`ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ`
ನನ್ನ ಮಗಳ ನಿಶ್ಚಿತಾರ್ಥ ಇದ್ದಾಗ ಮನೆಗೆ ಬಂದು ನೋಟಿಸ್ ಕೊಡ್ತಾರೆ
ಕಲಬುರಗಿ: ನನ್ನ ಮಗಳ ನಿಶ್ಚಿತಾರ್ಥ ಇದ್ದಾಗ ಮನೆಗೆ ಬಂದು ನೋಟಿಸ್ ಕೊಡ್ತಾರೆ, ನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(D.K.Shivakumar) ಅವರು ಸಿಬಿಐ ಮತ್ತೆ ನೋಟಿಸ್ ನೀಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ನಮ್ಮ ಅಭಿಮಾನಿಗಳು ಯಾರು ಸಿಬಿಐ ಆಫೀಸ್ಗೆ ಬರಬಾರದು. ಯಾರು ಕೂಡ ನನ್ನ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು. ರಾಜಕೀಯ ದ್ವೇಷ ಉಕ್ಕಿ ಹರಿಯುತ್ತಿದೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದರು.
‘ನಿವಾರ್ ಚಂಡಮಾರುತ ಪರಿಣಾಮ': ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ!
ಇನ್ನು ಸಾಮಾನ್ಯ ನಾಗರಿಕನಾಗಿ ಕಾನೂನಿನ ಚೌಕಟ್ಟಿನಲ್ಲೆ ಉತ್ತರ ಕೊಡುತ್ತೇನೆ. ಯಾವ ಶಾಸಕರ ಮೇಲು ಸಿಬಿಐ ತನಿಖೆಗೆ ಕೊಟ್ಟಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.
ಬಿಎಸ್ ವೈ ಸರ್ಕಾರದಿಂದ ಪಡಿತರ ಚೀಟಿದಾರರಿಗೊಂದು 'ಗುಡ್ ನ್ಯೂಸ್'
ಸದ್ಯ ಎಲ್ಲಾ ಶಾಸಕರುಗಳ ಅಫಿಡಿವೆಟ್ ತೆಗೆದುಕೊಳ್ತಾರೆ ಯಾರ ಆಸ್ತಿಯು ಹೆಚ್ಚಾಗಿಲ್ವಾ? ಅವರು ಯಾರನ್ನು ಕೂಡ ಸಿಬಿಐ ತನಿಖೆ ಮಾಡೋದಕ್ಕೆ ಮುಂದಾಗಿಲ್ಲ. ಮಗಳ ನಿಶ್ಚಿತಾರ್ಥ ದಿನ ಮನೆಯ ಬಾಗಿಲಿಗೆ ಬಂದು ನೋಟಿಸ್ ಕೊಡುತ್ತಾರೆ. ಒಂದು ವರ್ಷದಿಂದ ಸುಮ್ಮನಿದ್ದು ಮನೆಯ ಕಾರ್ಯಕ್ರಮ ಇದ್ದಾಗಲೇ ಬರಬೇಕಾ? ಎಂದು ಪ್ರಶ್ನೆ ಮಾಡಿದರು.
ರಾಜ್ಯಸಭೆ ಬೈಎಲೆಕ್ಷನ್ ನಲ್ಲಿ ಅವಿರೋಧ ಆಯ್ಕೆಯಾದ ಕೆ.ನಾರಾಯಣ್!
ನನ್ನ ಮೇಲೆ ಎಫ್ಐಆರ್ ಹಾಕಿದ್ದೆ ರಾಜಕೀಯ ಪ್ರೇರಿತ. ಯಾವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ. ರಾಜಕಾರಣ ನೊಂದವರಿಗೆ ಸಹಾಯ ಮಾಡುವಂತಿರಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
'ಡಿಸಿಎಂ ಗೋವಿಂದ ಕಾರಜೋಳ ಅವರು ಸಿಎಂ ಆದ್ರೆ ನಮ್ಮದೇನೂ ಅಭ್ಯಂತರವಿಲ್ಲ'