ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಬರಿ ಹಾಗೂ ಮನೆಗಳ್ಳತನ ಪ್ರಕರಣಗಳು ಕಂಟ್ರೋಲ್‍ಗೆ ಬಂದಿವೆ. ಅಂಕಿ ಅಂಶಕಗಳನ್ನು ನೋಡಿದಾಗ ಕ್ರೈಂ ರೇಟ್ ಕಡಿಮೆ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದಾರೆ. ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಸೇವಾ ಕವಾಯತು ಗೌರವ ಸ್ವೀಕರಿಸಿ ಅವರು ಮಾತನಾಡಿದರು.


COMMERCIAL BREAK
SCROLL TO CONTINUE READING

ಕಾಲೇಜು ಆವರಣದೊಳಗೆ ಡ್ರಗ್ ಸಪ್ಲೈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಕಾಲೇಜು ಬಳಿ ಪೊಲೀಸರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿರುವವರ ವಿರುದ್ಧ ಕ್ರಮವಾಗುತ್ತದೆ. ನಮ್ಮ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.‌ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: ಇಂಡೋ-ವಿಂಡೀಸ್ ಏಕದಿನ ಕದನ: ಮೊದಲ ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ


ಹೊಸದಾಗಿ ಜಾರಿಗೆ ತಂದ ನಿಯಮಗಳ ಪಾಲನೆ ಸಹ ಉತ್ತಮವಾಗಿ ನಡೆಯುತ್ತಿದೆ. ಪೊಲೀಸರ ವಿರುದ್ಧ ಕೇಳಿ ಬರುತ್ತಿರುವ ಸಾಲು ಸಾಲು ಆರೋಪಗಳ ಹಿನ್ನೆಲೆ  ಸಿಬ್ಬಂದಿಗೆ ಕಿವಿ ಮಾತು ಹೇಳಿದ ಅವರು, ಸಾರ್ವಜನಿಕರ ಜೊತೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ಪೊಲೀಸರು ಸಮಾಜದ ರಕ್ಷಕರಾಗಿದ್ದು, ನೊಂದವರ ಕಣ್ಣೀರು ಒರೆಸಿ, ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.


ಠಾಣೆಗಳಲ್ಲಿ ಲೋಕಸ್ಪಂದನ ಮೂಲಕ ದೂರುದಾರರ ಅಭಿಪ್ರಾಯ ಸಂಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಬ್ಬಂದಿ ಕೆಲಸದ ಬಗ್ಗೆ ಲೋಕಸ್ಪಂದನ ಮೂಲಕ ಅಭಿಪ್ರಾಯ ಪಡೆಯಲಾಗುತ್ತಿದೆ. ಕಳೆದ 1 ತಿಂಗಳಿಂದ ವ್ಯವಸ್ಥೆ ಮಾಡಲಾಗಿದೆ. ದೂರುದಾರರಿಂದ ಲೋಕಸ್ಪಂದನದಲ್ಲಿ ಅಭಿಪ್ರಾಯಗಳು ಹೆಚ್ಚಾಗಿ ಬರುತ್ತಿವೆ. ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.60ರಿಂದ 70ರಷ್ಟು ಮಂದಿ ಪೊಲೀಸರ ಕೆಲಸದ ಬಗ್ಗೆ ಫೈವ್ ಸ್ಟಾರ್ ನೀಡಿದ್ದಾರೆ ಎಂದು ಹೇಳಿದರು.‌


ಇದನ್ನೂ ಓದಿ: ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು


ಪೊಲೀಸರ ಬಗ್ಗೆ ಉತ್ತಮ ಸಾರ್ವತ್ರಿಕ ಅಭಿಪ್ರಾಯ ತಿಳಿದು ಬಂದಿದೆ. ಠಾಣೆಗೆ ಬಂದವರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡೋಣ, ಸಹಾಯ ಬೇಕಾದವರಿಗೆ ಕಾನೂನು ಗೌರವಿಸುವವರಿಗೆ ಸೌಜನ್ಯವಾಗಿ ವರ್ತಿಸಿ. ಬಾಧಿಸುವ ವ್ಯಕ್ತಿಗಳಿಗೆ, ಸಮಾಜಘಾತುಕರಿಗೆ ಪ್ರಳಯಾಂತಕರಾಗಿ ಕೆಲಸ ಮಾಡಬೇಕು. ಅದು ನಮ್ಮ ಕರ್ತವ್ಯ ಅದನ್ನು ಮುಂದುವರೆಸಿಕೊಂಡು ಹೋಗಿ ಎಂದು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಕಿವಿಮಾತು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.