ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಶಾಶ್ವತವಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಾನಮಾನ ದೊರಕಿಸಲು ದೇವರಾಜ ಅರಸು ಅವರು ಮಾಡಿದ ಸೇವೆ ಅಮೋಘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ಅವರು  ಇಂದು ವಿಧಾನಸೌಧದ ಪಶ್ವಿಮದ್ವಾರ ಬಳಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ 107ನೇ ಜನ್ಮದಿನದ ಪ್ರಯುಕ್ತ  ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. 


ಇದನ್ನೂ ಓದಿ: 'ಮಾನಗೆಟ್ಟವರು ಸ್ಕೂಲ್ ನ ವ್ಯಾಪಾರಕ್ಕೆ ಇಟ್ಟಿದ್ದಾರೆ'


ಹಾವನೂರು ಆಯೋಗವನ್ನು ರಚಿಸಿ ಅನುಷ್ಠಾನಕ್ಕೆ ತಂದವರು ಅವರು. ಇಡೀ ಭಾರತ ದೇಶದಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ದೇವರಾಜ ಅರಸು ಅವರದ್ದು ಎಂದರು.


ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಲರನ್ನೂ ಒಳಗೊಂಡರೆ ಮಾತ್ರ ನೈಜ ಅಭಿವೃದ್ಧಿಯಾಗುತ್ತದೆ  ಎಂಬುದು ಡಿ.ದೇವರಾಜ ಅರಸು ಅವರ ನಿಲುವಾಗಿತ್ತು.  ಅವರ ನಿಲುವಿಗೆ ಬದ್ಧರಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ.  ಕರ್ನಾಟಕ ಕಂಡ ಧೀಮಂತ ನಾಯಕ, ದಕ್ಷ ಆಡಳಿತಗಾರ, ಹಿಂದುಳಿದ ವರ್ಗಗಳ ನೇತಾರ, ರೈತ ಬಂಧು ಡಿ.ದೇವರಾಜ್ ಅರಸ್ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.


ಜನಮನದಲ್ಲಿ ಶಾಶ್ವತ ಸ್ಥಾನ ಗಳಿಸಿದ ನಾಯಕ: ಅರಸು ಅವರು ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕರ್ನಾಟಕದ ಇತಿಹಾಸದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ, ಜನಮನದಲ್ಲಿ ಶಾಶ್ವತ ಸ್ಥಾನ ಗಳಿಸಿರುವ ನಾಯಕರು. ಅವರಿಗೆ ಬಡವರ ಬಗ್ಗೆ ಇದ್ದಂಥ ಕಳಕಳಿ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಚಿಂತನೆ ಮತ್ತು ಭೂ ರಹಿರತರ ಬಗ್ಗೆ ಅವರಿಗಿದ್ದ ಪ್ರೀತಿಯಿಂದ ಹಲವಾರು ಬದಲಾವಣೆಗಳನ್ನು ಅವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೋಡಿದ್ದೇವೆ ಎಂದರು.


ಭೂ ಸುಧಾರಣೆ ಕಾಯ್ದೆಯಿಂದ ಆರ್ಥಿಕ, ಸಾಮಾಜಿಕ ನ್ಯಾಯ: ಭೂ ಸುಧಾರಣಾ ಕಾಯ್ದೆಯಡಿ ಉಳುವವನೆ ಭೂಮಿಯ ಒಡೆಯ ಎಂಬುದು ದೊಡ್ಡ ಕ್ರಾಂತಿಕಾರಿ ಚಿಂತನೆ. ಬಹಳ ವರ್ಷದ ಹೋರಾಟದ ಫಲವಾಗಿ ಕಾನೂನು ರಚಿಸಿ ಅದನ್ನು ಅನುಷ್ಠಾನಕ್ಕೆ ತಂಡ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಆರ್ಥಿಕ, ಸಾಮಾಜಿಕ ನ್ಯಾಯವನ್ನು ಭೂ ಸುಧಾರಣೆ ಕಾಯ್ದೆಯಿಂದ ತಂದಿದ್ದಾರೆ ಎಂದರು.


ಕರ್ನಾಟಕವನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದರು: ಬಡವರ ಬಗ್ಗೆ ಇದ್ದ ಕಳಕಳಿಯಿಂದ ಜನತಾ ಮನೆಗಳ ನಿರ್ಮಾಣ, ವಿದ್ಯುತ್ ನಲ್ಲಿ ರಿಯಾಯಿತಿ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಿಶೇಷ ಸವಲತ್ತುಗಳನ್ನು ನೀಡಿದರು. ರಾಜಕೀಯ ರಂಗದಲ್ಲಿ ರಾಷ್ಟ್ರ ಮಟ್ಟದಲ್ಲಿ  ಕರ್ನಾಟಕವನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದರು.  ಯಾರಿಗಾಗಿ ಇಡೀ ಸರ್ವಸ್ವವನ್ನೂ ತ್ಯಾಗ ಮಾಡಿದರೊ ಕೊನೆ ಗಳಿಗೆಯಲ್ಲಿ ಅವರುಗಳ್ಯಾರೂ ಜೊತೆಯಲ್ಲಿ ಇರದೇ ಹೋಗಿದ್ದು ದುರ್ದೈವ. ನಿಜವಾಗಿಯೂ ಈ ಬಗ್ಗೆ ನಾವು ಚಿಂತನೆ ಮಾಡಬೇಕಾದ ದುರಂತ. ಆದಾಗ್ಯೂ ದೇವರಾಜ್ ಅರಸು ಅವರ ಮಹತ್ವ ಎಂದೂ ಕಡಿಮೆಯಾಗುವುದಿಲ್ಲ. ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಕೂಡ ಹತ್ತು ಹಲವು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರಚನೆ ಮಾಡಿದೆ ಎಂದರು. 


ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನಗೂ ವೈರಸ್ ಸೇರಿಕೊಂಡಿದೆಯಾ? ಈ ಸುಲಭ ವಿಧಾನದಿಂದ ಪತ್ತೆಹಚ್ಚಿ


 ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ, ಎಸ್.ಸಿ/ ಎಸ್.ಟಿ ಯುವಕರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ದೇವರಾಜ ಅರಸು ಅವರಿಗೆ ನಿಜವಾದ ನಮನಗಳನ್ನು ಸಲ್ಲಿಸುವ ಕೆಲಸವನ್ನು ಮಾಡಿದ್ದೇವೆ. ಈ ಕೆಲಸವನ್ನು ನಿರಂತರವಾಗಿ ಮಾಡುತ್ತೇವೆ ಎಂದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.