ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಅಚಿವ ಡಾ.ಜಿ. ಪರಮೇಶ್ವರ್ ಅವರು ಎಮಂಗಳವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆ, ಶಾಲೆ, ಆಸ್ಪತ್ರೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈ ಸಮಯದಲ್ಲಿ ಸರಕಾರಿ ರಹಮಾನಿಯಾ ಉರ್ದು ಹಿರಿಯ ಶಾಲೆ ಹಾಗೂ ತರಬೇತಿ ಕೇಂದ್ರದ ಕಟ್ಟಡದ ಸಂಪೂರ್ಣ ರಿಪೇರಿಗಾಗಿ 5 ಕೋಟಿ ರೂ. ಘೋಷಿಸಿದರು.


COMMERCIAL BREAK
SCROLL TO CONTINUE READING

ಬಿಬಿಎಂಪಿ ಪೂರ್ವ ವಲಯದಿಂದ ಶಿವಾಜಿನಗರ ಗುರುದ್ವಾರದ ಬಳಿ ಇರುವ ಮಳೆ ನೀರು ಕಾಲುವೆ ವೀಕ್ಷಿಸಿದರು. ಈ ಭಾಗದಲ್ಲೂ ಸಾಕಷ್ಟು ಹೂಳು ತುಂಬಿದ್ದನ್ನು ಗಮನಸಿದ ಅವರು ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಬಳಿಕ ಎಂ.ವಿ. ಗಾರ್ಡನ್‌ಗೆ ತೆರಳಿದ ಅವರು ಅಲ್ಲಿನ ಗ್ರಂಥಾಲಯ, ಜಿಮ್, ಅಂಗನವಾಡಿ ಸೇರಿದಂತೆ ಎಲ್ಲೆಡೆ ಪರಿಶೀಲನೆ‌ ನಡೆಸಿದರು. ಜಿಮ್ ಇದ್ದರೂ ಹೆಚ್ಚಿನ‌ ಉಪಕರಣವಿಲ್ಲದೇ ಇರುವುದನ್ನು ಗಮನಿಸಿದರು. ಈ ಜಿಮ್‌ ಸ್ಥಳದಲ್ಲಿ ಎರಡು ಅಂತಸ್ಥಿನ‌ಕಟ್ಟಡ ನಿರ್ಮಿಸಿ ಅತ್ಯಾಧುನಿಕ ಜಿಮ್, ಇ ಗ್ರಂಥಾಲಯ, ಅಂಗನವಾಡಿ ಸೇರಿದಂತೆ ಇತರೆ ಸೌಕರ್ಯವಿರುವಂತೆ ಕಟ್ಟಡ ನಿರ್ಮಿಸುವ ಭರವಸೆ ನೀಡಿದರು. 


ಇದಕ್ಕೂ ಮುನ್ನ ಗುರುದ್ವಾರ ಬಳಿ ಇರುವ ಸ್ಲಂ ಬೋರ್ಡ್‌ನಿಂದ ನಿರ್ಮಿತಗೊಂಡಿರುವ ಕಟ್ಟಡಗಳನ್ನು ಪರಿಶೀಲಿಸಿದರು. ಹಲವು ವರ್ಷಗಳ ಹಿಂದೆ ಕಟ್ಟಿರುವ ಈ ಕಟ್ಟಡ ಸಂಪೂರ್ಣ ಶಿಥಿಲಗೊಳ್ಳುವ ಹಂತಕ್ಕೆ ತಲುಪಿರುವುದರ ಬಗ್ಗೆ ಅಲ್ಲಿ ನಿವಾಸಿಗಳು ದೂರು ಸಲ್ಲಿಸಿದರು. ಈ ಕಟ್ಟಡವನ್ನು ಸ್ಲಂ ಬೋರ್ಡ್ ಹಾಗೂ ಬಿಡಿಎ ಸಹಭಾಗಿತ್ವದಲ್ಲಿ ಮರು ನಿರ್ಮಿಸುವ ಬಗ್ಗೆ ಆಶ್ವಾಸನೆ‌ ನೀಡಿದರು.‌ ಅಲ್ಲೇ ಸಮೀಪವಿದ್ದ ಮಳೆನೀರು ಕಾಲುವೆಯನ್ನೂ ವೀಕ್ಷಿಸಿದರು. ಕಾಲುವೆ ಅವಸ್ಥೆಯಿಂದ ಬೇಸರಗೊಂಡ ಅವರು ರಾಜಕಾಲುವೆ ಹಾಗೂ ನೀರು ಕಾಲುವೆಯನ್ನು ನಿರ್ವಹಣೆ ಮಾಡಲು ಪ್ರತ್ಯೇಕ‌ ಅಧಿಕಾರಿ ನೇಮಿಸುವ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹಲಸೂರು ಕೆರೆಗೆ ಭೇಟಿ ನೀಡಿದ ಅವರು, ಹಲಸೂರು ಕೆರೆ ಮೇಲ್ದರ್ಜೆಗೇರಿಸುವ‌ ಯೋಜನೆಯ ನೀಲನಕ್ಷೆಯನ್ನು ಪ್ರದರ್ಶಿಸಿದರು.


ಬಳಿಕ ಶಿವಾಜಿನಗರದಲ್ಲಿರುವ ಸರಕಾರಿ ರಹಮಾನಿಯಾ ಉರ್ದು ಹಿರಿಯ ಶಾಲೆ ಹಾಗೂ ತರಬೇತಿ ಕೇಂದ್ರಕ್ಕೆ ಭೇಟಿ ಕೊಟ್ಟ ಅವರು ಶಾಲೆ ಸಂಪೂರ್ಣ ಹಾಳಾಗಿರುವುದನ್ನು ಗಮನಿಸಿದರು. ಮಕ್ಕಳೊಂದಿಗೆ ಶಾಲೆಯಲ್ಲಿ ಶಿಕ್ಷಣ ಯಾವ ರೀತಿ ನೀಡಲಾಗುತ್ತಿದೆ ಎಂಬುದರ ಬಗ್ಗೆಯೂ ಕೇಳಿ ಮಾಹಿತಿ ಪಡೆದರು. 


ಈ ಶಾಲೆ ಹಾಗೂ ತರಬೇತಿ ಕೇಂದ್ರದ ಕಟ್ಟಡ ಕೂಡ ಸಂಪೂರ್ಣ ಹಾಳಾಗಿತ್ತು. ಇದರ ರಿಪೇರಿಗಾಗಿ ತಮ್ಮ ನಿಧಿಯಿಂದಲೇ 5 ಕೋಟಿ ರೂ. ನೀಡುವುದಾಗಿ ಪರಮೇಶ್ವರ್ ಸ್ಥಳದಲ್ಲೇ ಘೋಷಿಸಿದರು.