ, ಗುಣಮುಖರಾದವರ, ಸಕ್ರೀಯ ಪ್ರಕರಣಗಳ ವಿವರಗಳು ಲಭ್ಯವಾಗುವುದಿಲ್ಲ.


ವೈದ್ಯರಿಗಾಗಿ ಮೊಂಬತ್ತಿ ಬೆಳಗಿ ಎಂದು ಬೊಗಳೆ ಬಿಟ್ಟ ಸರ್ಕಾರ, ಜೊತೆಗೆ ಅಬ್ಬರದಲ್ಲಿ ಪರಿಹಾರ ಘೋಷಿಸಿದ ಸರ್ಕಾರ ಈವರೆಗೂ COVID-19 ವಿರುದ್ಧ ಹೋರಾಡುತ್ತಾ ಪ್ರಾಣ ಕಳೆದುಕೊಂಡ ವೈದ್ಯಕೀಯ ಸಿಬ್ಬಂದಿಗೆ ಅರ್ತಾಥ್ ಕೊರೊನಾ ವಾರಿಯರ್ಸ್ (Corona Warriors) ಪರಿಹಾರ ಧನವನ್ನೇ ನೀಡಿಲ್ಲ. 


ಈ ರಾಜ್ಯದಲ್ಲಿ ಅಪಾಯಕಾರಿಯಾಗಿ ಹರಡುತ್ತಿದೆ ಕರೋನಾ ಮಹಾಮಾರಿ


ಆದುದರಿಂದ ವೈದ್ಯಾಧಿಕಾರಿಗಳು ಕೂಡಲೇ ಪರಿಹಾರ ಧನವನ್ನು COVID-19ಗೆ ಬಲಿಯಾದ ಕೊರೊನಾ ವಾರಿಯರ್ಸ್ ಕುಟುಂಬಗಳಿಗೆ ನೀಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಇದೇ ಹಿನ್ನಲೆಯಲ್ಲಿ ಇದೇ ತಿಂಗಳ 21ರಂದು ಸಂಪೂರ್ಣವಾಗಿ ಒಪಿಡಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.