ಹಿಂದೂ ದೇವಾಲಯದ ಹೊರಭಾಗದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

Mahatma Gandhi statue : ಆರು ಅಪರಿಚಿತ ವ್ಯಕ್ತಿಗಳ ಗುಂಪು ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್‌ನ ಹಿಂದೂ ದೇವಾಲಯವೊಂದರಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಭಾರತವು ಶುಕ್ರವಾರ ಈ "ಹೇಯ ಕ್ರಮ" ವನ್ನು ಬಲವಾಗಿ ಖಂಡಿಸಿದೆ.

Written by - Chetana Devarmani | Last Updated : Aug 20, 2022, 02:00 PM IST
  • ನ್ಯೂಯಾರ್ಕ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
  • ಹಿಂದೂ ದೇವಾಲಯದ ಹೊರಭಾಗದಲ್ಲಿದ್ದ ಪ್ರತಿಮೆ
  • ಕೃತ್ಯವನ್ನು ತೀವ್ರವಾಗಿ ಖಂಡಿಸಿದ ಭಾರತ
ಹಿಂದೂ ದೇವಾಲಯದ ಹೊರಭಾಗದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ  title=
ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

Mahatma Gandhi statue : ಆರು ಅಪರಿಚಿತ ವ್ಯಕ್ತಿಗಳ ಗುಂಪು ನ್ಯೂಯಾರ್ಕ್‌ನ ಹಿಂದೂ ದೇವಾಲಯವೊಂದರಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಭಾರತವು ಶುಕ್ರವಾರ ಈ "ಹೇಯ ಕ್ರಮ" ವನ್ನು ಬಲವಾಗಿ ಖಂಡಿಸಿದೆ ಮತ್ತು ಈ ಕೃತ್ಯಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು US ಅಧಿಕಾರಿಗಳೊಂದಿಗೆ ಚರ್ಚಿಸಿದೆ. ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆಯು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ಆಗಸ್ಟ್ 16 ರಂದು ಆರು ಅಪರಿಚಿತ ಪುರುಷ ವ್ಯಕ್ತಿಗಳ ಗುಂಪು ತುಳಸಿ ಮಂದಿರದ ಮುಂಭಾಗದಲ್ಲಿ ಸುತ್ತಿಗೆಯಿಂದ ಧಾರ್ಮಿಕ ಪ್ರತಿಮೆಯನ್ನು ಧ್ವಂಸಗೊಳಿಸಿತು ಎಂದು ಪೊಲೀಸರಿಗೆ ವರದಿಯಾಗಿದೆ. ಪ್ರತಿಮೆ ಧ್ವಂಸಗೊಳಿಸಿದ ಬಳಿಕ ವ್ಯಕ್ತಿಗಳು ಲಿಬರ್ಟಿ ಅವೆನ್ಯೂ ಕಡೆಗೆ ಓಡಿಹೋದರು ಮತ್ತು ಬಿಳಿ ಮೆರ್ಸಿಡೆಸ್ ಕಾರು ಮತ್ತು ಟೊಯೊಟಾ ಕಾರ್ಮಿ ಎರಡು ವಾಹನಗಳಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು 25 ರಿಂದ 30 ವರ್ಷಗಳ ನಡುವಿನವರಾಗಿದ್ದರು. 

ಇದನ್ನೂ ಓದಿ: Explainer : ಶ್ರೀಲಂಕಾದಲ್ಲಿ ಚೀನಾದ ʻಸ್ಪೈ ಶಿಪ್‌ʼ ಇರೋದು ಭಾರತಕ್ಕೆ ಅಪಾಯವೇ?

ಹಿಂದೂ ದೇವಾಲಯದ ಸಮೀಪ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಒಂದೇ ತಿಂಗಳಲ್ಲಿ ಎರಡು ಬಾರಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಶುಕ್ರವಾರ ವರದಿಯಾಗಿದೆ. ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಪ್ರಿಮೆಯನ್ನು ಧ್ವಂಸ ಮಾಡಿದ್ದಲ್ಲದೇ, ಕೆಟ್ಟ ಬೈಗುಳವನ್ನು ಪ್ರತಿಮೆ ಮೇಲೆ ಮತ್ತು ರಸ್ತೆಯುದ್ದಕ್ಕೂ ಬರೆದಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಯುಎಸ್‌ನ ನ್ಯೂಯಾರ್ಕ್‌ನ ಭಾರತೀಯ ರಾಯಭಾರಿ ಕಚೇರಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಮೆರಿಕದ ಅಧಿಕಾರಿಗಳಿಗೆ ಭಾರತ ಮನವಿ ಮಾಡಿದೆ.  

ಇದನ್ನೂ ಓದಿ: ಅಕ್ರಮ ವಲಸಿಗರು ಪಾಕ್‌ಗೆ ವಾಪಸ್! ವಿಶೇಷ ಒಪ್ಪಂದಕ್ಕೆ UK ಸರ್ಕಾರ ಸಹಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News