ರಾಜ್ಯಸಭೆ ಬೈಎಲೆಕ್ಷನ್ ನಲ್ಲಿ ಅವಿರೋಧ ಆಯ್ಕೆಯಾದ ಕೆ.ನಾರಾಯಣ್!​ 

ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿಯ ಡಾ. ಕೆ.ನಾರಾಯಣ್ ಅವಿರೋಧ ಆಯ್ಕೆ

Last Updated : Nov 23, 2020, 07:28 PM IST
  • ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿಯ ಡಾ. ಕೆ.ನಾರಾಯಣ್ ಅವಿರೋಧ ಆಯ್ಕೆ
  • ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿಸೆಂಬರ್ 1ರಂದು ಮತದಾನದ ದಿನಾಂಕವನ್ನೂ ಘೋಷಣೆ ಮಾಡಲಾಗಿತ್ತು
  • ಯಾವ ಅಭ್ಯರ್ಥಿಯೂ ನಾಪತ್ರ ಸಲ್ಲಿಸಿದ ಕಾರಣ ಬಿಜೆಪಿಯ ಡಾ. ಕೆ. ನಾರಾಯಣ ಅವರು ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ
ರಾಜ್ಯಸಭೆ ಬೈಎಲೆಕ್ಷನ್ ನಲ್ಲಿ ಅವಿರೋಧ ಆಯ್ಕೆಯಾದ ಕೆ.ನಾರಾಯಣ್!​  title=

ಬೆಂಗಳೂರು: ಅಶೋಕ್​ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿಯ ಡಾ. ಕೆ.ನಾರಾಯಣ್ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಜೆಪಿ(BJP)ಯಿಂದ ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್ ಗಸ್ತಿ ಕರೊನಾ ಸೋಂಕಿನಿಂದ ಇತ್ತೀಚಿಗೆ ಮೃತಪಟ್ಟಿದ್ದರು. ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿಸೆಂಬರ್ 1ರಂದು ಮತದಾನದ ದಿನಾಂಕವನ್ನೂ ಘೋಷಣೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಉದ್ಯಮಿ ನಾರಾಯಣ್ ನಾಮಪತ್ರ ಸಲ್ಲಿಸಿದ್ದರು. 

'ಡಿಸಿಎಂ ಗೋವಿಂದ ಕಾರಜೋಳ ಅವರು ಸಿಎಂ ಆದ್ರೆ ನಮ್ಮದೇನೂ ಅಭ್ಯಂತರವಿಲ್ಲ'

ಸೋಮವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಯಾವ ಅಭ್ಯರ್ಥಿಯೂ ನಾಪತ್ರ ಸಲ್ಲಿಸಿದ ಕಾರಣ ಬಿಜೆಪಿಯ ಡಾ. ಕೆ. ನಾರಾಯಣ ಅವರು ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು. 

SSLC - PUC ವಿದ್ಯಾರ್ಥಿಗಳ ಗಮನಕ್ಕೆ: ಶೀಘ್ರದಲ್ಲಿ ಪ್ರಕಟವಾಗಲಿದೆ ಪರೀಕ್ಷಾ ದಿನಾಂಕ!

ಉಪ ಚುನಾವಣೆಯ ಚುನಾವಣಾಧಿಕಾರಿ, ಕರ್ನಾಟಕ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದರು. ಡಾ. ಕೆ. ನಾರಾಯಣ ಅವರು ವಿಶಾಲಕ್ಷಿ ಅವರಿಂದ ಪ್ರಮಾಣ ಪತ್ರ ಸ್ವೀಕಾರ ಮಾಡಿದರು.

ಸದ್ಯಕ್ಕೆ ಶಾಲೆ ಆರಂಭ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನವೆಂಬರ್ 18ರಂದು ರಾಜ್ಯಸಭೆ ಉಪ ಚುನಾವಣೆ ಅಭ್ಯರ್ಥಿ ಡಾ. ಕೆ. ನಾರಾಯಣ ಅವರಿಗೆ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿ-ಫಾರಂ ವಿತರಣೆ ಮಾಡಿದ್ದರು. ಅಂದೇ ನಾಮಪತ್ರವನ್ನು ಸಲ್ಲಿಸಲಾಗಿತ್ತು.

ಯಡಿಯೂರಪ್ಪಗೆ ರೈತರ ಹಿತಕ್ಕಿಂತ ಸರ್ಕಾರ ಉಳಿಸಿಕೊಳ್ಳೋದೇ ಮುಖ್ಯವಾಗಿದೆ: ಡಿ.ಕೆ. ಶಿವಕುಮಾರ್

Trending News