ಬೆಂಗಳೂರು : ಅಲ್ಲಿ ಇಡೀ ಕುಟುಂಬವೊಂದು ರಾತ್ರಿಯಿಡಿ ಅಡುಗೆ ಮಾಡಿ ಬೆಳಗ್ಗೆ ಊಟಕ್ಕೆ ಕರೆದಿದ್ದ ಅಥಿತಿಗಳಿಗೆ ಬಡಿಸೋದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಇನ್ನೇನು ಅಡುಗೆ ಕೆಲಸವೆಲ್ಲ ಮುಗಿತಲ್ಲ ಎಂದು ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಅಂತಾ ಮಲಗಿದ್ದಾರೆ. ಆದ್ರೆ ಮಗುವಿಗೆ ಹಾಲು ಕಾಯಿಸೊಣ ಅಂತ ಕಿಚನ್ ನಲ್ಲಿ ಲೈಟರ್ ಆನ್  ಮಾಡಿದ್ದಾರೆ ಅಷ್ಟೇ ಮುಂದೆ ಆಗಿದ್ದು ಮಾತ್ರ ಘನಘೋರ ಘಟನೆ. ಹಾಗಾದ್ರೆ ಏನಾಯ್ತು ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.


COMMERCIAL BREAK
SCROLL TO CONTINUE READING

ಎಲ್ಲೆಂದರೆಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು, ಹಾಗೋ, ಹೀಗೋ ಬೀಳೊ ಸ್ಥಿತಿಯಲ್ಲಿರುವ ಬಾಲ್ಕನಿಯ ಗ್ರಿಲ್. ಇವೆಲ್ಲಾ ದೃಶ್ಯಗಳು ಕಂಡು‌ ಬಂದಿದ್ದು  ರಾಜಾಜಿನಗರದ ಮರಿಯಪ್ಪನ ಪಾಳ್ಯದ 5 ನೇ ಕ್ರಾಸ್ ನಲ್ಲಿ. ಹೌದು ಮನೆಯ ಮಾಲೀಕ ಮರಿಯಪ್ಪನ ಪಾಳ್ಯದಲ್ಲಿ ಮಟ್ಟನ್ ಅಂಗಡಿಯಿಟ್ಟುಕೊಂಡು ಜೀವನ‌ ಮಾಡುತ್ತಿದ್ದಾರೆ. ಇಂದು ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಸಂಬಂದಿಕರನ್ನ ಕರೆಸಿ ರಾತ್ರಿಯೆಲ್ಲ ಅಡುಗೆ ಮಾಡಿಸಿದ್ದಾರೆ.ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇವತ್ತು ಬೆಳಗ್ಗೆ ಶುಭ ಕಾರ್ಯ ನಡೆಯಬೇಕಿತ್ತು. 


ಇದನ್ನೂ ಓದಿ: ʼಮಾಡಾಳ್‌ ಲೋಕಾಯುಕ್ತ ದಾಳಿʼ... 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್..!


ಆದ್ರೆ ಬೆಳಗ್ಗೆ ಸುಮಾರು 6.10 ರ‌ ಸಮಯದಲ್ಲಿ ಹಾಲು ಕಾಯಿಸಲು ಹೋದಾಗ ಗ್ಯಾಸ್ ಲೀಕೇಜ್ ಆಗಿರೋದು ಗೊತ್ತೇ ಆಗಿಲ್ಲ .ಲೈಟರ್ ಆನ್ ಮಾಡಿದ್ದಾರಷ್ಟೆ, ಬೆಂಕಿಯ ಕಿಡಿಗೆ ಸಿಲಿಂಡರ್ ಬ್ಲಾಸ್ಟ್ ಆಗಿ ಮನೆಯಲ್ಲಿ ಮಲಗಿದ್ದ ಹದಿಮೂರು ಜನರು ‌ಗಾಯಗೊಂಡಿದ್ದಾರೆ. ಅದರಲ್ಲಿ ಆರು ಜನ ಮಹಿಳೆಯರು , ಮೂವರು ಮಕ್ಕಳು ಇದ್ದಾರೆ. ಅಜ್ಮಲ್,  ನಜೀಮ್, ರಿಯಾನ್, ಅದ್ನಾನ್, ಫಯಾಜ್, ಮೆಹರುನ್ನಿಸಾ,, ಅಜಾನ್, , ಜೈನಬ್, ಅಮೀರ್, ಜಾನ್, ಶಬನಾಜ್, ನಸೀಮಾ, ಸಲ್ಮಾ, ರೇಷ್ಮಾ ಬಾನು ಸದ್ಯ  ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.


ಇನ್ನೂ ಸ್ಟೋಟದ ಶಬ್ದಕೇಳಿದ ಸ್ಥಳೀಯರು ಓಡಿ ಬಂದು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ರೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ .ಕರೆ ಮಾಡಿ ಒಂದು‌ ಗಂಟೆಯಾದರು ಅಂಬ್ಯುಲೆನ್ಸ್ ಬಾರದೆ ಗಾಯಾಳುಗಳು ಪರದಾಡಿದ್ರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ರಾಜಾಜಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಏನೇ ಆಗಲಿ ಗ್ಯಾಸ್ ಬಳಸದ ಮನೆಗಳಿಲ್ಲ. ಆದ್ರೆ ಬಳಸುವಾಗ ಪ್ರತಿಯೊಬ್ಬರು ಸುರಕ್ಷತಾ ಕ್ರಮಗಳನ್ನ ಅನುಸರಿಸಿ.. ಇಲ್ಲವಾದ್ರೆ ಇಂತಹ ಅವಘಡಗಳು ಸಂಭವಿಸುವುದಂತೂ ಸುಳ್ಳಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.